ಇದೊಂದು ಭೂಮ್ಯಂತರ್ಗತವಾದ ಗುಹಾ ಕಲಾಶಾಲೆ. ಇದು ಕಸ್ತೂರ್ ಭಾಯ್ ಲಾಲ್‍ಭಾಯ್ ಕ್ಯಾಂಪಸ್ ಆಫ್ ಇನ್ಸಿಟ್ಯೂಟ್ ಆಫ್ ಇಂಡಾಲಜಿಯಲ್ಲಿ ನೆಲೆಗೊಂಡಿದೆ. ಇದನ್ನು ಪ್ರಸಿದ್ಧ ಸೃಜನಶೀಲ ವಾಸ್ತುಶಿಲ್ಪಿಯಾದ ಬಿ.ವಿ. ದೋಷಿಯವರು ಹಾಗು ವಿಶ್ವ ಪ್ರಸಿದ್ಧ ಚಿತ್ರಕಾರರಾದ ಎಂ.ಎಫ್. ಹುಸೇನ್‍ರವರು ಸೇರಿ ಸ್ಥಾಪಿಸಿದರು. ಇದು ವಿನ್ಯಾಸ ಮತ್ತು ಆಧುನಿಕ ಕಲೆಗಳ ಬಗ್ಗೆ ನಮ್ಮ ಗಮನವನ್ನು ಸೆಳೆಯುವ ಒಂದು ಅಪೂರ್ವವಾದ ಸಂಗ್ರಹಾಲಯವಾಗಿದೆ. ಇದರ ಗುಮ್ಮಟಗಳು ಮೊಸಾಯಿಕ್ ಟೈಲ್ಸ್ ಗಳಿಂದ ಅಲಂಕರಿಸಲ್ಪಟ್ಟಿದೆ. ಗುಫಾವು ಸೃಜನಶೀಲತೆಯಿಂದ ಕೂಡಿದ ಒಂದು ಅದ್ಭುತ ವಸ್ತುಸಂಗ್ರಹಾಲಯವಾಗಿದೆ.


Click it and Unblock the Notifications