Search
  • Follow NativePlanet
Share
» »ಶಿರಸಿ ಮಾರಿಕಾಂಬಾ ಜಾತ್ರೆಯ ಅನುಭವ

ಶಿರಸಿ ಮಾರಿಕಾಂಬಾ ಜಾತ್ರೆಯ ಅನುಭವ

By Vijay

ಉತ್ತರ ಕನ್ನಡ ಜಿಲ್ಲೆಯ ಶಿರಸಿಯು ಒಂದು ಉತ್ತಮ ಪ್ರವಾಸಿ ಪಟ್ಟಣವಾಗಿದೆ. ಬನವಾಸಿ, ಸೋಂದಾ, ಸಹಸ್ರಲಿಂಗ, ಯಾಣ ಮುಂತಾದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಿಗೆ ಹತ್ತಿರವಾಗಿರುವ ಈ ತಾಣವು ಪ್ರತಿ ಎರಡು ವರ್ಷಕ್ಕೊಮ್ಮೆ ಮಾರ್ಚ್ ತಿಂಗಳಲ್ಲಿ ಜರುಗುವ ಸುಪ್ರಸಿದ್ಧ ಮಾರಿಕಾಂಬೆಯ ಜಾತ್ರೆಯಿಂದಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಮಾರಿಕಾಂಬೆಯ ದೇವಸ್ಥಾನವು 17 ನೇಯ ಶತಮಾನದ್ದಾಗಿದ್ದು ಮುಖ್ಯವಾಗಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನರು ಈ ದೇವಿಯನ್ನು ಆರಾಧಿಸುತ್ತಾರೆ.

7 ಅಡಿಗಳಷ್ಟು ಎತ್ತರವಿರುವ ಮರದಲ್ಲಿ ಕೆತ್ತಲಾದ ಈ ದೇವಿಯ ವಿಗ್ರಹವು 1611 ರಲ್ಲಿ ಈ ಊರಿನ ಸರಹದ್ದಿನಲ್ಲಿರುವ ಕೆರೆಯಲ್ಲಿ ದೊರೆಯಿತೆಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಅಲ್ಲದೆ ಕರ್ನಾಟಕದಲ್ಲಿ ಕಂಡುಬರುವ ಮಾರಿಕಾಂಬೆ ದೇವಾಲಯಗಳ ಪೈಕಿ ಈ ವಿಗ್ರಹವು ಅತಿ ಎತ್ತರದ ವಿಗ್ರಹವೆಂಬ ಖ್ಯಾತಿಯನ್ನೂ ಪಡೆದಿದೆ. ಈ ಜಾತ್ರೆಯು ಕರ್ನಾಟಕದ ದೊಡ್ಡ ಜಾತ್ರೆಗಳ ಪೈಕಿ ಒಂದಾಗಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತಾದಿಗಳು ಕೇವಲ ಕರ್ನಾಟಕದಿಂದ ಮಾತ್ರವಲ್ಲದೆ ಪಕ್ಕದ ತಮಿಳುನಾಡು ಹಾಗು ಆಂಧ್ರಗಳಿಂದಲೂ ಈ ಜಾತ್ರೆಯಲ್ಲಿ ಪಾಲ್ಗೊಳ್ಳಲು ಬರುತ್ತಾರೆ. ಈ ವರ್ಷದ ಜಾತ್ರೆಯ ಕೆಲವು ಚಿತ್ರಗಳು ನಿಮಗಾಗಿ.

ಶಿರಸಿಯನ್ನು ತಲುಪಲು ಬೆಂಗಳೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ, ಹಾವೇರಿ, ಹಾಸನ, ಧಾರವಾಡ, ದಾವಣಗೇರೆ, ಕಾರವಾರ, ಕುಮಟಾ, ಸಾಗರ, ಬಳ್ಳಾರಿ, ತುಮಕೂರು ಮುಂತಾದ ಪ್ರಮುಖ ಪಟ್ಟಣಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳು ಲಭ್ಯವಿದೆ. ಹತ್ತಿರದ ರೈಲು ನಿಲ್ದಾಣಗಳೆಂದರೆ ಹಾವೇರಿ (65ಕಿ.ಮೀ), ಹುಬ್ಬಳ್ಳಿ (100ಕಿ.ಮೀ) ಹಾಗೂ ಶಿವಮೊಗ್ಗ (125ಕಿ.ಮೀ).

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿ ಮಾರಿಕಾಂಬೆ ಜಾತ್ರೆಯ ವೇಳ ಪಟ್ಟಿಯನ್ನು ಬಿತ್ತರಿಸುತ್ತಿರುವ ಫಲಕ.

ಚಿತ್ರಕೃಪೆ: KA 31 news

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿ ಮಾರಿಕಾಂಬಾ ಜಾತ್ರೆ:

ಶ್ರೀ ದೇವಿ ಮಾರಿಕಾಂಬೆಯ ವಿಗ್ರಹ ಮೂರ್ತಿ.

ಚಿತ್ರಕೃಪೆ: KA 31 news

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿ ಮಾರಿಕಾಂಬಾ ಜಾತ್ರೆ:

ಹಿಂದೆ ದೇವಿಯ ಪ್ರಸನ್ನತೆಗೆಂದು ಮೌಢ್ಯವಾಗಿ ಕೋಣನ ಬಲಿ ಕೊಡಲಾಗುತ್ತಿತ್ತು. ಆದರೆ ಪ್ರಸ್ತುತ ಸಾಂಕೇತಿಕವಾಗಿ ಕೋಣನನ್ನು ಪ್ರದರ್ಶಿಸಲಾಗುತ್ತದೆ.

ಚಿತ್ರಕೃಪೆ: KA 31 news

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿ ಮಾರಿಕಾಂಬಾ ಜಾತ್ರೆ:

ಕೋಣನನ್ನು ಬಳಿ ಕೊಡುವುದನ್ನು ನಿರ್ಬಂಧಿಸಿರುವ ಫಲಕ ಸೂಚಿಯನ್ನು ದೇವಾಲಯ ಆವರಣದಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: KA 31 news

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿ ಮಾರಿಕಾಂಬಾ ಜಾತ್ರೆ:

ಜಾತ್ರೆಯ ನಿಮಿತ್ತ ಅದ್ದೂರಿಯಾಗಿ ಜರುಗುತ್ತಿರುವ ದೇವಿಯ ಮೆರವಣಿಗೆ.

ಚಿತ್ರಕೃಪೆ: KA 31 news

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿ ಮಾರಿಕಾಂಬಾ ಜಾತ್ರೆ:

ವಿವಿಧ ನೃತ್ಯ ತಂಡದವರಿಂದ ವೈಭವದ ಪ್ರದರ್ಶನ.

ಚಿತ್ರಕೃಪೆ: KA 31 news

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿ ಮಾರಿಕಾಂಬಾ ಜಾತ್ರೆ:

ರಾತ್ರಿಯ ಸಮಯದಲ್ಲಿ ದೇವಿ ಮಾರಿಕಾಂಬಾಳ ದೇವಸ್ಥಾನದ ಮುಂದೆ ನೆರೆದಿರುವ ಅಪಾರ ಜನಸ್ತೋಮ.

ಚಿತ್ರಕೃಪೆ: KA 31 news

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿ ಮಾರಿಕಾಂಬಾ ಜಾತ್ರೆ:

ದೇವಿಯ ಭಕ್ತಿಯಲ್ಲಿ ಪರವಶರಾದ ಮಹಿಳೆಯರು.

ಚಿತ್ರಕೃಪೆ: KA 31 news

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿ ಮಾರಿಕಾಂಬಾ ಜಾತ್ರೆ:

ದೇವಿ ಮಾರಿಕಾಂಬಾಳ ತೇರೆಳತದಲ್ಲಿ ಭಾಗಿಯಾಗಿರುವ ಅಪಾರ ಜನಸ್ತೋಮ.

ಚಿತ್ರಕೃಪೆ: Deepak kanade

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿ ಮಾರಿಕಾಂಬಾ ದೇವಸ್ಥಾನದ ಒಂದು ನೋಟ.

ಚಿತ್ರಕೃಪೆ: KA 31 news

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿಯಿಂದ ವಿವಿಧ ಪ್ರವಾಸಿ ಸ್ಥಳಗಳಿರುವ ದೂರವನ್ನು ಸೂಚಿಸುವ ಫಲಕ.

ಚಿತ್ರಕೃಪೆ: KA 31 news

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿ ಮಾರಿಕಾಂಬಾ ಜಾತ್ರೆ:

ಜಾತ್ರೆ ಸಮಯದಿ ರಾತ್ರಿಯ ಒಂದು ನೋಟ.

ಚಿತ್ರಕೃಪೆ: KA 31 news

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿ ಮಾರಿಕಾಂಬಾ ಜಾತ್ರೆ:

ಪ್ರವಾಹದ ರೀತಿಯಲ್ಲಿ ಜಾತ್ರೆಗೆ ಹರಿದು ಬರುವ ಭಕ್ತರ ದಂಡು.

ಚಿತ್ರಕೃಪೆ: KA 31 news

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿ ಮಾರಿಕಾಂಬಾ ಜಾತ್ರೆ:

ಝಗಮಗಿಸುವ ದೇವಸ್ಥಾನ ಪ್ರದೇಶದ ರಾತ್ರಿಯ ಒಂದು ನೋಟ.

ಚಿತ್ರಕೃಪೆ: KA 31 news

ಶಿರಸಿ ಮಾರಿಕಾಂಬಾ ಜಾತ್ರೆ:

ಶಿರಸಿ ಮಾರಿಕಾಂಬಾ ಜಾತ್ರೆ:

ದೇವಿಯ ದರ್ಶನ ಬಯಸು ಮುನ್ನುಗ್ಗುತ್ತಿರುವ ಭಕ್ತ ಜನರಾಶಿ.

ಚಿತ್ರಕೃಪೆ: KA 31 news

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X