ಸೀತಾ ಕಿ ರಸೋಯಿ ಎನ್ನುವುದು ರಾಜ ಮನೆತನದ ಅಡುಗೆಮನೆಕ್ಕಿಂತ ಹೆಚ್ಚಾಗಿ ಒಂದು ದೇವಸ್ಥಾನವಾಗಿದೆ. ಇದು ಅಯೋಧ್ಯಾದ ರಾಮಕೊಟ್ ನಲ್ಲಿರುವ ರಾಮ ಜನ್ಮಸ್ಥಾನದ ವಾಯುವ್ಯ ಭಾಗ ಹಾಗೂ ರಾಮ ಛಬೂತ್ರಾ ತಾರಸಿಗೆ ಸಮೀಪದಲ್ಲಿದೆ. ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಅವರ ಪತ್ನಿಯರಾದ ಸೀತಾ, ಉರ್ಮಿಳಾ, ಮಂಡವಿ ಮತ್ತು ಶ್ರೂತಿಕೀರ್ತಿ ಸಹಿತ ರಾಜಮನೆತನದ ಎಲ್ಲಾ ರಾಜಕುಮಾರರ ಮೂರ್ತಿಗಳು ಮಂದಿರದಲ್ಲಿದೆ. ಚಪಾತಿ ಮಾಡುವ ಮಣೆ ಅಥವಾ ಚಾಕ್ಲಾ ಮತ್ತು ಲಟ್ಟಣಿ ಅಥವಾ ಬೆಲ್ನಾಗಳಿರುವ ಅಡುಗೆ ಮನೆ ಸಾಂಕೇತವಾಗಿ ಒಂದು ಅಡುಗೆ ಮನೆಯಂತಿದೆ.
ಆ ಕಾಲದಲ್ಲಿ ಹೊಸದಾಗಿ ಮನೆಗೆ ಬರುವ ಸೊಸೆ ಸಂಪೂರ್ಣ ಕುಟುಂಬಕ್ಕೆ ಅಡುಗೆ ಮಾಡುವ ಪದ್ಧತಿಯಿತ್ತು. ಆದಾಗ್ಯೂ ಪುರಾಣಗಳು ಅನ್ನಪೂರ್ಣ ದೇವತೆಯಂತೆ ಸೀತಾ ಮಾತೆ ಕೇವಲ ತನ್ನ ಕುಟುಂಬಕ್ಕೆ ಮಾತ್ರವಲ್ಲ, ಸಂಪೂರ್ಣ ಮಾನವ ಕುಲಕ್ಕೆ ಅಡುಗೆ ಮಾಡಿದ್ದರು ಎಂದು ಬಣ್ಣಿಸಿವೆ. ಸೀತಾ ಕಿ ರಸೋಯಿ ಅಸ್ತಿತ್ವವನ್ನು ತೋರಿಸುವ ಮತ್ತೊಂದು ಆಸಕ್ತಿದಾಯಕ ವಿಷಯವೆಂದರೆ ಬಾಬರಿ ಮಸೀದಿಯ ಕಾಮಾನಿನ ಮೇಲೆ `ಜನ್ಮಸ್ಥಾನ್ ಸೀತಾ ಕಿ ರಸೋಯಿ' ಎಂದು ಬರೆಯಲಾಗಿದೆ. ಈ ಬರವಣಿಗೆಯನ್ನು ಮಹಾತ್ಮ ಗಾಂಧಿ ಅವರ ಮೊಮ್ಮಗ, ಭಾರತದ ಪ್ರಸಿದ್ಧ ಇತಿಹಾಸಗಾರ ಮತ್ತು ತತ್ವಜ್ಞಾನಿ ರಾಮ ಚಂದರ್ ಗಾಂಧಿ ಅವರು ಪತ್ತೆ ಹಚ್ಚಿದ್ದರು.


Click it and Unblock the Notifications