ಅರ್ಕಿಯ ಇನ್ನೊಂದು ನೋಡಲೇಬೇಕಾದ ಸ್ಥಳವೆಂದರೆ ದಿವಾನ್-ಇ-ಖಾಸ್. ಸಮುದ್ರಮಟ್ಟದಿಂದ 1200 ಮೀಟರ್ ಎತ್ತರದಲ್ಲಿರುವ ಇದನ್ನು ಪ್ರೇಕ್ಷಕರ ಕೊಠಡಿ ಎಂದೂ ಕರೆಯುತ್ತಾರೆ. ಇದನ್ನು ಅರ್ಕಿಯ ಆಡಳಿತಗಾರ ರಾಮ್‌ಶರಾ ಸಿಂಗ್ ಕಲೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಇದನ್ನು ಸ್ಥಾಪಿಸಿದ ಎನ್ನುತ್ತದೆ ಇತಿಹಾಸ. ಕಂಗ್ರಾ, ರಾಜಸ್ಥಾನಿ, ಆರ್ಕಿ, ಕುಲ್ಲು ಮತ್ತು ಯುರೋಪಿಯನ್ ಶೈಲಿಯ ಮ್ಯೂರಲ್ ಕಲಾಕೃತಿಗಳಿಂದ ಇದನ್ನು ಸಿಂಗರಿಸಲಾಗಿದೆ.
ಸಭಾಂಗಣದಲ್ಲಿ ಕಲಾತ್ಮಕ ಹೂ ದಾನಿಗಳು, ಹಾಗೂ ಚಿಕ್ಕ ಚಿಕ್ಕ ಪ್ರತಿಮೆಗಳನ್ನು ಓರಣವಾಗಿ ಇಡಲಾಗಿದೆ. ಗೋಲರ್ನ್ ಶೈಲಿಯ ಕಲಾಕೃತಿಗಳು ನಿಮ್ಮನ್ನು ಆಕರ್ಷಿಸುತ್ತವೆ. ಚೀನೀ ಚಿತ್ರಗಳು, ಪಂಜಾಬಿ ಜಾನಪದ ಕಲೆ, ರಾಗಿಣಿ, ಪ್ರೀತಿಯ ಕಾಮಪ್ರಚೋದಕ ದೃಶ್ಯಗಳು, ಯುದ್ಧದ ಸನ್ನಿವೇಶ, ಪ್ರಾಣಿಗಳು, ಪಕ್ಷಿಗಳು ಮತ್ತು ಪುರಾಣ ಕಥೆಗಳ ಮ್ಯೂರಲ್ ವರ್ಣಚಿತ್ರಗಳು ಇಲ್ಲಿನ ಸೊಬಗನ್ನು ಮತ್ತಷ್ಟು ಹೆಚ್ಚಿಸಿವೆ. ಒಟ್ಟಿನಲ್ಲಿ ಅರ್ಕಿ ಸಮೃದ್ಧ ಕಲಾತ್ಮಕ ಪರಂಪರೆಯ ಪರಿಪೂರ್ಣ ಪುರಾವೆಗಳನ್ನು ಒದಗಿಸುತ್ತದೆ.


Click it and Unblock the Notifications