ಬಾಲ್‍ಕುಮಾರಿ ದೇವಾಲಯವು ಬೆರ್ಹಾಮ್‍ಪೂರ್ ರೈಲು ನಿಲ್ದಾಣದಿಂದ 30 ಕಿ.ಮೀ. ದೂರದಲ್ಲಿದೆ. ಈ ದೇವಾಲಯವನ್ನು ಸೇರಲು ಅತ್ಯುತ್ತಮ ರೀತಿಯೆಂದರೆ ಮೊದಲು ರೈಲಿನಲ್ಲಿ ಬೆರ್ಹಾಮ್‍ಪೂರಿಗೆ ಪ್ರಯಾಣಮಾಡಿ, ನಂತರ ಅಲ್ಲಿಂದ ಸಾರ್ವಜನಿಕ ಸಾರಿಗೆ ಅಥವ ಬಾಡಿಗೆ ಕಾರ್‌ಗಳಲ್ಲಿ ಪ್ರಯಾಣಮಾಡಬೇಕು. ದಣಿದ ಪ್ರವಾಸಿಗರಿಗೆ ಅತ್ಯಂತ ಸಮೀಪದ ಅತಿಥಿ ವಸತಿ ಸೌಕರ್ಯಗಳು 16 ಕಿ.ಮೀ. ದೂರದಲ್ಲಿರುವ ಗಿರಿಸೋಲ ಎಂಬ ಸ್ಥಳದಲ್ಲಿದೆ. ಬಹುತೇಕ ಪ್ರಯಾಣಿಕರು ಬೆರ್ಹಾಮ್‍ಪೂರಿನಲ್ಲಿ ಉಳಿದುಕೊಳ್ಳುವುದಕ್ಕೆ ಬಯಸಿ ನಂತರ ಬಾಲ್‍ಕುಮಾರಿ ದೇವಾಲಯವನ್ನು ಭೇಟಿಮಾಡುವರು. ದೇವಾಲಯವನ್ನು ಸೇರಲು ದಿಗ್ಭ್ರಮೆಯುಂಟುಮಾಡುವ 1240 ಮೆಟ್ಟಲುಗಳನ್ನು ಹತ್ತಿ ಹೋಗಬೇಕು.
ಮೆಟ್ಟಲುಗಳನ್ನು ಹತ್ತುವುದು ನಿಸ್ಸಂದೇಹವಾಗಿ ಹೆದರಿಕೆಯಾಗುವುದು ಮತ್ತು ದಣಿವೂ ಸಹ ಆಗುವುದು. ಆದರೆ ಹೀಗೆ ಹತ್ತಿಹೋಗುವುದು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ತಪಸ್ಸು ಮತ್ತು ಆರಾಧನ ಕಲ್ಪನೆಯ ಅಭ್ಯಾಸವು ಅತಿ ಪುರಾತನಕಾಲದಿಂದ ಬೆಳೆದುಬಂದಿದೆ. ನಮ್ಮ ದೇಶದಲ್ಲಿ ಅನೇಕ ದೇವಾಲಯಗಳನ್ನು ತಲುಪಲು ಕಷ್ಟಪಡಬೇಕಾಗಿದೆ ಮತ್ತು ಭೌತಿಕವಾಗಿ ದೇಹ ಹಿಂಡಿದಂತೆ ಆಗುವುದು. ಆಧ್ಯಾತ್ಮಿಕ ಜೀವನ ಮತ್ತು ಹೆಚ್ಚಿನ ತಿಳುವಳಿಕೆಗಳ ಹಾದಿ ಬಹಳ ಕಠಿಣ ಮತ್ತು ಒತ್ತಾಯ ಹೇರುವಂತಿರುತ್ತದೆ. ಪುನಃ ಚೈತನ್ಯಕೊಡುವ ಶಕ್ತಿಯುಳ್ಳ ಬಾಲ್‍ಕುಮಾರಿ ದೇವಾಲಯಕ್ಕೆ ಅದರಲ್ಲಿ ನಂಬಿಕೆ ಇರುವವರು ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಸ್ಸಾದಿಂದ ಬರುತ್ತಾರೆ. ದೇವಾಲಯವನ್ನು ಧಾರ್ಮಿಕವಾಗಿ ಮಂಗಳವಾರಗಳು ಗಮನಾರ್ಹ ದಿನವೆಂದು ಭೇಟಿಮಾಡುವ ದಿನಗಳಾಗಿವೆ.


Click it and Unblock the Notifications