ಅಮೃತಸರದಿಂದ 22 ಕಿ.ಮೀ. ದೂರದಲ್ಲಿರುವ ಟಾರ್ನ್ ತರನ್ ಪಂಜಾಬ್ ನಲ್ಲಿರುವ ಒಂದು ಜಿಲ್ಲೆಯಾಗಿದೆ. 5ನೇ ಸಿಖ್ ಗುರು ಅರ್ಜುನ್ ದೇವ್ ಜೀ ಅವರು ಸ್ಥಾಪಿಸಿದ ಟಾರ್ನ್ ತರನ್ ಎಂಬ ನಗರದಲ್ಲಿ ಜಿಲ್ಲೆಯ ಕೇಂದ್ರ ಕಚೇರಿಯಿದೆ. ಸಿಖ್ ಸಮುದಾಯದವರ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಈ ಟಾರ್ನ್ ತರನ್ ಸಾಹೀಬ್, ಸಾಕಷ್ಟು ಐತಿಹಾಸಿಕ ಗುರುದ್ವಾರಗಳಿಗೆ ಮನೆಯಾಗಿದೆ. ಅದರಲ್ಲಿ ಪ್ರಮುಖವಾದುದೆಂದರೆ, ದರ್ಬಾರ್ ಸಾಹೀಬ್ ಶ್ರೀ ಅರ್ಜುನ್ ದೇವ್ ಜಿ. ಇಲ್ಲಿನ ಪವಿತ್ರ ಸರೋವರ ವಿಶ್ವದಲ್ಲೇ ಅತಿದೊಡ್ಡ ಸರೋವರವೆನಿಸಿಕೊಂಡಿದೆ. ಟಾರ್ನ್ ತರನ್ ಎಂಬ ಸರೋವರದ ನಂತರ ನಗರವನ್ನು ಹಸರಿಸಲಾಗಿದೆ.


Click it and Unblock the Notifications