ಶಾರದ ಬೌಗ ಇದೊಂದು ಸುಂದರ ಅರಮನೆಯಾಗಿದ್ದು, ಇಲ್ಲಿ ಕಚ್ ನ ರಾಜರು ವಾಸಿಸುತ್ತಿದ್ದರು. ಕಚ್ ಪ್ರದೇಶದ ಕೊನೆಯ ರಾಜನಾದ ಮದನಸಿಂಗನು 1991 ರಲ್ಲಿ ಮರಣ ಹೊಂದಿದಾಗ ಅವನು ಇಲ್ಲಿಯೇ ವಾಸವಾಗಿದ್ದನು. ನಂತರ ಈ ಅರಮನೆಯಲ್ಲಿ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ಈ ವಸ್ತು ಸಂಗ್ರಹಾಲಯದಲ್ಲಿ ಕೇವಲ ಕರಕುಶಲ ವಸ್ತುಗಳಿಲ್ಲ. ಬದಲಿಗೆ ಸುಂದರ ಹೂವುಗಳ ಮತ್ತು ಔಷಧೀಯ ಸಸ್ಯಗಳ ಆಕರ್ಷಕ ಸಂಗ್ರಹವಿದೆ. ಈ ಪ್ರದೇಶಕ್ಕೆ ಪ್ರತಿ ವರ್ಷ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಅರಮನೆಯು ಸಾರ್ವಜನಿಕರಿಗಾಗಿ ಶುಕ್ರವಾರವೊಂದನ್ನು ಹೊರತು ಪಡಿಸಿ ವಾರದ ಎಲ್ಲ ದಿನಗಳಲ್ಲೂ ತೆರೆದಿರುತ್ತದೆ.


Click it and Unblock the Notifications