ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಚುಂಚನಕಟ್ಟೆ ಜಲಪಾತ : ಕಾವೇರಿಯ ಮಧುರ ಗೀತೆ

Written by:
Published: Friday, June 13, 2014, 16:39 [IST]
Share this on your social network:
   Facebook Twitter Google+ Pin it  Comments

ಚುಂಚನಕಟ್ಟೆ ಜಲಪಾತ ಅಥವಾ ಫಾಲ್ಸ್, ಕಾವೇರಿ ನದಿಯಿಂದ ರೂಪಗೊಳ್ಳುವ ಒಂದು ಸುಂದರ ಜಲಪಾತವಾಗಿದ್ದು ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಹ ಯೋಗ್ಯವಾದ ತಾಣವಾಗಿದೆ. ಅಲ್ಲದೆ ಸಾಕಷ್ಟು ಕನ್ನಡ ಚಿತ್ರಗಳು ಇಲ್ಲಿ ಚಿತ್ರೀಕರಣ ಸಹ ಗೊಂಡಿವೆ. ಅಷ್ಟೊಂದು ಹೆಸರುವಾಸಿಯಾಗಿಲ್ಲದಿದ್ದರೂ ತನ್ನದೆ ಆದ ಸುಂದರ ಪ್ರಕೃತಿಯಿಂದ ಭೇಟಿ ನೀಡುವವರ ಹೃದಯ ಕದಿಯುತ್ತದೆ ಈ ಜಲಪಾತ ತಾಣ. ಮಳೆಗಾಲದ ಸಮಯದಲ್ಲಂತೂ ಮೈದುಂಬಿ ಹರೆಯುವ ಜಲಪಾತದ ನೋಟ ಅಂದವೋ ಅಂದ...ವರ್ಣಿಸಲಾಗದಷ್ಟು ಚೆಂದವೋ ಚೆಂದ.

ಚುಂಚನಕಟ್ಟೆಯು ಮೈಸೂರಿನ ಕೃಷ್ಣರಾಜನಗರ ತಾಲೂಕಿನಲ್ಲಿದ್ದು ಜಲಪಾತ ತಾಣವು ಮೈಸೂರು ಪಟ್ಟಣದಿಂದ 57 ಕಿ.ಮೀ, ಕೆ.ಆರ್ ನಗರ ಪಟ್ಟಣದಿಂದ ಸುಮಾರು 16 ಕಿ.ಮೀ ದೂರದಲ್ಲಿ ನೆಲೆಸಿದೆ. ಮೈಸೂರು ಹಾಗೂ ಚುಂಚನಕಟ್ಟೆಗಳ ಮಧ್ಯೆ ಸಂಚರಿಸಲು ಸಾಕಷ್ಟು ಬಸ್ಸುಗಳು ಲಭ್ಯವಿದೆ. ಮೈಸೂರು - ಹಾಸನ ಹೆದ್ದಾರಿಯಲ್ಲಿ ಕೆ.ಆರ್ ನಗರ ಪಟ್ಟಣದಲ್ಲಿ ಎಡಗಡೆಗೆ ತಿರುವು ತೆಗೆದುಕೊಳ್ಳುವ ಮೂಲಕ ಈ ಜಲಪಾತಕ್ಕೆ ತೆರಳಬಹುದಾಗಿದೆ.

ಚಿತ್ರಕೃಪೆ: ಶ್ರೀರಾಮ್ ಹೆಬ್ಬಾರ್ (ವಿಕಿಯ ಎರಡು ಚಿತ್ರಗಳನ್ನು ಹೊರತುಪಡಿಸಿ).

ಚುಂಚನಕಟ್ಟೆ ಜಲಪಾತ:

ಚುಂಚನಕಟ್ಟೆ ಒಂದು ಪವಿತ್ರ ಸ್ಥಳವಾಗಿದ್ದು ಹಿಂದೆ ಶ್ರೀ ರಾಮನು ವನವಾಸವನ್ನು ಅನುಭವಿಸುತ್ತಿದ್ದಾಗ ಈ ಸ್ಥಳದಲ್ಲಿ ತಂಗಿದ್ದನೆಂದು ಹೇಳುತ್ತದೆ ಇಲ್ಲಿನ ಸ್ಥಳ ಪುರಾಣ.

ಚಿತ್ರಕೃಪೆ: Rks 80

 

ಚುಂಚನಕಟ್ಟೆ ಜಲಪಾತ:

ಮೂಲವಾಗಿ, ಚುಂಚಾ ಹಾಗೂ ಚುಂಚಿ ಎಂಬ ಹೆಸರಿನ ಬುಡಕಟ್ಟು ದಂಪತಿಗಳು ಹಿಂದೆ ರಾಮನು ಇಲ್ಲಿಗೆ ಬಂದಾಗ ಆದರಾತಿಥ್ಯಗಳನ್ನು ಮಾಡಿದ್ದರು. ಅದರಂತೆ ಈ ಸ್ಥಳಕ್ಕೆ ಚುಂಚನಕಟ್ಟೆ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ.

ಚುಂಚನಕಟ್ಟೆ ಜಲಪಾತ:

ಶ್ರೀರಾಮನಿಗೆ ಮುಡಿಪಾದ ಕೋದಂಡ ರಾಮನ ದೇವಾಲಯವನ್ನು ಈ ತಾಣದಲ್ಲಿ ಕಾಣಬಹುದಾಗಿದೆ. ಇದರೆ ವಿಶೇಷತೆಯೆಂದರೆ ದೇವಾಲಯದ ಗರ್ಭಗೃಹದಲ್ಲಿ ನಿಂತಾಗ ಹೊರಗಡೆ ರಭಸವಾಗಿ ಹರಿಯುವ ಕಾವೇರಿ ನದಿಯ ಶಬ್ದವು ಕಿಂಚಿತ್ತು ಕೇಳಿಸುವುದಿಲ್ಲ.

ಚುಂಚನಕಟ್ಟೆ ಜಲಪಾತ:

ಆದರೆ, ಗರ್ಭಗೃಹದ ಆಚೆ ಬರುತ್ತಿದ್ದಂತೆ ನದಿಯ ಶಬ್ದವು ನಿರಾಯಾಸವಾಗಿ ಕೇಳಲ್ಪಡುತ್ತದೆ. ಈ ವಿಚಿತ್ರಕ್ಕೂ ಕೂಡ ಒಂದು ರೋಚಕವಾದ ಸ್ಥಳ ಪುರಾಣವಿದೆ. ಅದೇನೆಂದರೆ....

ಚುಂಚನಕಟ್ಟೆ ಜಲಪಾತ:

ಹಿಂದೆ, ರಾಮನು ವನವಾಸದ ಸಂದರ್ಭದಲ್ಲಿದ್ದಾಗ ಸೀತೆಯ ನಿರಂತರವಾದ ಮಾತುಗಳಿಂದ ಬೇಸರಿಸಿಕೊಂಡು, ಹೆಣ್ಣುಮಕ್ಕಳ ನಾಲಿಗೆಯು ನಿಯಂತ್ರಣದಲ್ಲಿರಬೇಕೆಂದು ಶಪಿಸಿದ್ದನಂತೆ. ಅಲ್ಲದೆ ಕಾವೇರಿಯನ್ನು ಒಂದು ಹೆಣ್ಣಾಗಿ ಭಾವಿಸುವುದರಿಂದ ರಾಮನ ದೇವಾಲಯದ ಗರ್ಭ ಗೃಹದಲ್ಲಿದ್ದಾಗ ಹರಿಯುವ ನದಿಯ ಶಬ್ದವು ಕೇಳುವುದಿಲ್ಲವಂತೆ!

ಚುಂಚನಕಟ್ಟೆ ಜಲಪಾತ:

ಮತ್ತೊಂದು ಸ್ಥಳ ಪುರಾಣದ ಪ್ರಕಾರ, ಸೀತಾ ಮಾತೆಯು ಸ್ನಾನ ಮಾಡಬೇಕೆಂದು ಕೇಳಿದಾಗ ರಾಮನು ಸೋದರನಾದ ಲಕ್ಷ್ಮಣನಿಗೆ ಬಾಣ ಬಿಡಲು ಹೇಳುತ್ತಾನೆ. ಅದರಂತೆ ಲಕ್ಷ್ಮಣನು ಬಂಡೆಗೆ ಬಾಣ ಬಿಟ್ಟಾಗ ನೀರು ಮೂರು ಭಾಗಗಳಲ್ಲಿ ಒಂದು ಅರಿಷಿಣದ ಜೊತೆ, ಒಂದು ಎಣ್ಣೆಯ ಜೊತೆ ಹಾಗು ಮತ್ತೊಂದು ಶಿಕಾಕಾಯಿಯ ಜೊತೆ ಭೋರ್ಗೆರೆಯುತ್ತದೆ.

ಚುಂಚನಕಟ್ಟೆ ಜಲಪಾತ:

ಇಂದಿಗೂ ಜಲಪಾತವು ತುಂಬಿ ಹರಿಯುತ್ತಿದ್ದಾಗ, ಮೂರು ಕವಲುಗಳಲ್ಲಿ ಬೀಳುವುದನ್ನು ಕಾಣಬಹುದು.

ಚುಂಚನಕಟ್ಟೆ ಜಲಪಾತ:

ಹಲವು ಶತಮಾನಗಳ ಇತಿಹಾಸ ಹೊಂದಿರುವ ಇಲ್ಲಿನ ಕೋದಂಡರಾಮನ ದೇವಸ್ಥಾನದಲ್ಲಿ ರಾಮ, ಲಕ್ಷ್ಮಣ, ಸೀತೆಯ ವಿಗ್ರಹಗಳಿದ್ದು, ವಿಶೇಷವಾಗಿ ಸೀತೆಯು ಎಂದಿನಂತೆ ರಾಮನ ಎಡಭಾಗದಲ್ಲಿರಲಾರದೆ ಬಲಭಾಗದಲ್ಲಿರುವುದನ್ನು ಕಾಣಬಹುದು.

ಚಿತ್ರಕೃಪೆ: Raghuveerbk

 

ಚುಂಚನಕಟ್ಟೆ ಜಲಪಾತ:

ಚುಂಚನಕಟ್ಟೆ ಜಲಪಾತದ ಒಂದು ಸುಂದರ ನೋಟ.

ಚುಂಚನಕಟ್ಟೆ ಜಲಪಾತ:

ಚುಂಚನಕಟ್ಟೆ ಜಲಪಾತದ ಒಂದು ಸುಂದರ ನೋಟ.

ಚುಂಚನಕಟ್ಟೆ ಜಲಪಾತ:

ಚುಂಚನಕಟ್ಟೆ ಜಲಪಾತದ ಒಂದು ಸುಂದರ ನೋಟ.

ಚುಂಚನಕಟ್ಟೆ ಜಲಪಾತ:

ಚುಂಚನಕಟ್ಟೆ ಜಲಪಾತದ ಒಂದು ಸುಂದರ ನೋಟ.

ಚುಂಚನಕಟ್ಟೆ ಜಲಪಾತ:

ಚುಂಚನಕಟ್ಟೆ ಜಲಪಾತದ ಒಂದು ಸುಂದರ ನೋಟ.

ಚುಂಚನಕಟ್ಟೆ ಜಲಪಾತ:

ಚುಂಚನಕಟ್ಟೆ ಜಲಪಾತದ ಒಂದು ಸುಂದರ ನೋಟ.

ಚುಂಚನಕಟ್ಟೆ ಜಲಪಾತ:

ಚುಂಚನಕಟ್ಟೆ ಜಲಪಾತದ ಒಂದು ಸುಂದರ ನೋಟ.

ಚುಂಚನಕಟ್ಟೆ ಜಲಪಾತ:

ಚುಂಚನಕಟ್ಟೆ ಜಲಪಾತದ ಒಂದು ಸುಂದರ ನೋಟ.

ಚುಂಚನಕಟ್ಟೆ ಜಲಪಾತ:

ಚುಂಚನಕಟ್ಟೆ ಜಲಪಾತದ ಒಂದು ಸುಂದರ ನೋಟ.

ಚುಂಚನಕಟ್ಟೆ ಜಲಪಾತ:

ಚುಂಚನಕಟ್ಟೆ ಜಲಪಾತದ ಒಂದು ಸುಂದರ ನೋಟ.

ಚುಂಚನಕಟ್ಟೆ ಜಲಪಾತ:

ಚುಂಚನಕಟ್ಟೆ ಜಲಪಾತದ ಒಂದು ಸುಂದರ ನೋಟ.

ಚುಂಚನಕಟ್ಟೆ ಜಲಪಾತ:

ಚುಂಚನಕಟ್ಟೆ ಜಲಪಾತದ ಒಂದು ಸುಂದರ ನೋಟ.

English summary

Chunchanakatte falls the ultimate spot for film shooting

Chunchnakatte is a small village situated in the krishnarajanagar taluk of Mysore district. The water falls here is formed by the cauvery or kaveri river flows beautifully covering most space horizontally. Lot of regional film shootings especially Kannada films have been taken place in this very spot. This falls site is least heard yet it offers amazing views of cauvery river.
Please Wait while comments are loading...