ಭೀಮತಲದಲ್ಲಿರುವ ಜಾನಪದ ಸಂಸ್ಕೃತಿ ಮ್ಯೂಸಿಯಂ ಅನ್ನು ಲೋಕಶಕ್ತಿ ಸಂಗ್ರಹಾಲಯ ಅಂತಲೂ ಕರೆಯಲಾಗುತ್ತದೆ. ಪ್ರವಾಸಿಗರು ಇಲ್ಲಿ ಭೇಟಿ ನೀಡಿದಾಗ ಅತ್ಯಂತ ಹೇರಳ ಸಂಖ್ಯೆಯಲ್ಲಿ ಛಾಯಾಚಿತ್ರಗಳ ಜತೆ ಅಪಾರ ಪ್ರಮಾಣದ ಕಲಾಚಿತ್ರವನ್ನೂ ಕಾಣಬಹುದು, ಅಲ್ಲದೆ ಸಾಕಷ್ಟು ಸಂಖ್ಯೆಯ ಪ್ರಾಚ್ಯವಸ್ತುಗಳ ಸಂಗ್ರಹವೂ ಇಲ್ಲಿದೆ. ಕಲ್ಲಿನ ಕಲೆ ಕೂಡ ವಸ್ತು ಸಂಗ್ರಹಾಲಯದಲ್ಲಿ ಗಮನ ಸೆಳೆಯುತ್ತದೆ. ಇವೆಲ್ಲವೂ ಉತ್ತರಖಂಡದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಇದಲ್ಲದೆ ಇಲ್ಲಿನ ಜಾನಪದ ಕಲೆ, ಮರದ ಕೆತ್ತನೆಗಳು, ಪುರಾತನ ಹಸ್ತಲಿಪಿ, ದೇವರು-ದೇವತೆಗಳ ಶಿಲ್ಪ ಗಮನ ಸೆಳೆಯುತ್ತವೆ. ತೋಟಗಾರಿಕಾ ಉತ್ಪನ್ನ ಹಾಗೂ ವಸ್ತುಗಳು ಇಲ್ಲಿ ಖರೀದಿಗೂ ಸಿಗುತ್ತವೆ.


Click it and Unblock the Notifications