ಈ ವಸ್ತು ಸಂಗ್ರಹಾಲಯವನ್ನು ಗುಜರಾತಿನ ಜನಪದ ಕಲೆಗಳಿಗೆ ಗೌರವ ಸಲ್ಲಿಸುವ ಸಲುವಾಗಿ ನಿರ್ಮಿಸಲಾಗಿದೆ. ಗುಜರಾತಿನ ವಿವಿಧ ಸಮುದಾಯಗಳು ವಿವಿಧ ಬಗೆಯ ಜನಪದ ಕಲೆಗಳನ್ನು ಅಭಿವ್ಯಕ್ತ ಪಡಿಸುತ್ತವೆ. ಅವರ ಕಲೆಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ನಾವು ನೋಡಬಹುದು. ಗಾಜಿನ ಮೇಲೆ ಮೂಡಿದ ವರ್ಣರಂಜಿತ ಕಸೂತಿಗಳು, ಮರದ ಕೆತ್ತನೆಗಳು, ಚರ್ಮದ ಕೆಲಸಗಳು, ಹಾಸಿಗೆಗಳು, ವಸ್ತ್ರಗಳು, ಪಾತ್ರೆ ಸಾಮಾನುಗಳು, ಪ್ರಾಣಿಗಳ ಆಭರಣಗಳೂ, ಅಲಂಕಾರಿಕ ಪ್ರಾತ್ರೆ ಸಾಮಾನುಗಳನ್ನು ನಾವಿಲ್ಲಿ ಕಾಣಬಹುದು.
ಈ ಕಲಾವಸ್ತುಗಳನ್ನು ಪ್ರಮುಖವಾಗಿ ಗುಜಾರಾತಿ ಹೆಂಗಸರು ಮಾಡಿದ್ದಾರೆ. ಇಂದಿಗು ಜನಮನದಲ್ಲಿ ಅಭಿಮಾನವನ್ನು ಸಂಪಾದಿಸಿರುವ ಜನಪದ ಕಲೆಗೆ ಗೌರವ ಸಮರ್ಪಿಸುವ ಸಲುವಾಗಿ ಈ ವಸ್ತು ಸಂಗ್ರಹಾಲಯವು ಕಾರ್ಯ ನಿರತವಾಗಿದೆ. ಛಾಯಾಚಿತ್ರಗಳು ಮತ್ತು ಲೇಖನಗಳನ್ನು ಸಹ ಇಲ್ಲಿನ ಸಂಗ್ರಹದಲ್ಲಿ ನಾವು ನೋಡಬಹುದು. ಈ ವಸ್ತು ಸಂಗ್ರಹಾಲಯದ ಒಳಗಡೆ ಕಲ್ಪನಾ ಮಂಗಲ್‍ದಾಸ್ ಮಕ್ಕಳ ವಸ್ತು ಸಂಗ್ರಹಾಲಯವೆಂಬ ( ದೃಶ್ಯ ಕಲೆಯ ವಸ್ತು ಸಂಗ್ರಹಾಲಯ) ಮತ್ತೊಂದು ವಸ್ತು ಸಂಗ್ರಹಾಲಯವನ್ನು ನಾವು ಕಾಣಬಹುದು. ಈ ಸಂಗ್ರಹಾಲಯವು ನಾಟಕದ, ನೃತ್ಯದ ಮತ್ತು ವಸ್ತ್ರಗಳನ್ನು ಹೊಂದಿದೆ. ಜೊತೆಗೆ ನಾಣ್ಯಗಳು ಮತ್ತು ಹಳೆಯ ಕಾಲದ ಸಂಗೀತದ ಮುದ್ರಿಕೆಗಳನ್ನು ಹೊಂದಿದೆ. ಇಲ್ಲಿನ ಅತ್ಯುತ್ತಮವಾದ ವಸ್ತುವೆಂದರೆ 3.19 ಮೀಟರ್ ಎತ್ತರವವಿರುವ ಆನೆಯ ಅಸ್ಥಿ ಪಂಜರವಾಗಿದೆ.


Click it and Unblock the Notifications