ಲಖಿ ಜಂಗಲ್ ಬಟಿಂಡಾದಿಂದ 15 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ನಂಬಿಕೆಗಳ ಪ್ರಕಾರ ಗುರು ನಾನಕ್ ದೇವ್‍ಜೀರವರು ಈ ಕಾಡಿನಲ್ಲಿರುವ ಗುರುದ್ವಾರದಲ್ಲಿ ಶ್ರಿ ಜಪುಜಿ ಸಾಹಿಬ್‍ನ ಪವಿತ್ರ ಸಾಲುಗಳನ್ನು "ಒಂದು ಲಕ್ಷ" ಬಾರಿ ಪಠಣ ಮಾಡಿದರು ಎಂದು ಹೇಳಲಾಗುತ್ತದೆ. ಹಾಗಾಗಿಯೇ ಲಕ್ಷ ಎಂಬ ಅರ್ಥ ಸೂಚಿಸುವ ಲಖಿ ಜಂಗಲ್ ಎಂದು ಇದನ್ನು ಕರೆಯಲಾಗುತ್ತದೆ.
ನಂಬಿಕೆಗಳ ಪ್ರಕಾರ, ಪುರನ್‍ಮಶಿ ( ಪೌರ್ಣಿಮೆ)ಯಂದು ಇಲ್ಲಿ "ಜಪ್‍ಜಿ ಸಹಬ್"ಅನ್ನು ಪಠಣ ಮಾಡಿ, ಗುರುದ್ವಾರದಲ್ಲಿನ ಕಲ್ಯಾಣಿಯಲ್ಲಿ ತೀರ್ಥ ಸ್ನಾನ ಮಾಡುವುದರಿಂದ ತಮ್ಮ ಇಷ್ಟಾರ್ಥಗಳು ನೆರವೇರುತ್ತದೆಯೆಂದು ಹೇಳಲಾಗುತ್ತದೆ. ಇಲ್ಲಿನ ತೀರ್ಥವನ್ನು "ಅಮೃತ"ವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಸಕಲ ಕಾಯಿಲೆಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗುತ್ತದೆ. ಮತ್ತೊಂದು ಹೇಳಿಕೆಯ ಪ್ರಕಾರ ಗುರು ತೇಜ್ ಬಹದ್ದೂರ್ ಮತ್ತು ಗುರು ಗೋವಿಂದ್ ಸಿಂಗ್ ಸಹ ಇಲ್ಲಿಗೆ ಭೇಟಿ ನೀಡಿದ್ದರಂತೆ.


Click it and Unblock the Notifications