ಖೊಡಾಲದಲ್ಲಿ ನಿರ್ಮಿಸಲಾಗಿರುವ ಮೌಂಟೇನ್ ರೇಂಜ್ ವೈಲ್ಡ್ ಕ್ಯಾಂಪ್ ಒಂದು ಆಕರ್ಷಣೀಯ ಸ್ಥಳ. ಸುಮಾರು 15 ಎಕರೆಯಷ್ಟು ಪ್ರದೇಶದಲ್ಲಿ ಹರಡಿದೆ.ಈ ಕ್ಯಾಂಪ್ ಸಹ್ಯಾದ್ರಿ ಶ್ರೇಣಿಯ ತಪ್ಪಲಿನಲ್ಲಿ ತಿರುಗಾಡುವ ಅವಕಾಶವನ್ನು ಕಲ್ಪಿಸುತ್ತದೆ. ಇನ್ನು, ಈ ಹಿಂದೆ ಚಾರಣ ಮಾಡಿ ಅನುಭವ ಇರುವ ಸಾಹಸಿ ಚಾರಣಿಗರು ಇಲ್ಲಿನ ಕೊರಕಲು ಪ್ರದೇಶಗಳಲ್ಲೆಲ್ಲಾ ಸುತ್ತಾಡಬಹುದು.
ಚಾರಣದ ಹೊರತಾಗಿಯೂ ವೈಲ್ಡ್ ಕ್ಯಾಂಪ್ ಇನ್ನಷ್ಟು ಕೆಲಸಗಳಿಗೆ ಅವಕಾಶ ಮಾಡಿಕೊಡುತ್ತದೆ. ಜೀಪ್ ಸಫಾರಿ, ಜಲಪಾತ ಏರುವುದು ಮತ್ತು ಬೆಟ್ಟದ ಮೇಲೆ ಬೈಕ್ ರೈಡಿಂಗ್ನಂತಹ ಸಾಹಸಿ ಪ್ರವೃತ್ತಿಯ ಕೆಲಸಗಳಿಗೂ ಇಲ್ಲಿ ಯಥೇಚ್ಛ ಅವಕಾಶವಿದೆ.
ಬೆಟ್ಟದ ಕಾಲುದಾರಿಯಲ್ಲಿ ಸುತ್ತಾಡುವುದಕ್ಕೆ, ಕಲ್ಲು ಬಂಡೆಗಳನ್ನು ಹತ್ತಿಳಿಯುವುದಕ್ಕೆ ಈ ಮೌಂಟೇನ್ ರೇಂಜ್ ವೈಲ್ಡ್ ಕ್ಯಾಂಪ್ ಅತ್ಯಂತ ಸೂಕ್ತವಾದ ತಾಣ.