ಸದರಮತ್ತ ಅಣೆಕಟ್ಟು ತೆಲಂಗಾಣದ ಅತ್ಯಂತ ಹಳೆಯ ನಿರ್ಮಾಣದಲ್ಲಿ ಒಂದು. ಇದನ್ನು 1891-92 ರಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ನೀರಾವರಿ ಸೌಲಭ್ಯಕ್ಕಾಗಿ ಗೋದಾವರಿ ನದಿಗೆ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಅದಿಲಾಬಾದ್ ಜಿಲ್ಲೆಯ ಕದಂ ಹಾಗೂ ಕಾನಪುರ ಮಂಡಲಗಳಿಗೆ ನೀರೊದಗಿಸುವ ಕಾರ್ಯ ಇಲ್ಲಿಂದ ಆಗುತ್ತದೆ.
ಈ ಸದರಮತ್ತ ಅಣೆಕಟ್ಟು ಜನಪ್ರಿಯ ಪ್ರವಾಸಿ ತಾಣವೂ ಹೌದು. ಇದು ಶ್ರೀರಾಮಸಾಗರ ಜಲಾಶಯದಿಂದ 50 ಕಿ.ಮೀ. ದೂರದಲ್ಲಿದೆ. ಈಗಿನ ಅಂದಾಜಿನ ಪ್ರಕಾರ ಶ್ರೀರಾಮಸಾಗರ ಜಲಾಶಯದ ಜತೆ ಈ ಅಣೆಕಟ್ಟನ್ನು ಜೋಡಿಸುವ ಯೋಜನೆ ಹೆಣೆಯಲಾಗುತ್ತಿದೆ. ಈ ಕಾರ್ಯ ಆದಲ್ಲಿ ತೆಲಂಗಾಣದ ಇನ್ನಷ್ಟು ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ.
ಸುತ್ತಲೂ ನಿಸರ್ಗದತ್ತ ಸೌಂದರ್ಯ ತುಂಬಿ ತುಳುಕುತ್ತಿರುವುದರಿಂದ ಇದೊಂದು ಪ್ರವಾಸಿ ತಾಣವಾಗಿಯೂ ಜನಪ್ರಿಯವಾಗಿದೆ. ಹಸಿರು ಹುಲ್ಲಿನಿಂದ ತುಂಬಿದ ಸಮೃದ್ಧ ವಾತಾವರಣದಲ್ಲಿ ಅಣೆಕಟ್ಟು ನಿರ್ಮಾಣಗೊಂಡಿದೆ. ಪರಿಶುದ್ಧ ನೀರು ಕಣ್ಮನ ಸೆಳೆಯುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ಸ್ಥಳೀಯರು ಹಾಗೂ ಹೊರಗಿನ ಪ್ರವಾಸಿಗರು ಇಲ್ಲಿ ನಿತ್ಯ ಭೇಟಿ ನೀಡುತ್ತಾರೆ. ಶಾಂತ ವಾತಾವರಣದಲ್ಲಿ ಗಂಟೆಗಳ ಕಾಲ ಸಮಯ ಕಳೆಯುತ್ತಾರೆ.


Click it and Unblock the Notifications