Search
  • Follow NativePlanet
Share
» »ಶನಿದೇವರ ವಿಶೇಷ ದೇವಸ್ಥಾನಗಳು

ಶನಿದೇವರ ವಿಶೇಷ ದೇವಸ್ಥಾನಗಳು

By Vijay

ನವಗ್ರಹಗಳಲ್ಲಿ ಒಂದಾದ ಹಾಗೂ ಪ್ರಭಾವಿ ದೇವರಾದ ಶನಿ ದೇವರನ್ನು ಪರಿಪಾಲಿಸುವವರ ಸಂಖ್ಯೆ ಅಪಾರ. ಶನಿ ದೇವರಿಗೆ ಶಿವನ ನೇರವಾದ ಕೃಪಾ ಕಟಾಕ್ಷವಿರುವುದರಿಂದ ಶನಿಯ ಮುನಿಸು ಶಿವನೊಂದಿಗೆ ಶತ್ರುತ್ವ ಕಟ್ಟಿಕೊಂಡಂತೆ ಎಂದು ಸಾಮಾನ್ಯವಾಗಿ ಹಿಂದೂ ಭಕ್ತರಲ್ಲಿ ವಾಡಿಕೆಯಿದೆ.

ವಿಶೇಷ ಲೇಖನ : ಗಣೇಶನ ವಿಶೇಷ ದೇಗುಲಗಳು

ಶನಿಯ ದೃಷ್ಟಿ ಬಿತ್ತೆಂದರೆ ಅಹಂಕಾರದಿಂದ ಮೆರಗುತ್ತಿರುವ ಎಂತಹ ಕೋಟ್ಯಾಧಿಪತಿಯೆ ಆಗಲಿ ಕ್ಷಣ ಮಾತ್ರದಲ್ಲಿ ಕಂಗಾಲಾಗಬಲ್ಲ ಹಾಗೂ ಸುದೃಷ್ಟಿ ಬಿತ್ತೆಂದರೆ ಎಂತಹ ಕಂಗಾಲನೆ ಇರಲಿ ಶೀಘ್ರದಲ್ಲಿ ಲಕ್ಷಾಧಿಪತಿಯಾಗಬಲ್ಲ ಎಂದು ಬಲವಾದ ನಂಬಿಕೆ ಹಿಂದೂ ಭಕ್ತರಲ್ಲಿದೆ.

ವಿಶೇಷ ಲೇಖನ : ದಕ್ಷಿಣದ ಪ್ರಸಿದ್ಧ ತೀರ್ಥಯಾತ್ರೆಗಳು

ಅಂತೆಯೆ ಶನಿ ದೇವರಿಗೆ ಸಾಕಷ್ಟು ಜನರು ತಮ್ಮ ಮೇಲೆ ಯಾವಾಗಲೂ ಕೃಪೆಯಿಡುವ ಉದ್ದೇಶದಿಂದ, ಭಕ್ತಿ ಪೂರ್ವಕವಾಗಿ ನಡೆದುಕೊಳ್ಳುತ್ತಾರೆ. ಅಲ್ಲದೆ ಶನಿ ದೇವರಿಗಂತೆಯೆ ಮುಡಿಪಾದ ಹಲವು ಪ್ರಭಾವಿ ದೇವಾಲಯಗಳು ಭಾರತದಾದ್ಯಂತೆ ಎಲ್ಲೆಡೆ ಕಾಣಬಹುದಾಗಿದೆ.

ವಿಶೇಷ ಶನಿಮಹಾತ್ಮನ ದೇಗುಲಗಳು:

ವಿಶೇಷ ಶನಿಮಹಾತ್ಮನ ದೇಗುಲಗಳು:

ಸಾವಿರಾರು ಸಂಖ್ಯೆಯಲ್ಲಿ ಶನಿ ದೇವರಿಗೆ ಮುಡಿಪಾದ ದೇವಾಲಯಗಳಿರುವುದನ್ನು ಕಾಣಬಹುದಾಗಿದೆ. ಪ್ರಸ್ತುತ ಲೇಖನದಲ್ಲಿ ಶನಿ ದೇವರ ಕೆಲವೆ ಕೆಲವು ವಿಶೇಷ ದೇವಸ್ಥಾನಗಳ ಕುರಿತು ತಿಳಿಯಿರಿ ಹಾಗೂ ಸಮಯ ಸಿಕ್ಕಾಗ ಅವುಗಳಿಗೆ ಭಕ್ತಿಯಿಂದ ಭೇಟಿ ನೀಡಿ ಶನಿ ದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಿ.

ಚಿತ್ರಕೃಪೆ: E. A. Rodrigues

ವಿಶೇಷ ಶನಿಮಹಾತ್ಮನ ದೇಗುಲಗಳು:

ವಿಶೇಷ ಶನಿಮಹಾತ್ಮನ ದೇಗುಲಗಳು:

ಶನಿಧಾಮ ದೇವಸ್ಥಾನ : ದೆಹಲಿಯ ದಕ್ಷಿಣ ಭಾಗದಲ್ಲಿರುವ ಛತರಪುರ ದೇವಾಲಯ ಸಂಕೀರ್ಣದಿಂದ ಆರು ಕಿ.ಮೀ ಗಳಷ್ಟು ದೂರದಲ್ಲಿರುವ ಶನಿ ಧಾಮ ದೇವಸ್ಥಾನವು ಶನಿ ದೇವರ ಭಕ್ತರ ನೆಚ್ಚಿನ ದೇವಸ್ಥಾನವಾಗಿದೆ. ಇದರ ಹೆಗ್ಗಳಿಕೆ ಎಂದರೆ ಈ ದೇವಸ್ಥಾನದಲ್ಲಿ ಶನಿ ದೇವರ ಜಗತ್ತಿನಲ್ಲಿಯೆ ಎರಡನೆಯ ಅತಿ ಎತ್ತರವಾದ ಮೂರ್ತಿಯಿರುವುದು.

ಚಿತ್ರಕೃಪೆ: rajkumar1220

ವಿಶೇಷ ಶನಿಮಹಾತ್ಮನ ದೇಗುಲಗಳು:

ವಿಶೇಷ ಶನಿಮಹಾತ್ಮನ ದೇಗುಲಗಳು:

ಉಡುಪಿಯ ಬನ್ನಂಜೆಯಲ್ಲಿರುವ ಶನಿ ಮಹಾತ್ಮನು ಸಹ ಅಪಾರವಾಗಿ ಭಕ್ತರನ್ನು ತನ್ನತ್ತ ಸೆಳೆಯುತ್ತಾನೆ. ಇಲ್ಲಿ ಪ್ರತಿಷ್ಠಾಪಿಸಲಾಗಿರುವ ಶನಿ ದೇವರ ಮೂರ್ತಿಯು ಸುಮಾರು 23 ಅಡಿಗಳಷ್ಟು ಎತ್ತರವನ್ನು ಹೊಂದಿದ್ದು ಆಕರ್ಷಕವಾಗಿ ಕಂಡುಬರುತ್ತದೆ. ಶನಿವಾರಗಳಂದು ಬಹು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Vaikoovery

ವಿಶೇಷ ಶನಿಮಹಾತ್ಮನ ದೇಗುಲಗಳು:

ವಿಶೇಷ ಶನಿಮಹಾತ್ಮನ ದೇಗುಲಗಳು:

ತಿರುನಲ್ಲಾರ್ ಶನೀಶ್ವರರ್ ದೇವಸ್ಥಾನ: ದಕ್ಷಿಣ ಭಾರತದ ಪ್ರಸಿದ್ಧ ನವಗ್ರಹ ತೀರ್ಥಯಾತ್ರೆಯ ಅಂಗವಾದ ಭಗವಾನ್ ಶನೀಶ್ವರನ ದರುಶನ ಪಡೆಯುವ ದೇವಸ್ಥಾನವಾಗಿರುವ ಇದು ಪುದುಚೆರಿಯ (ಪಾಂಡಿಚೆರಿ) ಯ ಕಾರೈಕಾಲ್ ಜಿಲ್ಲೆಯಲ್ಲಿದೆ.

ಚಿತ್ರಕೃಪೆ: VasuVR

ವಿಶೇಷ ಶನಿಮಹಾತ್ಮನ ದೇಗುಲಗಳು:

ವಿಶೇಷ ಶನಿಮಹಾತ್ಮನ ದೇಗುಲಗಳು:

ಪ್ರಮುಖವಾಗಿ ಇಲ್ಲಿನ ಮುಖ್ಯ ದೇವರು ಶಿವನ ಅವತಾರ ದರ್ಬಾರಣ್ಯೀಶ್ವರರ್ ಅನ್ನು ಪೂಜಿಸಲಾಗುತ್ತದಾದರೂ ಇದು ಶನಿ ದೇವರಿಗೆ ಬಲು ಪ್ರಖ್ಯಾತವಾಗಿದೆ. ಇಲ್ಲಿ ಶನಿ ದೇವರು ಮೂಲ ವಿಗ್ರಹದ ದ್ವಾರಪಾಲಕನಂತೆ ಪ್ರತಿನಿಧಿಸಲಾಗಿದೆ.

ಚಿತ್ರಕೃಪೆ: Rsmn

ವಿಶೇಷ ಶನಿಮಹಾತ್ಮನ ದೇಗುಲಗಳು:

ವಿಶೇಷ ಶನಿಮಹಾತ್ಮನ ದೇಗುಲಗಳು:

ಶನಿದೇವ ಧಾಮ: ಉತ್ತರ ಪ್ರದೇಶ ರಾಜ್ಯದ ಪ್ರತಾಪಗಡ್ ಜಿಲ್ಲೆಯಲ್ಲಿರುವ ವಿಶ್ವನಾಥಗಂಜ್ ಪಟ್ಟಣದಿಂದ ಮೂರು ಕಿ.ಮೀ ದೂರದಲ್ಲಿರುವ ಶನಿ ದೇವ ಧಾಮವು ಪ್ರದೇಶದ ಪ್ರಮುಖ ಶನಿ ಮಂದಿರವಾಗಿದೆ.

ಚಿತ್ರಕೃಪೆ: Jeeteshroxx

ವಿಶೇಷ ಶನಿಮಹಾತ್ಮನ ದೇಗುಲಗಳು:

ವಿಶೇಷ ಶನಿಮಹಾತ್ಮನ ದೇಗುಲಗಳು:

ಕಲ್ಲಿನಲ್ಲಿರುವ ಶನಿ ದೇವರ ವಿಗ್ರಹವು ಆಕರ್ಷಕವಾಗಿದ್ದು ಪ್ರತಿ ಶನಿವಾರ ಹಾಗೂ ನವರಾತ್ರಿಗಳ ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಗಳಿಂದ ಜನರ, ಭಕ್ತರ ಹಿಂಡೆ ಈ ದೇವಸ್ಥಾನಕ್ಕೆ ಶನಿ ದೇವರ ದರುಶನ ಕೋರಿ ಆಗಮಿಸುತ್ತದೆ.

ಚಿತ್ರಕೃಪೆ: Jeeteshroxx

ವಿಶೇಷ ಶನಿಮಹಾತ್ಮನ ದೇಗುಲಗಳು:

ವಿಶೇಷ ಶನಿಮಹಾತ್ಮನ ದೇಗುಲಗಳು:

ಬಕುಲಾ ನದಿಯ ತಟದಲ್ಲಿ ನೆಲೆಸಿರುವ ಶನಿ ದೇವರ ದೇವಸ್ಥಾನವು ವಿಶ್ವನಾಥಗಂಜ್ ಪಟ್ಟಣದ ಪ್ರಮುಖ ಧಾರ್ಮಿಕ ಕೇಂದ್ರವೂ ಸಹ ಆಗಿದೆ.

ಚಿತ್ರಕೃಪೆ: Jeeteshroxx

ವಿಶೇಷ ಶನಿಮಹಾತ್ಮನ ದೇಗುಲಗಳು:

ವಿಶೇಷ ಶನಿಮಹಾತ್ಮನ ದೇಗುಲಗಳು:

ಲೋಕ ನಾಯಕ ಶನೀಶ್ವರ ದೇಗುಲ : ಕೊಯಮತ್ತೂರಿನಲ್ಲಿರುವ ಈ ದೇವಸ್ಥಾನವು ಶನಿ ದೇವರಿಗೆ ಮುಡಿಪಾದ ಸುಂದರ ದೇವಸ್ಥಾನವಾಗಿದೆ. ಕೊಯಮತ್ತೂರಿನ ನಗರದಲ್ಲಿರುವ ಪುಲಿಯಾಕುಲಂ ಎಂಬ ಪ್ರದೇಶದಲ್ಲಿರುವ ಈ ದೇವಸ್ಥಾನದಲ್ಲಿ ಏಳು ಅಡಿಗಳಷ್ಟು ಎತ್ತರದ ಶನಿ ದೇವನನ್ನು ಪ್ರತಿಷ್ಠಾಪಿಸಲಾಗಿದೆ.

ಚಿತ್ರಕೃಪೆ: ThangamuthuRaja

ವಿಶೇಷ ಶನಿಮಹಾತ್ಮನ ದೇಗುಲಗಳು:

ವಿಶೇಷ ಶನಿಮಹಾತ್ಮನ ದೇಗುಲಗಳು:

ಶನಿ ಶಿಂಗ್ನಾಪುರ : ಮಹಾರಾಷ್ಟ್ರದಲ್ಲಿರುವ ಈ ಸ್ಥಳವು ಅಕ್ಷರಶಃ ಶನಿ ದೇವರಿಗೆ ಮುಡಿಪಾದ ಗ್ರಾಮವಾಗಿದೆ ಎಂದರೂ ತಪ್ಪಾಗಲಿಲಿಕ್ಕಿಲ್ಲ. ಅಹ್ಮದ್ ನಗರ ಜಿಲ್ಲೆಯ ನೇವಾಸಾ ತಾಲೂಕಿನಲ್ಲಿರುವ ಈ ಗ್ರಾಮವು ಶನಿ ದೇವನನ್ನು ಪ್ರತಿನಿಧಿಸುವ ಕಪ್ಪು ಶಿಲೆಯ ವಿಶಿಷ್ಟ ಮೂರ್ತಿಗಾಗಿ ಹೆಸರುವಾಸಿಯಾಗಿದ್ದು ದೇಶದಲ್ಲೆ ಜನಪ್ರೀಯ ಶನಿ ದೇವರ ಸ್ಥಳವಾಗಿದೆ. ಆಸಕ್ತಿಕರ ವಿಷಯವೆಂದರೆ ಇಲ್ಲಿ ಶನಿ ದೇವರ ಕುರಿತು ಭಯ ಭಕ್ತಿ ಎಷ್ಟಿದೆ ಎಂದರೆ ಇಲ್ಲಿನ ಸಾಕಷ್ಟು ಮನೆಗಳಿಗೆ ಬಾಗಿಲುಗಳೆ ಇಲ್ಲ! ಕಾರಣ ಶನಿ ದೇವರ ಪ್ರಭಾವ ಹಾಗೂ ಪವಾಡ ಎಷ್ಟಿದೆ ಎಂದರೆ ಯಾವುದೆ ರೀತಿಯ ಕಳ್ಳತನ ಇಲ್ಲಾಗಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಅದರಂತೆ ಕಳೆದ ಸಾಕಷ್ಟು ವರ್ಷಗಳಿಂದ ಇಲ್ಲಿ ಕಳ್ಳತನ ನಡೆದ ಉದಾಹರಣೆಗಳೂ ಸಹ ಸಿಗುವುದಿಲ್ಲ. ಶಿರಡಿಗೂ ಸಹ ಇದು ಹತ್ತಿರವಿದ್ದು ಇಲ್ಲಿಂದ ಶಿಂಗ್ನಾಪುರಕ್ಕೆ ತೆರಳಲು ಖಾಸಗಿ ವಾಹನಗಳು ದೊರೆಯುತ್ತವೆ.

ಚಿತ್ರಕೃಪೆ: Singhmanroop

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X