Search
  • Follow NativePlanet
Share
ಮುಖಪುಟ » ಸ್ಥಳಗಳು » ಅದಿಲಾಬಾದ್ » ಹವಾಮಾನ

ಅದಿಲಾಬಾದ್ ಹವಾಮಾನ

ಅದಿಲಾಬಾದ್‌ಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಫೆಬ್ರವರಿ ನಡುವಿನ ಕಾಲ ಉತ್ತಮ. ಈ ಕಾಲದಲ್ಲಿ ವಾತಾವರಣದ ಸಹನೀಯವಾಗಿರುತ್ತದೆ. ವಿಪರೀತ ಸೆಖೆಯೂ ಇರುವುದಿಲ್ಲ. ತೇವಾಂಶವೂ ಹೆಚ್ಚಿರುವುದಿಲ್ಲ. ಸ್ಥಳ ವೀಕ್ಷಣೆಗೆ ಇದು ಹೇಳಿ ಮಾಡಿಸಿದ ಸಮಯ. ಇಷ್ಟಾಗಿಯೂ ಚಳಿಗಾಲದಲ್ಲಿ ಇತ್ತ ಬರುವವರು ಹಗುರಾದ ಉಲ್ಲನ್‌ ಬಟ್ಟೆ ಜತೆಗೆ ತಂದುಕೊಳ್ಳುವುದು ಉತ್ತಮ. ಸಂಜೆ ಹಾಗೂ ರಾತ್ರಿ ಕೊಂಚ ಚಳಿ ಇರುತ್ತದೆ.

ಬೇಸಿಗೆಗಾಲ

ಬೇಸಿಗೆಯಲ್ಲಿ ಇಲ್ಲಿ ವಿಪರೀತ ಸೆಖೆ ಇರುತ್ತದೆ. ಅದಿಲಾಬಾದ್‌ ಈ ಸಂದರ್ಭದಲ್ಲಿ ತೇವಾಂಶ ರಹಿತ ಹಾಗೂ ವಿಪರೀತ ಸೆಖೆಯಿಂದ ಕೂಡಿರುತ್ತದೆ. ಬೇಸಿಗೆ ಇಲ್ಲಿ ಮಾರ್ಚ್, ಏಪ್ರಿಲ್‌, ಮೇ ಹಾಗೂ ಜೂನ್‌ವರೆಗೆ ಇರುತ್ತದೆ. ಮೇ ಹಾಗೂ ಜೂನ್‌ ತಿಂಗಳುಗಳಲ್ಲಿ ಇಲ್ಲಿ ವಿಪರೀತ ಸೆಖೆ ಇರುತ್ತದೆ. ಈ ಸಂದರ್ಭದಲ್ಲಿ ತಾಪಮಾನ 45 ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪುತ್ತದೆ. ಅದಿಲಾಬಾದ್‌ಗೆ ಭೇಟಿ ನೀಡಲು ಇದು ಒಳ್ಳೆಯಕಾಲ ಅಲ್ಲ.

ಮಳೆಗಾಲ

ಜೂನ್‌ ಮಧ್ಯದಲ್ಲಿ ಅದಿಲಾಬಾದ್‌ಗೆ ಮಾನ್ಸೂನ್‌ ಆಗಮಿಸುತ್ತದೆ. ಆಗಸ್ಟ್‌ ಹಾಗೂ ಸೆಪ್ಟೆಂಬರ್‌ವರೆಗೂ ಮಳೆಗಾಲವಿರುತ್ತದೆ. ಅದಿಲಾಬಾದ್‌ನಲ್ಲಿ ಅಂಥಾ ಮಳೆಯೇನು ಸುರಿಯುವುದಿಲ್ಲ. ಇಲ್ಲಿನ ರೈತರು ಕೃಷಿಯನ್ನು ಮಳೆ ಆಧರಿಸಿ ಮಾಡುವುದಿಲ್ಲ. ಬದಲಾಗಿ ಅಣೆಕಟ್ಟು ಹಾಗೂ ಚಾನೆಲ್‌ ನೀರು ಆಧರಿಸಿ ಮಾಡುತ್ತಾರೆ. ಹೀಗಾಗಿ ನೀರಾವರಿಗೆ ಇಲ್ಲಿ ಇವುಗಳೆ ಆಧಾರ. ಬಿಸಿಲಿನ ತಾಪ ಕಡಿಮೆ ಆಗಿ ಕೊಂಚ ತಾಪಮಾನದಲ್ಲಿ ಇಳಿಕೆ ಆಗುತ್ತದೆ. ಆದರೂ ಇದು ಸಹಿಸಲು ಕಷ್ಟವಾಗುವಂತಿರುತ್ತದೆ.

ಚಳಿಗಾಲ

ದಕ್ಷಿಣ ಭಾರತದ ಇತರೆ ರಾಜ್ಯದ ಮಾದರಿಯಲ್ಲಿ ಇಲ್ಲಿನ ಚಳಿಗಾಲ ಇರುವುದಿಲ್ಲ. ಸಾಮಾನ್ಯ ಮಧ್ಯಮ ಹಂತದ ಚಳಿ ಇರುತ್ತದೆ. ನವೆಂಬರ್‌ನಲ್ಲಿ ಚಳಿಗಾಲ ಆರಂಭವಾದರೆ ಫೆಬ್ರುವರಿಯವರೆಗೂ ಮುಂದುವರಿಯುತ್ತದೆ. ಈ ತಿಂಗಳುಗಳಲ್ಲಿ ವಾತಾವರಣ ಸಹನೀಯವಾಗಿರುತ್ತದೆ. ಮಧ್ಯಾಹ್ನದ ನಂತರ ಒಣದಾಗಿರುವ ವಾತಾವರಣ ಸಂಜೆಯ ಹೊತ್ತಿಗೆ ತಂಪಾಗಿ ಚಳಿ ಆರಂಭವಾಗುತ್ತದೆ. ರಾತ್ರಿ ಚಳಿ ಕೊಂಚ ಹೆಚ್ಚಿರುತ್ತದೆ.