Search
 • Follow NativePlanet
Share
ಮುಖಪುಟ » ಸ್ಥಳಗಳು » ಅದಿಲಾಬಾದ್ » ಆಕರ್ಷಣೆಗಳು » ಸೇಂಟ್‌ ಜೋಸೆಫ್‌ ಕ್ಯಾಥೆಡ್ರಲ್‌

ಸೇಂಟ್‌ ಜೋಸೆಫ್‌ ಕ್ಯಾಥೆಡ್ರಲ್‌, ಅದಿಲಾಬಾದ್

3

ಸೇಂಟ್‌ ಜೋಸೆಫ್‌ ಕ್ಯಾಥೆಡ್ರಲ್‌ ಅದಿಲಾಬಾದ್‌ ನಗರ ಸಭೆ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲದೇ ಇದು ವಿಶ್ವ ಪ್ರಸಿದ್ಧ ಚರ್ಚ್ ಆಗಿದೆ. ತೆಲಂಗಾಣ ರಾಜ್ಯದಲ್ಲಿಯೇ ಈ ಚರ್ಚ್ ಅತ್ಯುತ್ತಮ ಕ್ಯಾಥೆಡ್ರಲ್‌ ಎಂಬ ಹೆಗ್ಗಳಿಕೆ ಹೊಂದಿದೆ.

ಇದು ಧಾರ್ಮಿಕವಾಗಿ ಮಾತ್ರವಲ್ಲ, ಪ್ರವಾಸಿ ತಾಣವಾಗಿಯೂ ಜನಪ್ರಿಯವಾಗಿದೆ. ಎಲ್ಲಾ ಧರ್ಮಿಯರು ಇಲ್ಲಿಗೆ ಆಗಮಿಸುತ್ತಾರೆ. ಭಾನುವಾರ ನಡೆಯುವ ಮಾಸ್‌ ಸಂದರ್ಭದಲ್ಲಿ ಸಾಕಷ್ಟು ಮಂದಿ ಇಲ್ಲಿ ಸೇರುತ್ತಾರೆ. ಚರ್ಚ್ ಒಳಗೆ ಮೌನ ಹಾಗೂ ಧ್ಯಾನಕ್ಕೆ ಸೂಕ್ತ ವಾತಾವರಣವಿದೆ. ದೇವರೊಂದಿಗೇ ಇದ್ದೇನೆ ಎನ್ನುವ ಭಾವ ಮೂಡುವ ರೀತಿಯ ನೈಜ ವಾತಾವರಣ ಇಲ್ಲಿರುತ್ತದೆ.

ಜನ ತಮ್ಮ ಮನದಾಳದ ಮಾತುಗಳನ್ನು ಇಲ್ಲಿ ಆಡಿಕೊಳ್ಳುತ್ತಾರೆ. ಬೇಡಿಕೆ ಮುಂದಿಡುತ್ತಾರೆ. ತಮ್ಮ ನೋವು, ಸಮಸ್ಯೆ, ಸುಖ, ಸಂತೋಷಗಳನ್ನು ದೇವರ ಬಳಿ ಹಂಚಿಕೊಳ್ಳುತ್ತಾರೆ. ಚರ್ಚ್ ಹೊರಗೊಂದು ಹಸಿರು ತುಂಬಿದ ಉದ್ಯಾನವಿದೆ. ಇದು ಈ ಪ್ರದೇಶದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಅಲ್ಲದೇ ಚರ್ಚ್ ಸುತ್ತಲಿನ ಪ್ರದೇಶ ಆಕರ್ಷಣೀಯವಾಗಿಸಲು ಸಹಕರಿಸಿದೆ.

ಈ ಉದ್ಯಾನದ ಲಾನ್‌ ಮೇಲೆ ಜನ ಧ್ಯಾನ ಸ್ಥಿತಿಯಲ್ಲಿ ಹಾಗೂ ಬೈಬಲ್‌ ಓದುತ್ತಾ ಕುಳಿತಿರುವುದು ಸದಾ ಕಂಡು ಬರುತ್ತದೆ. ಅನೇಕ ಪ್ರವಾಸಿಗರು ತಮ್ಮ ಪ್ರಶಸ್ತ ಸಮಯವನ್ನು ಇಲ್ಲಿ ಕೆಲ ಹೊತ್ತು ವಿನಿಯೋಗಿಸಲು ಬಯಸುತ್ತಾರೆ. ತಮ್ಮ ಒತ್ತಡದ ಕಾರ್ಯ ಭಾರ ಮರೆತು, ನಿರಾಳವಾಗಿ ಕೆಲ ಹೊತ್ತು ಕಳೆಯಲು ಹಲವರು ಇಲ್ಲಿಗೆ ಬರುತ್ತಾರೆ. ಅಂತಹ ಆರಾಮದಾಯಕ ವಾತಾವರಣ ಇಲ್ಲಿದೆ.

One Way
Return
From (Departure City)
To (Destination City)
Depart On
27 May,Mon
Return On
28 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 May,Mon
Check Out
28 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 May,Mon
Return On
28 May,Tue
 • Today
  Adilabad
  32 OC
  90 OF
  UV Index: 9
  Haze
 • Tomorrow
  Adilabad
  29 OC
  85 OF
  UV Index: 9
  Partly cloudy
 • Day After
  Adilabad
  31 OC
  88 OF
  UV Index: 9
  Partly cloudy