ವಿಶಾಲ ಎಂಬುದು ಅಹಮದಾಬಾದ್‍ನಲ್ಲಿರುವ ಸಾಂಪ್ರದಾಯಿಕ ಗುಜರಾತಿನ ಅನುಭವವನ್ನು ಪ್ರವಾಸಿಗರಿಗೆ ಒದಗಿಸಲೆಂದು ನಿರ್ಮಿಸಲಾಗಿರುವ ಒಂದು ಅಮ್ಯೂಸ್‍ಮೆಂಟ್ ಪಾರ್ಕ್ ಆಗಿದೆ. ಇಲ್ಲಿ ಮಣ್ಣಿನಿಂದ ಮಾಡಿದ ಕುಟೀರಗಳನ್ನು ನಾವು ಕಾಣಬಹುದು. ಇವುಗಳನ್ನು ಗುಜರಾತಿ ವರ್ಣಚಿತ್ರಗಳಿಂದ ಅಲಂಕರಿಸಲಾಗಿದೆ. ಇವುಗಳ ಜೊತೆಗೆ ಇಲ್ಲಿ ಮಚಾನುಗಳನ್ನು ಸಹ ನಾವು ಕಾಣಬಹುದು. ಇಲ್ಲಿನ ಗಾಳಿಯಲ್ಲಿ ಲೊಬಾನ್ (ಇದ್ದಿಲು) ಅನ್ನು ಸುಡುವ ವಾಸನೆಯನ್ನು ಸೇವಿಸಬಹುದು, ಹಾಗು ಸ್ಥಳೀಯ ಜನಪದ ಕಲಾವಿದರ ಸಂಗೀತದ ನಿನಾದವನ್ನು ನಾವು ಕೇಳಬಹುದು. ಇವು ನಿಮ್ಮನ್ನು ಒಂದು ಪ್ರಶಾಂತವಾದ ಹಳ್ಳಿಯ ವಾತಾವರಣಕ್ಕೆ ಕೊಂಡೊಯ್ದು ಬಿಡುತ್ತವೆ. ಬಾಳೆ ಎಲೆಯಲ್ಲಿ ಬಡಿಸಲಾಗುವ ಅಪ್ಪಟ ಗುಜರಾತಿ ಶೈಲಿಯ ಊಟವು ನಿಮ್ಮ ನಾಲಿಗೆಗೆ ಎಂದೆಂದು ಮರೆಯದ ರುಚಿಯನ್ನು ಉಣಿಸುತ್ತವೆ.


Click it and Unblock the Notifications