Search
  • Follow NativePlanet
Share
ಮುಖಪುಟ » ಸ್ಥಳಗಳು» ದುರ್ಶೆಟ್

ದುರ್ಶೆಟ್- ಒಂದು ನೋಟ

10

ದುರ್ಶೆಟ್ ಎಂಬುದು ಅಂಬಾ ನದಿಯ ದಂಡೆಯ ಮೇಲೆ ನೆಲೆಗೊಂಡಿರುವ ಒಂದು ಸಣ್ಣ ಹಳ್ಳಿಯಾಗಿದೆ. ಪಾಲಿ ಮತ್ತು ಮಹದ್‍ನ ಪವಿತ್ರ ಅಷ್ಟ ವಿನಾಯಕ ದೇವಸ್ಥಾನದ ನಡುವೆ ನೆಲೆಸಿರುವ ಈ ಊರು ಕಾಡಿನ ನಡುವೆ ಸುಮಾರು 42 ಎಕರೆಯಷ್ಟು ಪ್ರದೇಶದಲ್ಲಿ ತಲೆ ಎತ್ತಿದೆ.

ದುರ್ಶೆಟ್ ಊರು ಹೆದ್ದಾರಿಯ ಪಕ್ಕದ ಕಫೋಲಿ ಎಂಬ ಹಳ್ಳಿಗೆ ಸ್ವಲ್ಪದೂರದಲ್ಲಿ ಸಹ್ಯಾದ್ರಿಯ ಮಡಿಲಿನಲ್ಲಿ ಅತ್ಯಂತ ಆಯಕಟ್ಟಿನ ಸ್ಥಳದಲ್ಲಿ ಆರಾಮವಾಗಿ ನೆಲೆಸಿದೆ. ಈ ಪ್ರಸಿದ್ಧ ಪ್ರವಾಸಿ ತಾಣವು ಮುಖ್ಯವಾಗಿ ಮಾವು ಮತ್ತು ಮಾಹು ತೋಪುಗಳ ಹಚ್ಚ ಹಸಿರಿನಿಂದ ಆವೃತ್ತವಾಗಿವೆ. ನಗರದ ಜಂಜಡಗಳಿಂದ ಹೊರಬಂದು ಪ್ರಕೃತಿಯ ಮಡಿಲಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಲು ಬಯಸುವವರಿಗೆ ವಾರಾಂತ್ಯದಲ್ಲಿ ಇದು ಪ್ರಶಸ್ತವಾದ ಸ್ಥಳವಾಗಿದೆ.

ದುರ್ಶೆಟ್ ಮುಂಬೈ ಮತ್ತು ಪುಣೆಗಳಂತಹ ಪ್ರಮುಖ ನಗರಗಳಿಗೆ ಸಮೀಪದಲ್ಲಿರುವುದರಿಂದಾಗಿ ನಗರದ ಗೌಜು ಗದ್ದಲಗಳಿಂದ ದೂರವಿರಲು ಬಯಸುವ ಜನರು ಇಲ್ಲಿಗೆ ಬಂದು ವಿಶ್ರಾಂತಿ ಪಡೆದು ಹೋಗಲು ಸಹಾಯಕವಾಗಿದೆ.

ದುರ್ಶೆಟ್ - ಹಚ್ಚ ಹಸಿರಿನ ಹಳ್ಳಿ.

ದುರ್ಶೆಟ್ ಸಹ್ಯಾದ್ರಿ ಪರ್ವತ ಶ್ರೇಣಿಗಳ ಭವ್ಯವಾದ ನೋಟವನ್ನು ಒದಗಿಸುತ್ತದೆ. ಈ ಪರ್ವತಗಳ ನಡುವೆ ಒಂದು ಸಣ್ಣ ನಡಿಗೆಯನ್ನು ಕೈಗೊಂಡರೆ ಸಾಕು ನೀವು ಅದ್ಭುತವಾದ ಮತ್ತು ಅಪರೂಪವಾದ ಪಕ್ಷಿಗಳ ಪ್ರಭೇದಗಳನ್ನು ಕಣ್ತುಂಬಿಕೊಳ್ಳಬಹುದು. ಹಕ್ಕಿಗಳ ಕಲರವ ಮತ್ತು ಪರಿಶುದ್ಧವಾದ ಹವೆ, ಹಚ್ಚ ಹಸಿರಿನ ವನಸಿರಿ ನಿಮ್ಮ ನಡಿಗೆಯ ಆಯಾಸವನ್ನು ಹತ್ತಿರ ಸುಳಿಯದಂತೆ ಮಾಡುತ್ತವೆ.

ದುರ್ಶೆಟ್‍ನಲ್ಲಿ ತಂಪಾದ ಹವೆ ಮತ್ತು ಶುಭ್ರವಾದ ಆಕಾಶವನ್ನು ನೋಡಿ ಅನುಭವಿಸುವ ಅದ್ಭುತವಾದ ಅವಕಾಶವು ಸಿಗುತ್ತದೆ. ಮಳೆಗಾಲದಲ್ಲಿ ನೀವು ಇಲ್ಲಿ ಮಣ್ಣಿನ ಘಮಲನ್ನು ಮತ್ತು ಪ್ರಕೃತಿ ಮಾತೆಯ ಸಾಮೀಪ್ಯದ ಅನುಭವವನ್ನು ಸಹ ಅನುಭವಿಸಬಹುದು.

ದುರ್ಶೆಟ್‍ನಲ್ಲಿ ಏನೇನು ನೋಡಬಹುದು?

ಅದ್ಭುತವಾದ ಪರಿಸರದಿಂದ ಕೂಡಿರುವ ದುರ್ಶೆಟ್ ಚಾರಣಿಗರಿಗೆ ಮತ್ತು ವನ್ಯಜೀವಿಗಳನ್ನು ನೋಡಲು ಬಯಸುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಪಾಳಿ ಗಣಪತಿ ದೇವಾಲಯ ಮತ್ತು ಮಹದ್ ಗಣಪತಿ ದೇವಾಲಯಗಳು ಇಲ್ಲಿಗೆ ಆಗಮಿಸುವವರ ಧಾರ್ಮಿಕ, ಅಧ್ಯಾತ್ಮಿಕ ಮತ್ತು ನಂಬಿಕೆಗಳನ್ನು ಮರು ಪೂರಣ ಮಾಡುವ ಸ್ಥಳಗಳಾಗಿ ಖ್ಯಾತಿ ಪಡೆದಿವೆ.

ಎಲ್ಲರಿಗು ತಿಳಿದಿರುವ ಒಂದು ವಿಚಾರವೇನೆಂದರೆ ದುರ್ಶೆಟ್ ಒಂದಾನೊಂದು ಕಾಲದಲ್ಲಿ ಉಂಬರ್ ಖಿಂಡ್‍ಗೆ ರಣರಂಗವಾಗಿ ಸೇವೆ ಸಲ್ಲಿಸಿತ್ತು. ಇಲ್ಲಿ ಶಿವಾಜಿ ಮಹಾರಾಜನು ಕರ್ಟಲಬ್ ಖಾನ್‍ನೊಂದಿಗೆ ಯುದ್ಧ ಮಾಡಿದ್ದನು. ದುರ್ಶೆಟ್‍ಗೆ ವಿಮಾನ, ರೈಲು ಮತ್ತು ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು.

ದುರ್ಶೆಟ್ ಪ್ರಸಿದ್ಧವಾಗಿದೆ

ದುರ್ಶೆಟ್ ಹವಾಮಾನ

ಉತ್ತಮ ಸಮಯ ದುರ್ಶೆಟ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ದುರ್ಶೆಟ್

  • ರಸ್ತೆಯ ಮೂಲಕ
    ದುರ್ಶೆಟ್‍ಗೆ ಮಹಾರಾಷ್ಟ್ರದ ಒಳಗಿನ ಮತ್ತು ಹೊರಗಿನ ರಾಜ್ಯದ ಇನ್ನಿತರ ನಗರಗಳಿಂದ ರಾಜ್ಯ ರಸ್ತೆ ಸಾರಿಗೆ ಮತ್ತು ಖಾಸಗಿ ಬಸ್ಸುಗಳು ಬಂದು ಹೋಗುತ್ತಿರುತ್ತವೆ. ನೀವು ಮುಂಬಯಿಯಿಂದ ದುರ್ಶೆಟ್‍ಗೆ ಬಸ್ಸಿನಲ್ಲಿ ಬರುತ್ತಿರೆಂದಾದರೆ ಇದಕ್ಕೆ ತಗುಲುವ ವೆಚ್ಚ ಸುಮಾರು 250 ರೂಪಾಯಿ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ದುರ್ಶೆಟ್ ಕೊಂಕಣ ರೈಲು ಮಾರ್ಗದ ನಡುವೆ ಬರುತ್ತದೆ. ಮುಂಬಯಿಯ ವಿಕ್ಟೋರಿಯಾ ಟರ್ಮಿನಸ್ (ವಿಟಿ) ಇಲ್ಲಿಗೆ ಅತ್ಯಂತ ಸಮೀಪದ ಪ್ರಮುಖ ರೈಲು ನಿಲ್ದಾಣವಾಗಿದೆ. ವಿ.ಟಿ ಯು ಭಾರತದ ಇನ್ನಿತರ ನಗರಗಳ ರೈಲು ನಿಲ್ದಾಣದೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ವಿಮಾನ ನಿಲ್ದಾಣಕ್ಕೆ ಹೋಲಿಸಿದರೆ, ಇಲ್ಲಿಂದ ದುರ್ಶೆಟ್‍ಗೆ ಟ್ಯಾಕ್ಸಿ ದರವು ಸುಮಾರು 2000 ರೂಪಾಯಿಯಾಗುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಛತ್ರಪತಿ ಶಿವಾಜಿ ವಿಮಾನ ನಿಲ್ದಾಣವು ದುರ್ಶೆಟ್‍ಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣವಾಗಿದೆ. ಇದು ಇಲ್ಲಿಂದ ಸುಮಾರು 150 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣಕ್ಕೆ ದೇಶದ ಮತ್ತು ವಿಶ್ವದ ಇನ್ನಿತರ ನಗರಗಳಿಂದ ದೈನಂದಿನ ಮತ್ತು ನಿರಂತರ ಮಾರ್ಗಗಳ ಮೂಲಕ ವಿಮಾನಗಳು ಬಂದು ಹೋಗುತ್ತಿರುತ್ತವೆ. ಈ ವಿಮಾನ ನಿಲ್ದಾಣದಿಂದ ದುರ್ಶೆಟ್‍ಗೆ ಟ್ಯಾಕ್ಸಿಗಳು ಲಭಿಸುತ್ತವೆ. ಅವುಗಳ ದರವು ಅಂದಾಜು 2000 ರೂಪಾಯಿ ಇರುತ್ತದೆ. ಪುಣೆಯ ಲೋಹೆಗಾಂವ್ ವಿಮಾನ ನಿಲ್ದಾಣ ಮತ್ತು ನಾಶಿಕ್‍ನ ಗಾಂಧಿನಗರ್ ವಿಮಾನ ನಿಲ್ದಾಣಗಳು ಇಲ್ಲಿಗೆ ಸಮೀಪದ ಇನ್ನಿತರ ವಿಮಾನ ನಿಲ್ದಾಣಗಳಾಗಿವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri