ಸರಾಯು ನದಿ ದಂಡೆಯ ಗುಪ್ತರ್ ಘಾಟ್ ನ ಫೈಜಾಬಾದ್ ನಲ್ಲಿ ಚಕ್ರ ಹರ್ಜಿ ವಿಷ್ಣು ಮಂದಿರ ಎರಡು ಕಾರಣಗಳಿಗಾಗಿ ಹಿಂದೂ ಧರ್ಮಿಯರಿಗೆ ಪೂಜ್ಯನೀಯವಾಗಿದೆ. ಮೊದಲನೇಯದಾಗಿ ಇಲ್ಲಿರುವ ವಿಷ್ಣುವಿನ ಮೂರ್ತಿಯ ಕೈಯಲ್ಲಿ ಚಕ್ರವಿದೆ. ಇದು ಯಾತ್ರಾರ್ಥಿಗಳಲ್ಲಿ ಭಯಭಕ್ತಿ ಹಾಗೂ ನಿಗೂಢತೆಯನ್ನು ಸೃಷ್ಟಿಸುತ್ತದೆ. ಸಾಮಾನ್ಯವಾಗಿ ಸುದರ್ಶನ ಚಕ್ರವೂ ಯುದ್ಧ ಕ್ಷೇತ್ರದಲ್ಲಿ ಭಗವಾನ್ ಕೃಷ್ಣ ಕೈಯಲ್ಲಿ ಮಾತ್ರ ಕಾಣಸಿಗುತ್ತದೆ. ವಿಷ್ಣು ಚಕ್ರವನ್ನು ಹಿಡಿದುಕೊಂಡಿರುವುದು ತುಂಬಾ ವಿರಳ.
ಮತ್ತೊಂದು ವಿಷಯವೆಂದರೆ ಈ ಮಂದಿರದಲ್ಲಿ ರಾಮನ ಕಾಲಿನ ಹೆಜ್ಜೆಯ ಗುರುತುಗಳಿವೆ. ಇದು ದೇವರ ಹೆಜ್ಜೆಗುರುತುಗಳಾಗಿರುವ ಕಾರಣ ಹಿಂದೂ ಧರ್ಮಿಯರಲ್ಲಿ ಪೂಜ್ಯಭಾವ ಹಾಗೂ ಭಕ್ತಿ ಮೂಡುತ್ತದೆ.ಇತರ ದೇವರುಗಳ ಮೂರ್ತಿಗಳು ಈ ಮಂದಿರದಲ್ಲಿದೆ. ಸರಾಯು ನದಿ ದಡದಲ್ಲಿರುವ ಈ ಮಂದಿರದಲ್ಲಿ ಪ್ರಶಾಂತತೆ ಹಾಗೂ ಶಾಂತಿ ನೆಲೆನಿಂತಿದೆ.


Click it and Unblock the Notifications