ಕುಂಭಲ್ಗಡ್ ಕೋಟೆಯು 15 ನೇ ಶತಮಾನದಲ್ಲಿ ರಾಣಾ ಕುಂಭನಿಂದ ನಿರ್ಮಿತವಾಗಿದೆ. ಈ ಮೇವಾರ್ ಕೋಟೆಯು ಬನಸ್ ನದಿಯ ದಡದ ಮೇಲೆ ನೆಲೆಸಿದೆ. ಇದು ರಾಜಸ್ಥಾನ ರಾಜ್ಯದ ಎರಡನೇ ಮಹತ್ತರ ಕೋಟೆಯಾಗಿದ್ದು, ಸಾಮಾನ್ಯವಾಗಿ ಜನದಟ್ಟನೆಯು ಇಲ್ಲಿ ಕಂಡುಬರುತ್ತದೆ. ಈ ವಿಶಾಲವಾದ ಕೋಟೆಯು 13 ಶೃಂಗಗಳು, ನಿಗಾ ಗೋಪುರಗಳು ಮತ್ತು ಕೊತ್ತಲುಗಳಿಂದ ಸುತ್ತುವರೆದಿದೆ. ಈ ಕೋಟೆಯು ಅರಾವಳಿಯ 36 ಕಿ.ಮೀ ದೂರದ ವರೆಗೆ ಹರಡಿದೆ. ಈ ಕೋಟೆಯಲ್ಲಿ ಮಹಾರಾಣಾ ಫತೇ ಸಿಂಗ್ ರಿಂದ ನಿರ್ಮಿತವಾದ ಡೋಮ್ ಆಕಾರದ ಒಂದು ಅರಮನೆಯಿದೆ. ಇಲ್ಲಿ, ಶತ್ರುಗಳಿಂದ ರಕ್ಷಣೆಗಾಗಿ, ವಕ್ರಾಕಾರದಲ್ಲಿ ಎತ್ತರವಾದ ಗೋಡೆಯನ್ನು ಕಟ್ಟಲಾಗಿದೆ. ಚೀನಾ ಗೋಡೆಯ ನಂತರ, ಈ ಗೋಡೆಯನ್ನು ಪ್ರಪಂಚದ ಎರಡನೇ ಉದ್ದವಾದ ಗೋಡೆ ಎಂದು ಹೇಳಲಾಗುತ್ತದೆ.ಕೋಟೆಯು ಏಳು ಬೃಹದಾಕಾರದ ಹೊರದ್ವಾರಗಳನ್ನು ಹೊಂದಿದ್ದು, ಅವುಗಳಲ್ಲಿ ರಾಮ್ ಪೋಲ್ ದೊಡ್ಡದಾದುದಾಗಿದೆ. ಕೋಟೆಯನ್ನು ಪ್ರವೇಶಿಸಲು ಇರುವ ಮುಖ್ಯ ದ್ವಾರವಾದ ಹನುಮಾನ್ ಪೋಲ್ ನಲ್ಲಿ ದೇವಸ್ಥಾನವಿರುವುದನ್ನು ಪ್ರವಾಸಿಗರು ಗಮನಿಸಬಹುದು. ಹಲ್ಲಾ ಪೋಲ್, ರಾಮ್ ಪೋಲ್, ಪಘ್ರಾ ಪೋಲ್, ನಿಂಬು ಪೋಲ್, ಭೈರವ ಪೋಲ್ ಮತ್ತು ತೋಪ್-ಖಾನಾ ಪೋಲ್ ಇಲ್ಲಿರುವ ದ್ವಾರಗಳ ಹೆಸರು.ಪ್ರವಾಸಿಗರು ಕೋಟೆಯ ಮೇಲಿಂದ, ಸುತ್ತ ಮುತ್ತಲಿರುವ ಸ್ಥಳಗಳ ಪಕ್ಷಿ ನೋಟವನ್ನು ಕಾಣಬಹುದಾಗಿದೆ. ಮತ್ತೊಂದು ಕೋಟೆಯಾದ ಕರ್ತಾರ್ಗಡ್, ಕುಂಭಲ್ಗಡ್ ಕೋಟೆಯ ಮುಖ್ಯ ಆವರಣದಲ್ಲೆ ಇದೆ.