Search
  • Follow NativePlanet
Share
ಮುಖಪುಟ » ಸ್ಥಳಗಳು» ನಾಶಿಕ್

ನಾಶಿಕ್‌ - ಅಂದು ಹಾಗು ಇಂದು

24

ಮಹಾರಾಷ್ಟ್ರದ ನಾಶಿಕ್‌ ಪಟ್ಟಣವು ಉತ್ಪಾದಿಸುವ ದ್ರಾಕ್ಷಿಯ ಪ್ರಮಾಣದಿಂದಾಗಿ ದೇಶದ ದ್ರಾಕ್ಷಿ ರಾಜಧಾನಿಯಾಗಿ ಖ್ಯಾತಿ ಪಡೆದಿದೆ. ಮುಂಬೈನಿಂದ ಸುಮಾರು 180 ಕಿ.ಮೀ ದೂರದಲ್ಲಿದೆ ಮತ್ತು ಪುಣೆಗೆ ಸುಮಾರು 200 ಕಿ.ಮೀ ದೂರದಲ್ಲಿದೆ. ಈ ನಾಪಾ ಕಣಿವೆಯು ಪಶ್ಚಿಮ ಘಟ್ಟದಲ್ಲಿದೆ.

 

ಶಾತವಾಹನರ ಆಡಳಿತದ ಕಾಲದಲ್ಲಿ, ನಾಶಿಕ್‌ ಪಟ್ಟಣವು ರಾಜಧಾನಿಯಾಗಿತ್ತು. 16 ನೇ ಶತಮಾನದಲ್ಲಿ ಈ ನಗರವು ಮೊಘಲರ ಆಳ್ವಿಕೆಗೆ ಒಳಪಟ್ಟ ನಂತರದಲ್ಲಿ ಇದನ್ನು ಗುಲ್ಷನಾಬಾದ್‌ ಎಂದು ಹೆಸರು ಬದಲಿಸಲಾಯಿತು. ಅವರಿಂದ ನಂತರದಲ್ಲಿ ಪೇಶ್ವರಿಗೆ ಹಸ್ತಾಂತರವಾಯಿತು, ಇವರು 19 ನೇ ಶತಮಾನದಲ್ಲಿ ಅಂತಿಮವಾಗಿ ಬ್ರಿಟೀಷರಿಗೆ ಸೋತು ನಾಶಿಕ್‌ ಪಟ್ಟಣವನ್ನು ಬಿಟ್ಟುಕೊಟ್ಟರು. ಜನಪ್ರಿಯ ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ವೀರ ಸಾವರ್ಕರ, ನಾಶಿಕ್‌ ಪಟ್ಟಣದವರಾಗಿದ್ದರು. ರಾಮ 14 ವರ್ಷ ವನವಾಸಕ್ಕೆ ತೆರಳುವ ಸಂದರ್ಭ ಬಂದಾಗ ನಾಶಿಕ್‌ ಪಟ್ಟಣದ ಸಮೀಪದಲ್ಲಿನ ತಪೋವನದಲ್ಲಿ ಇಳಿದುಕೊಂಡಿದ್ದ ಎನ್ನಲಾಗುತ್ತದೆ. ಈ ಪ್ರದೇಶದಲ್ಲೇ, ಲಕ್ಷ್ಮಣನು ಶೂರ್ಪನಖಿಯ ಮೂಗನ್ನು ಕತ್ತರಿಸಿದ ಎಂಬ ಐತಿಹ್ಯವಿದ್ದು, ಇದರಿಂದಾಗಿಯೇ ನಾಶಿಕ್‌ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ.

ಕಾಳಿದಾಸ ಮತ್ತು ವಾಲ್ಮೀಕಿಯರು ನಾಶಿಕ್‌ ಬಗ್ಗೆ ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಜನಪ್ರಿಯ ತತ್ವಶಾಸ್ತ್ರಜ್ಞ ಪ್ಲೊಟೆಮಿಯೂ ಕೂಡಾ ಕ್ರಿ.ಪೂ 150 ರಲ್ಲಿ ನಾಶಿಕ್‌ ಬಗ್ಗೆ ಉಲ್ಲೇಖಿಸಿದ್ದಾರೆ. ನಾಶಿಕ್‌ ಸದ್ಯ ಮಹಾರಾಷ್ಟ್ರದ ವೇಗವಾಗಿ ಬೆಳೆಯುತ್ತಿರುವ ನಗರ. ಮೂಲಭೂತ ಸೌಲಭ್ಯ, ಶಿಕ್ಷಣ, ಉದ್ಯಮ ಮತ್ತು ಇನ್ನೂ ಹಲವು ಕ್ಷೇತ್ರಗಳಲ್ಲಿ ನಾಶಿಕ್‌ ಪಟ್ಟಣವು ವೇಗವಾಗಿ ಬೆಳೆಯುತ್ತಿದೆ. 

ಪವಿತ್ರ ಸ್ಥಳಗಳು ಹಾಗೂ ಇನ್ನೂ ಹಲವು...   

ತ್ರ್ಯಂಬಕೇಶ್ವರ ದೇವಾಲಯವು ನಾಶಿಕ್‌ ಪಟ್ಟಣದಿಂದ ಕೆಲವೇ ಕಿಲೋಮೀಟರುಗಳಷ್ಟು ದೂರದಲ್ಲಿದೆ ಹಾಗೂ ಇದು ಪ್ರಮುಖ ಪ್ರವಾಸಿ ತಾಣವಾಗಿದೆ. ಭಾರತದಲ್ಲೇ ವಿಶಿಷ್ಟವಾದ ನಾಲ್ಕು ಜ್ಯೋತಿರ್ಲಿಂಗಗಳನ್ನು ಹೊಂದಿರುವ ಮುಕ್ತಿಧಾಮವೂ ಕೂಡಾ ಆಕರ್ಷಕ ಪ್ರವಾಸಿ ತಾಣ. ಇಲ್ಲಿ ಹಿಂದುಗಳ ಪವಿತ್ರ ಗ್ರಂಥ ಭಗವದ್ಗೀತೆಯ ಉಕ್ತಿಗಳನ್ನು ಗೋಡೆಯ ಮೇಲೆ ಕೆತ್ತಲಾಗಿದೆ. ಕಾಲಾರಾಮ್‌ ದೇವಸ್ಥಾನವೂ ಕೂಡಾ ಇನ್ನೊಂದು ಪ್ರಮುಖ ದೇವಸ್ಥಾನವಾಗಿದ್ದು ಈ ದೇವಸ್ಥಾನವನ್ನು ಕಪ್ಪು ಕಲ್ಲಿನಿಂದ ಕಟ್ಟಲಾಗಿದೆ.

ಸೀತೆ ಮತ್ತು ರಾಮಾಯಣದ ಹಲವು ಸಂಗತಿಗಳಿಗೆ ಕಾರಣವಾದ ಪಂಚವಟಿಯನ್ನು ಪ್ರವಾಸಿಗರು ಭೇಟಿ ಮಾಡಬಹುದು. ಏಷ್ಯಾದಲ್ಲೇ ಏಕೈಕ ನಾಣ್ಯಗಳ ಮ್ಯೂಸಿಯಂ ಇಲ್ಲಿದೆ. ನಾಣ್ಯ ಸಂಗ್ರಹಕಾರರು ಮತ್ತು ನಾಣ್ಯ ಪರಿಣಿತರು ಇಲ್ಲಿ ಪ್ರದರ್ಶನಕ್ಕಿಟ್ಟಿರುವ ನಾಣ್ಯಗಳನ್ನು ವೀಕ್ಷಿಸಬಹುದು. ಇಲ್ಲಿ ಕೆಲವು ವರ್ಷಗಳ ಹಿಂದಿನಿಂದ ಶತಮಾನಗಳ ಹಿಂದಿನ ನಾಣ್ಯಗಳೂ ಕೂಡಾ ಇವೆ. ಇಲ್ಲಿಗೆ ಸಮೀಪದಲ್ಲಿ ಫಿರಂಗಿ ಕೇಂದ್ರ ಕೂಡಾ ಇದೆ.

ಕುಂಭಮೇಳವು ಇಲ್ಲಿ ನಡೆಯುವ ಅತಿದೊಡ್ಡ ಧಾರ್ಮಿಕ ಕಾರ್ಯ. ಇಡೀ ಜಗತ್ತಿನಲ್ಲೇ ಇದು ಅತಿ ದೊಡ್ಡ ಮತ್ತು ವೈಭವಯುತವಾದ ಧಾರ್ಮಿಕ ಕಾರ್ಯಕ್ರಮ. ಇದನ್ನು ಕೇವಲ ಹನ್ನೆರಡು ವರ್ಷಗಳಿಗೊಮ್ಮೆ ನಡೆಸಲಾಗುವುದು. ಕೋಟಿಗಟ್ಟಲೆ ಜನ ಈ ಸಂದರ್ಭದಲ್ಲಿ ನಾಶಿಕ್‌ಗೆ ಭೇಟಿಕೊಡುತ್ತಾರೆ ಹಾಗೂ ಇಲ್ಲಿ ನಡೆಯುವ ವಿವಿಧ ಮನರಂಜನೆಯಲ್ಲಿ ಪಾಲ್ಗೊಳ್ಳುತ್ತಾರೆ.

ಎಲ್ಲಾ ವರ್ಗದವರಿಗೂ ಹೊಂದಿಕೆಯಾಗುವಂತಹ ವಸತಿ ವ್ಯವಸ್ಥೆ ಇಲ್ಲಿದೆ. ಫೈವ್‌ ಸ್ಟಾರ್ ಹೋಟೆಲ್‌ಗಳು, ತ್ರಿ ಸ್ಟಾರ್ ಹೋಟೆಲ್‌ಗಳಿಂದ ಧರ್ಮಶಾಲೆಗಳವರೆಗೆ ವಸತಿ ವ್ಯವಸ್ಥೆ ಇಲ್ಲಿದ್ದು, ಎಲ್ಲಾ ರೀತಿಯ ಭಕ್ತರೂ ಕೂಡಾ ನಾಶಿಕ್‌ಗೆ ಭೇಟಿನೀಡಬಹುದು. ಇಲ್ಲಿನ ಭೇಟಿ ಭಕ್ತರಿಗೆ ನೆನಪಿಡುವಂಥದ್ದಾಗಿರುತ್ತದೆ ಮತ್ತು ಪ್ರಶಾಂತವಾಗಿರುತ್ತದೆ.

ನಾಶಿಕ್‌ ತನ್ನ ದ್ರಾಕ್ಷಿ ಬೆಳೆಯಿಂದ ಪ್ರಸಿದ್ಧಿಯನ್ನು ಪಡೆದಿದೆ. ಸುಲಾ ದ್ರಾಕ್ಷಿ  ಕ್ಷೇತ್ರವನ್ನು ವೈನ್‌ ಪ್ರಿಯರು ಭೇಟಿ ನೀಡಬಹುದು. ರುಚಿರುಚಿಯಾದ ಚಿವ್ಡಾ ರುಚಿ ನೋಡುವುದನ್ನು ಪ್ರವಾಸಿಗರು ತಪ್ಪಿಸಿಕೊಳ್ಳಬಾರದು.

ವಾಸ್ತವಗಳ ಮುನ್ನೋಟ

ನಾಶಿಕ್‌ ಬಗ್ಗೆ ಜನಪ್ರಿಯ ಸಂಗತಿ ಎಂದರೆ ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಇಲ್ಲಿಂದಲೇ ಆರಂಭಿಸಿದರು. ಇದು ಅದ್ಭುತವಾದ ಯಶಸ್ಸನ್ನು ತಂದುಕೊಟ್ಟಿತು. ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಚಳುವಳಿಗೆ ಬೆಂಬಲವಾಗಿ ಸಮಾಜದ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಹೋರಾಡಿದರು.

ನಾಶಿಕ್‌ದ ವಾತಾವರಣವು ಉಷ್ಣವಲಯದ್ದಾಗಿದ್ದು ಅತಿಯಾದ ಉಷ್ಣಾಂಶವ ಬೇಸಿಗೆಯಲ್ಲಿರುತ್ತದೆ. ಇದರ ಪರಿಣಾಮವಾಗಿ ಬೇಸಿಗೆಯಲ್ಲಿ ಪ್ರವಾಸಿಗರು ಇಲ್ಲಿಗೆ ಪ್ರಯಾಣ ಕೈಗೊಳ್ಳುವುದು ಸೂಕ್ತವಲ್ಲ. ಹಾಗೆಯೇ ಚಳಿಗಾಲವು ಪ್ರವಾಸಿಗರಿಗೆ ಅನುಕೂಲವಾದ ಸಮಯವಾಗಿದೆ, ಮಳೆಗಾಲ ಕೂಡಾ ಈ ನಗರದಲ್ಲಿ ಕಾಲ ಕಳೆಯಲು ಉತ್ತಮವಾದ ಸಮಯವಾಗಿದ್ದು, ಮಳೆಯನ್ನು ಇಷ್ಟಪಡುವವರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.

ನಾಶಿಕ್‌ ದೇಶದ ಮಧ್ಯಭಾಗದಲ್ಲಿದ್ದು, ದೇಶದ ಯಾವುದೇ ಭಾಗದಿಂದ ಇಲ್ಲಿ ಬರುವುದೂ ಕೂಡಾ ಕಷ್ಟಕರವಾಗಲಾರದು. ವಿಮಾನದ ಮೂಲಕ ಬರುವುದಾದರೆ ನಾಶಿಕ್‌ ವಿಮಾನ ನಿಲ್ದಾಣವು ಸಮೀಪದಲ್ಲೇ ಇದೆ. ರೈಲ್ವೇ ಮಾರ್ಗವೂ ಕೂಡಾ ಮುಂಬೈ, ಪುಣೆ, ಹೈದರಾಬಾದ್‌ ಮತ್ತು ಬೆಂಗಳೂರಿಗೆ ನೇರವಾಗಿ ಸಂಪರ್ಕವನ್ನು ಹೊಂದಿದೆ. ಇದು ಪ್ರಮುಖ ಕೇಂದ್ರವಾಗಿದೆ. ರಸ್ತೆಯ ಮೂಲಕವಾದರೆ ಹಲವು ಸಾಧ್ಯತೆಗಳು ಇವೆ. ರಾಜ್ಯ ಸಾರಿಗೆ ಮತ್ತು ಖಾಸಗಿ ಸಾರಿಗೆ ಬಸ್ಸುಗಳು ಲಭ್ಯವಿದೆ. ಎಲ್ಲಾ ವರ್ಗದವರಿಗೂ ಕೂಡಾ ಪ್ರಯಾಣ ವೆಚ್ಚವು ಸಾಧಾರಣವಾಗಿದ್ದು ಹೊರೆಯಾಗದಂತಿದೆ.

ನಾಶಿಕ್‌ ಭಾರತದಲ್ಲೇ ಅತ್ಯಂತ ಪ್ರಮುಖ ಧಾರ್ಮಿಕ ತಾಣ ಮತ್ತು ನಮ್ಮ ಇತಿಹಾಸದಲ್ಲಿ ಆಳವಾದ ಬೇರನ್ನು ಹೊಂದಿದೆ. ನಗರವು ಹಿಂದೆಂದೂ ಕಾಣದಂತೆ ಅಭಿವೃದ್ಧಿಗೊಳ್ಳುತ್ತಿದೆ. ಆಧುನಿಕತೆ ಮತ್ತು ಸಾಂಪ್ರದಾಯಿಕತೆಯ ಅತ್ಯುತ್ತಮ ಸಮ್ಮಿಳನವಾಗಿದೆ ಇದು. ಈ ನಗರಕ್ಕೆ ಒಮ್ಮ ಪ್ರಯಾಣ ಮಾಡಿ, ನಂತರ ನೀವು ಅತ್ಯದ್ಭುತ ನೆನಪಿನ ಗಣಿಯನ್ನು ಹೊತ್ತೊಯ್ಯಿರಿ.

ನಾಶಿಕ್ ಪ್ರಸಿದ್ಧವಾಗಿದೆ

ನಾಶಿಕ್ ಹವಾಮಾನ

ಉತ್ತಮ ಸಮಯ ನಾಶಿಕ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ನಾಶಿಕ್

  • ರಸ್ತೆಯ ಮೂಲಕ
    ಮುಂಬೈನಿಂದ ನಾಶಿಕ್‌ಗೆ 4000 ರೂ. ಟ್ಯಾಕ್ಸಿ ಶುಲ್ಕ ಆಗಲಿದೆ. ಎನ್‌ಎಚ್‌-3 ರಾಷ್ಟ್ರೀಯ ಹೆದ್ದಾರಿಯು ನಾಶಿಕ್‌ನಿಂದ ಮುಂಬೈಗೆ ಥಾಣೆ-ಕಸರ್-ಇಗತ್ಪುರಿ ದಾರಿಯಿಂದ ಸಂಪರ್ಕವನ್ನು ಹೊಂದಿವೆ. ಪುಣೆಯು ನಾಶಿಕ್‌ನಿಂದ ಸುಮಾರು 220 ಕಿ.ಮೀ ದೂರವಿದೆ. ಇಲ್ಲಿ ಹಲವಾರು ರಾಜ್ಯ ಸಾರಿಗೆ ಮತ್ತು ಖಾಸಗಿ ಸಾರಿಗೆ ಬಸ್‌ಗಳು ನಾಶಿಕ್‌ಗೆ ಹಲವು ನಗರಗಳಿಂದ ಸಂಪರ್ಕವನ್ನು ಕಲ್ಪಿಸಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮಹಾರಾಷ್ಟ್ರದ ನಗರಗಳಿಗೆ ಮತ್ತು ಇತರ ನಗರಗಳಿಗೆ ರೈಲಿನ ಮೂಲಕ ನಾಶಿಕ್‌ ಸೂಕ್ತ ಸಂಪರ್ಕವನ್ನು ಹೊಂದಿದೆ. 4.5 ಘಂಟೆಯಲ್ಲಿ ಪಂಚವಟಿ ಎಕ್ಸ್‌ಪ್ರೆಸ್‌ ನಿಮ್ಮನ್ನು ಮುಂಬೈನಿಂದ ನಾಶಿಕ್‌ಗೆ ತಲುಪಿಸಬಲ್ಲದು. ನಾಶಿಕ್‌ನಿಂದ ನಿಮ್ಮನ್ನು ಮುಂದೆ ಕರೆದೊಯ್ಯಲು ಟ್ಯಾಕ್ಸಿಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ನಾಶಿಕ್‌ಗೆ ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ ಹತ್ತಿರವಾಗಿದೆ. ಇದು ಸುಮಾರು 185 ಕಿ.ಮೀ ದೂರದಲ್ಲಿದೆ. ಭಾರತ ಮತ್ತು ವಿದೇಶಗಳಿಗೆ ಈ ವಿಮಾನ ನಿಲ್ದಾಣ ಸೂಕ್ತ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun