Search
  • Follow NativePlanet
Share
ಮುಖಪುಟ » ಸ್ಥಳಗಳು» ಖೊಡಾಲಾ

ಮುನ್ನೋಟ – ಖೊಡಾಲಾ

7

ಖೊಡಾಲಾವು ಸಮುದ್ರ ಮಟ್ಟದಿಂದ ಸುಮಾರು 1800 ಅಡಿ ಎತ್ತರವಿರುವ ಒಂದು ಪುಟ್ಟ ಹಳ್ಳಿ. ಮಹಾರಾಷ್ಟ್ರ ಥಾಣೆ ಜಿಲ್ಲೆಯಲ್ಲಿ ಈ ಹಳ್ಳಿಯಿದೆ.ಇಲ್ಲಿನ ವೈತರಣಿ ನದಿ, ಇಗತ್ಪುರಿ-ಕಸಾರಾ ಘಾಟ್‌ ಮತ್ತು ತ್ರಿಂಗಲವಾಡಿ ಕೋಟೆಯಿಂದಾಗಿ ಖೊಡಾಲಾ ಅತ್ಯಂತ ಜನಪ್ರಿಯವಾಗಿದೆ.

ನಿಸರ್ಗದ ಅದ್ಭುತ

ಖೊಡಾಲಾ ದಟ್ಟ ಅರಣ್ಯದ ಪ್ರದೇಶ. ಹಿಂಬದಿಯಲ್ಲಿ ದೊಡ್ಡ ದೊಡ್ಡ ಪರ್ವತಗಳು. ಇವೆರಡೂ ಚಾರಣಿಗರನ್ನು ಕೈಬೀಸಿ ಕರೆಯುತ್ತವೆ. ಖೊಡಾಲಾದ ನಿಸರ್ಗ ಸಂಪತ್ತು ಪ್ರವಾಸಿಗರಿಗೆ ಅತ್ಯಂತ ಆಕರ್ಷಣೀಯವಾಗಿದೆ.

ಮುಂಬೈ ಮತ್ತು ಪುಣೆಯ ಸಮೀಪದಲ್ಲೆ ಇದ್ದರೂ ಖೊಡಾಲಾ ಅತ್ಯಂತ ಜನಪ್ರಿಯವೇನಲ್ಲ. ಸ್ಥಳೀಯ ಬುಡಕಟ್ಟು ಜನಾಂಗದವರು ಇಂದಿಗೂ ಇಲ್ಲಿ ತಮ್ಮ ವಿಶಿಷ್ಟ ಸಂಪ್ರದಾಯಗಳನ್ನು ಆಚರಿಸುತ್ತಾರೆ. ತಾಂತ್ರಿಕತೆ, ಆಧುನಿಕತೆಯ ಸ್ಪರ್ಶವಿಲ್ಲದ ಮೂಲ ಸಂಪ್ರದಾಯಗಳು ಭಾರತದಲ್ಲಿ ಇಂದಿಗೂ ಉಳಿದುಕೊಂಡಿರುವದಕ್ಕೆ ಸಾಕ್ಷಿ ಇಲ್ಲಿದೆ. ಅವರ ನಿತ್ಯದ ಬದುಕಿನಲ್ಲಿ ಜಾನಪದ ಹಾಡುಗಳು ಮತ್ತು ನೃತ್ಯವೂ ಕೂಡಾ ಒಂದು. ಹಾಗೆಯೆ ಅವರ ಉಡುಪಿನ ಶೈಲಿಯೂ ಅತ್ಯಂತ ವಿಶಿಷ್ಟ.

ಇಲ್ಲಿ ಕಂಡುಬಂದಿರುವ ಪ್ರಮುಖ ಆಕರ್ಷಣೆಗಳು

ಖೊಡಾಲಾ ಚಾರಣಿಗರ ಸ್ವರ್ಗ. ಚಾರಣಕ್ಕೆ ಮತ್ತು ಪರ್ವತ ಏರುವುದಕ್ಕೆ ಹಲವು ಅವಕಾಶಗಳನ್ನು ಇದು ನೀಡುತ್ತದೆ. ಅಮಲ ವನ್ಯಧಾಮವು ಸರಿಸೃಪಗಳ ಮತ್ತು ಇತರ ಪ್ರಮುಖ ಪ್ರಾಣಿ ಪಕ್ಷಿಗಳ ಆವಾಸ ಸ್ಥಾನವಾಗಿದೆ. ಇಲ್ಲಿನ ಸಸ್ಯಗಳ ಪ್ರಭೇದವು ಅತ್ಯಂತ ವಿಶಿಷ್ಟವಾದದ್ದು. ಜೊತೆಗೆ ಇಲ್ಲಿನ ಮರಗಳ ಮೇಲೆ ವಾಸಿಸುವ ವಲಸೆ ಹಕ್ಕಿಗಳದ್ದಂತೂ ಇತಿಹಾಸವೆ ಇದೆ.

ಖೊಡಾಲಾದ ಚಳಿಗಾಲವು ಪ್ರಶಾಂತವಾದ, ಸುಂದರ ವಾತಾವರಣವನ್ನು ಒದಗಿಸುತ್ತದೆ. ಮಳೆಗಾಲದ ನಂತರದ ಅವಧಿಯಲ್ಲಿ ಇಲ್ಲಿಗೆ ಬಂದರೆ ಸೊಗಸಾದ ಪ್ರವಾಸ ನಿಮ್ಮದಾಗುತ್ತದೆ. ಇನ್ನು, ಬುಡಕಟ್ಟು ಜನಾಂಗದ ಹಬ್ಬವಿದ್ದ ಸಮಯದಲ್ಲಿ ಬಂದರೆ ಇಲ್ಲಿನ ಜನರ ವಿಶಿಷ್ಟ ಸಂಪ್ರದಾಯಗಳನ್ನು ಗಮನಿಸಬಹುದು.

ಖೊಡಾಲಾಗೆ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ತಲುಪಬಹುದು. ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಖೊಡಾಲಾಗೆ ಸಮೀಪದ ವಿಮಾನ ನಿಲ್ದಾಣ. ಮಹಾರಾಷ್ಟ್ರದ ಇತರೆ ಪ್ರಮುಖ ವಿಮಾನ ನಿಲ್ದಾಣಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಇಗತ್ಪುರಿ ರೈಲು ನಿಲ್ದಾಣವು ಕೇವಲ 30 ಕಿ.ಮೀ ದೂರದಲ್ಲಿದೆ, ನೀವೇನಾದರೂ ಖೊಡಾಲಾದಿಂದ ಸುಮಾರು 450-500 ಕಿ.ಮೀ ದೂರದಲ್ಲಿದ್ದರೆ ಇಲ್ಲಿಗೆ ಡ್ರೈವ್‌ ಮಾಡಿಕೊಂಡು ಹೋಗುವುದು ಅತ್ಯಂತ ಖುಷಿಯ ಅನುಭವ.

ಖೊಡಾಲಾ ಪ್ರಸಿದ್ಧವಾಗಿದೆ

ಖೊಡಾಲಾ ಹವಾಮಾನ

ಉತ್ತಮ ಸಮಯ ಖೊಡಾಲಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಖೊಡಾಲಾ

  • ರಸ್ತೆಯ ಮೂಲಕ
    ಖೊಡಾಲಾ ಹಳ್ಳಿಗೆ ಬಸ್ಸಿನಲ್ಲಿ ಅಥವಾ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಎಲ್ಲಾ ಪ್ರಮುಖ ನಗರಗಳು ಮತ್ತು ಪಟ್ಟಣಗಳಿಂದ ಇಲ್ಲಿಗೆ ರಾಜ್ಯ ಸಾರಿಗೆ ಬಸ್‌ಗಳು ಖಾಸಗಿ ಪ್ರವಾಸಿ ಬಸ್‌ಗಳ ಸೌಲಭ್ಯವಿದೆ. ಈ ಬಸ್‌ಗಳು ಪ್ರಮುಖ ಪಟ್ಟಣಗಳಾದ ಪುಣೆ, ಮುಂಬೈ ಮತ್ತು ಇಗತ್ಪುರಿಗೆ ಸಂಪರ್ಕವನ್ನು ಹೊಂದಿದೆ. ನೀವು ಆಯ್ಕೆ ಮಾಡುವ ಬಸ್‌ನ ಆಧಾರದ ಮೇಲೆ ಬಸ್‌ ಪ್ರಯಾಣ ಶುಲ್ಕ ಇರುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಖೊಡಾಲಾಗೆ ಸಮೀಪದ ರೈಲ್ವೆ ನಿಲ್ದಾಣ ಇಗತ್ಪುರಿ ರೈಲ್ವೆ ನಿಲ್ದಾಣ. ಮಹಾರಾಷ್ಟ್ರದ ಪುಣೆ ಮತ್ತು ಮುಂಬೈಗೆ ಇಲ್ಲಿಂದ ನೇರ ಸಂಪರ್ಕ ರೈಲುಗಳಿವೆ. ಇಗತ್ಪುರಿ ರೈಲ್ವೆ ಸ್ಟೇಷನ್‌ ಎದುರು ನಿಮಗೆ ಟ್ಯಾಕ್ಸಿಗಳೂ ಸಿಗುತ್ತವೆ. ಇಲ್ಲಿಂದ ಟ್ಯಾಕ್ಸಿಗೆ ಸುಮಾರು 600 ರೂ. ವೆಚ್ಚ ತಗುಲಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀವ ವಿಮಾನ ನಿಲ್ದಾಣ ಖೊಡಾಲಾಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ. ಇದು ಸುಮಾರು 150 ಕಿ.ಮೀ ದೂರದಲ್ಲಿದೆ. ವಿಮಾನ ನಿಲ್ದಾಣವು ಭಾರತದ ಎಲ್ಲಾ ಪ್ರಮುಖ ನಗರಗಳಿಗೂ ಸಂಪರ್ಕವನ್ನು ಹೊಂದಿದೆ. ನಿತ್ಯದ ವಿಮಾನ ಹಾರಾಟಗಳು ಇಲ್ಲಿಂದ ಲಭ್ಯವಿದೆ. ಕೆಲವು ವಿದೇಶಿ ನಗರಗಳಿಗೂ ಇಲ್ಲಿಂದ ವಿಮಾನ ಸಂಪರ್ಕವಿದೆ. ವಿಮಾನ ನಿಲ್ದಾಣದಿಂದ ಖೊಡಾಲಾಗೆ ತಲುಪಲು ಟ್ಯಾಕ್ಸಿ ಸೇವೆ ಲಭ್ಯವಿದೆ. ಸುಮಾರು 3000 ರೂ. ಶುಲ್ಕವನ್ನು ನೀವು ಟ್ಯಾಕ್ಸಿಗೆ ತೆರಬೇಕಾಗಬಹುದು. ನಾಶಿಕದ ಗಾಂಧಿನಗರ ವಿಮಾನ ನಿಲ್ದಾಣ ಮತ್ತು ಪುಣೆಯ ಲೋಹೆಗಾಂವ್‌ ವಿಮಾನ ನಿಲ್ದಾಣವು ರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun