Search
  • Follow NativePlanet
Share
ಮುಖಪುಟ » ಸ್ಥಳಗಳು» ಚಂಬಲ್ ವನ್ಯಧಾಮ

ಚಂಬಲ್ ವನ್ಯಧಾಮ

14

ರಾಷ್ಟ್ರೀಯ ಚಂಬಲ್ ವನ್ಯಧಾಮವು 1979ರಲ್ಲಿ ಸ್ಥಾಪನೆಗೊಂಡಿತು. ಇದನ್ನು ರಾಷ್ಟ್ರೀಯ ಘರಿಯಲ್ ವನ್ಯಧಾಮವೆಂದು ಸಹ ಕರೆಯುತ್ತಾರೆ. ಇದು ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳು ಕೂಡುವ ತ್ರಿವೇಣಿ ಸಂಗಮದಂತಹ ಸ್ಥಳದಲ್ಲಿ ಈ ಜೈವಿಕ -ವನ್ಯಧಾಮವು ನೆಲೆಗೊಂಡಿದೆ. ಚಂಬಲ್ ನದಿಯು ಹಲವಾರು ಕೊರಕಲುಗಳನ್ನು ನಿರ್ಮಿಸಿದೆ. ಈ ಕೊರಕಲುಗಳು ಬೆಟ್ಟ ಗುಡ್ಡಗಳ ಸಾಲಿನ ಗುಂಟ ಸಾಗುತ್ತ ಮರಳಿನ ಬೀಚ್‍ಗಳನ್ನು ನಿರ್ಮಿಸಿವೆ. ಚಂಬಲ್ ನದಿಯು ಘರಿಯಲ್ ( ಮೊಸಳೆ), ಅಪರೂಪದ ಗಂಗೇಟಿಕ್ ಡಾಲ್ಫಿನ್‍ಗಳು ಮತ್ತು ದೊಡ್ಡ ಜಾತಿಯ ಮೊಸಳೆಗಳ ಆವಾಸ ಸ್ಥಾನವಾಗಿದೆ.

ಚಂಬಲ್‍ನ ಕೊರಕಲುಗಳು ಶತ ಶತಮಾನಗಳಿಂದ ಬಿದ್ದ ಮಳೆ, ಪ್ರವಾಹಗಳಿಂದ ಉಂಟಾದ ಮಣ್ಣಿನ ಸವಕಳಿಯಿಂದಾಗಿ ಉಂಟಾಗಿದೆ. ಈ ವನ್ಯಧಾಮವು ಸುಮಾರು 400 ಕಿಲೋ ಮೀಟರ್ ಗಳಷ್ಟು ವಿಸ್ತಾರವನ್ನು ಹೊಂದಿದೆ. ಇದರಲ್ಲಿ 400 ಕಿ.ಮೀ ಚಂಬಲ್ ನದಿಯ ವಿಸ್ತಾರವಾಗಿದ್ದರೆ, ಅದರಿಂದ ಹೊರಗೆ ಸುಮಾರು 1235 ಚ.ಕಿ.ಮೀ ವ್ಯಾಪ್ತಿಯ ಕಾಡು ಈ ವನ್ಯಧಾಮಕ್ಕೆ ಸೇರಿದೆ.

ಈ ವನ್ಯಧಾಮವು ಸುಮಾರು 300 ಬಗೆಯ ಸ್ಥಳೀಯ ಮತ್ತು ವಲಸೆ ಹಕ್ಕಿಗಳಿಗೆ ಆಶ್ರವನ್ನೊದಗಿಸಿದೆ. ಭಾರತೀಯ ರಣ ಹದ್ದು ಮತ್ತು ಗ್ರೇಟರ್ ಸ್ಪಾಟೆಡ್ ಹದ್ದುಗಳು ಇಲ್ಲಿ ಕಾಣಸಿಗುವುದು ವಿಶೇಷ. ಸೈಬೀರಿಯಾದಿಂದ ಬರುವ ವಲಸೆ ಹಕ್ಕಿಗಳು ಇಲ್ಲಿನ ಜೀವ ಸಂಕುಲಕ್ಕೆ ವಿಶೇಷ ಮೆರಗನ್ನು ನೀಡುತ್ತವೆ. ಈ ಕಾರಣಗಳಿಗಾಗಿ ಈ ವನ್ಯಧಾಮವನ್ನು ಪ್ರಮುಖ ಪಕ್ಷಿಧಾಮವಾಗಿ IN 122 ಎಂಬ ಪ್ರದೇಶದ ಹೆಸರಿನಲ್ಲಿ ಗುರುತಿಸಲಾಗುತ್ತದೆ. ಚಳಿಗಾಲ ಬಂತೆಂದರೆ ಇಲ್ಲಿ ಫ್ಲೆಮಿಂಗೊಗಳು, ನೀರು ಕಾಗೆಗಳು ಮತ್ತು ಕಂದು ಬಣ್ಣದ ಹಾಕ್ ಗೂಬೆಗಳನ್ನು ಸಹ ನಾವು ಇಲ್ಲಿ ನೋಡಬಹುದಾಗಿದೆ.

ಪ್ರಾಚೀನ ಉಲ್ಲೇಖಗಳ ಪ್ರಕಾರ ಚಂಬಲ್ ಚರ್ಮಣ್ಯಾವತಿ ಎಂದು ಕರೆಯಲ್ಪಡುತ್ತಿತ್ತು ಅಥವಾ ರಾಜ ರಂತಿ ದೇವನು ಮಾಡಿದ ಸಹಸ್ರ ಅಶ್ವಮೇಧ ಯಾಗಗಳ ಸಂದರ್ಭದಲ್ಲಿ ಹರಿದ ರಕ್ತದಿಂದ ಉದ್ಭವಿಸಿದ ನದಿಯಾಗಿದೆ. ಈ " ಅಪವಿತ್ರ" ಮೂಲದಿಂದ ಹುಟ್ಟಿದ ಈ ನದಿಯು ಸಹಜವಾಗಿ ಜನರನ್ನು ದೂರವಿಟ್ಟಿದೆ. ನಿಜ ಹೇಳಬೇಕೆಂದರೆ ಚಂಬಲ್ ನದಿಯು ಭಾರತದ ಅತ್ಯಂತ ಪರಿಶುಭ್ರ ನದಿಯಾಗಿದೆ.

ಚಂಬಲ್ ವನ್ಯಧಾಮಕ್ಕೆ ಭೇಟಿ ನೀಡಲು ಅತ್ಯಂತ ಸೂಕ್ತವಾದ ಅವಧಿ

ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳು ಚಂಬಲ್ ವನ್ಯಧಾಮಕ್ಕೆ ಭೇಟಿ ನೀಡಲು ಅತ್ಯಂತ ಸೂಕ್ತವಾದ ಸಮಯವಾಗಿದೆ.

ಚಂಬಲ್ ವನ್ಯಧಾಮಕ್ಕೆ ತಲುಪುವುದು ಹೇಗೆ

ಈ ವನ್ಯಧಾಮವು ನವ ದೆಹಲಿಯಿಂದ ಐದು ಗಂಟೆಗಳ ಪ್ರಯಾಣವಧಿಯಷ್ಟು ದೂರದಲ್ಲಿದೆ. ಈ ಮಾರ್ಗವು ಆಗ್ರಾ ಮೂಲಕ ಹಾದು ಹೋಗುವುದರಿಂದಾಗಿ, ನಿಮಗೆ ಸಾಧ್ಯವಾದರೆ ತಾಜ್ ಮಹಲ್‍ಗೆ ಕಿರು ಅವಧಿಯ ಭೇಟಿಯನ್ನು ನೀಡಬಹುದು. ರೈಲಿನ ಮೂಲಕ ಆಗ್ರಾದಿಂದ ಇಲ್ಲಿಗೆ 80 ಕಿ.ಮೀ ಗಳಷ್ಟು ದೂರವಾಗುತ್ತದೆ. ಚಂಬಲ್ ವನ್ಯಧಾಮಕ್ಕೆ ಸಮೀಪದ ವಿಮಾನ ನಿಲ್ದಾಣವು ಆಗ್ರಾದಲ್ಲಿದೆ.

ಚಂಬಲ್ ವನ್ಯಧಾಮ ಪ್ರಸಿದ್ಧವಾಗಿದೆ

ಚಂಬಲ್ ವನ್ಯಧಾಮ ಹವಾಮಾನ

ಉತ್ತಮ ಸಮಯ ಚಂಬಲ್ ವನ್ಯಧಾಮ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಚಂಬಲ್ ವನ್ಯಧಾಮ

  • ರಸ್ತೆಯ ಮೂಲಕ
    ಆಗ್ರಾ ಮತ್ತು ಹಸ್ತಿನಾಪುರದಿಂದ ಬಸ್ಸುಗಳ ಮೂಲಕ ನೀವು ರಾಷ್ಟ್ರೀಯ ಚಂಬಲ್ ವನ್ಯಧಾಮಕ್ಕೆ ತಲುಪಬಹುದು. ಈ ಬಸ್ಸುಗಳು ಪ್ರತಿನಿತ್ಯ ಓಡಾಡುತ್ತಿರುತ್ತವೆ. ಇವುಗಳ ದರ 75 ರಿಂದ 100 ರೂಪಾಯಿಗಳಾಗಿರುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಚಂಬಲ್ ವನ್ಯಧಾಮಕ್ಕೆ ಸಮೀಪದ ರೈಲು ನಿಲ್ದಾಣವು ಆಗ್ರಾದಲ್ಲಿದೆ. ಈ ನಿಲ್ದಾಣವು ದೇಶದ ಪ್ರಮುಖ ನಗರಗಳ ಜೊತೆಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಆಗ್ರಾವು ದೆಹಲಿಯ ಜೊತೆಗೆ ಉತ್ತಮ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲುಗಳ ಓಡಾಟವನ್ನು ಹೊಂದಿದೆ. ಆಗ್ರಾದಿಂದ ನೀವು ಈ ವನ್ಯಧಾಮಕ್ಕೆ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಆಗ್ರಾ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದ್ದು, ಈ ವನ್ಯಧಾಮದಿಂದ 90 ಕಿ.ಮೀ ದೂರದಲ್ಲಿದೆ. ಆಗ್ರಾದಿಂದ ನೀವು ಇಲ್ಲಿಗೆ ಟ್ಯಾಕ್ಸಿ ಅಥವಾ ಸಾರ್ವಜನಿಕ ಸಾರಿಗೆ ಬಸ್ಸುಗಳ ಮುಖಾಂತರ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun