ಡಂಡಮ ಸಾಹಿಬ್ ಎಂಬ ಸ್ಥಳವು ತಾಲ್ವಂಡಿ ಸಬೊ ಎಂಬಲ್ಲಿ ನೆಲೆಗೊಂಡಿದೆ. 1705ರಲ್ಲಿ ಸಿಖ್ಖರ ಹತ್ತನೆಯ ಗುರು ಗುರು ಗೋವಿಂದ್ ಸಿಂಗ್‍ಜೀಯವರು ಸಿಖ್ಖರ ಪವಿತ್ರ ಗ್ರಂಥವಾದ ಶ್ರೀ ಗುರು ಗ್ರಂಥ್ ಸಾಹಿಬ್‍ನ ಐದು ತಖ್ತ್ ಗಳಲ್ಲಿ ಒಂದನ್ನು ಇಲ್ಲಿ ಪೂರ್ಣಗೊಳಿಸಿದರು ಎಂದು ನಂಬಲಾಗಿದೆ. ಗುರು ಗೋವಿಂದ್ ಸಿಂಗ್‍ಜೀಯವರು ಮೊಘಲರ ನಡುವಿನ ಯುದ್ಧದ ನಂತರ ಇಲ್ಲಿ ವಿಶ್ರಾಂತಿ ಪಡೆದರು ಎಂದು ಹೇಳಲಾಗುತ್ತದೆ.
ಈ ಸ್ಥಳದಲ್ಲಿ ಹತ್ತು ಗುರುದ್ವಾರಗಳು ಮತ್ತು ಮೂರು ಕಲ್ಯಾಣಿಗಳು ಇವೆ. ಇದರಲ್ಲಿ ಮೊದಲನೆಯ ಕಲ್ಯಾಣಿಯನ್ನು ನಾನಕ್ ದೇವ್‍ಜೀಯವರ ನೆನಪಿನಾರ್ಥವಾಗಿ ನಾನ್‍ಕ್ಸರ್ ಸರೋವರ್ ಎಂದು ಕರೆಯುತ್ತಾರೆ. ನಾನಕ್ ದೇವ್‍ಜೀಯವರು ರಾಜ್‍ಪುತಾನಗೆ ಪಾದಯಾತ್ರೆ ಹೋದ ಸಂದರ್ಭದಲ್ಲಿ ಇಲ್ಲಿಗೆ 1510ರಲ್ಲಿ ಭೇಟಿ ನೀಡಿದ್ದರು. ಎರಡನೆಯದನ್ನು ಗುರುಸರ್ ಸರೋವರ್ ಎಂದು ಮತ್ತು ಮೂರನೆಯದನ್ನು ಅಕಲ್ಸರ್ ಸರೋವರ್ ಎಂದು ಕರೆಯಲಾಗುತ್ತದೆ. ನಂಬಿಕೆಗಳ ಪ್ರಕಾರ ಈ ಕಲ್ಯಾಣಿಗಳ ನೀರಿನ ಒಂದು ಗುಟುಕನ್ನು ಸೇವಿಸಿದರು ನಮ್ಮ ಎಲ್ಲ ಕಾಯಿಲೆಗಳು ಮತ್ತು ಬೇನೆಗಳು ಗುಣವಾಗುತ್ತವೆಯಂತೆ.


Click it and Unblock the Notifications