ಜಿಮ್ಖಾನಾ ಕ್ಲಬ್ ಬ್ರಿಟಿಷರು ಜೋರ್ಹತ್ ನಲ್ಲಿದ್ದರು ಎನ್ನುವುದಕ್ಕೆ ಅತ್ಯಂತ ಹಳೆಯ ದಾಖಲೆಯಾಗಿದೆ. 1876ರಲ್ಲಿ ಜೋರ್ಹತ್ ಸುತ್ತಮುತ್ತಲು ಟೀ ಎಸ್ಟೇಟ್ ಗಳ ಆಡಳಿತ ನೋಡಿಕೊಳ್ಳುತ್ತಿದ್ದ ಬ್ರಿಟಿಷರ ವಿರಾಮಕ್ಕಾಗಿ ಜಿಮ್ಖಾನಾ ಕ್ಲಬ್ ನ್ನು ನಿರ್ಮಿಸಲಾಗಿತ್ತು. ನಗರದ ಮಧ್ಯಭಾಗದಿಂದ ಜಿಮ್ಖಾನಾ ತನಕ ಜೋರ್ಹತ್ ನ ಪ್ರಪ್ರಥಮ ಡಾಮರು ರಸ್ತೆಯನ್ನು ಇದೇ ವೇಳೆ ನಿರ್ಮಿಸಲಾಯಿತು.
ಜಿಮ್ಖಾನಾ ಕ್ಲಬ್ ನಲ್ಲಿ 9 ಹೋಲ್ ನ ಗಾಲ್ಫ್ ಕೋರ್ಸ್ ಇದೆ ಮತ್ತು ಇದು ಏಶ್ಯಾದ ಅತ್ಯಂತ ಹಳೆಯ ಹಾಗೂ ವಿಶ್ವದ ಮೂರನೇ ಅತೀ ಹಳೆಯ ಗಾಲ್ಫ್ ಕೋರ್ಸ್ ಆಗಿದೆ. ಜಿಮ್ಖಾನಾ ಕ್ಲಬ್ ನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಕ್ಕೆ ಸೇರಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಹಚ್ಚಹಸಿರಿನ ಗಾಲ್ಫ್ ಕೋರ್ಸಿನೊಂದಿಗೆ ಇಲ್ಲಿ ಇತರ ಕ್ರೀಡೆಗಳಾದ ಟೆನಿಸ್, ಬಿಲಿಯರ್ಡ್ಸ್ ಮತ್ತು ಪೋಲೋ ಕ್ರೀಡೆಗಳಿಗೆ ವ್ಯವಸ್ಥೆಯಿದೆ. ಸ್ವಿಮ್ಮಿಂಗ್ ಪೂಲ್, ಜಂಟಲ್ ಮೆನ್ ಬಾರ್ ಮತ್ತು ರಂಗಮಂದಿರ ಕ್ಲಬ್ ನ ಮೂಲಭೂತ ಸೌಲಭ್ಯವನ್ನು ಪೂರ್ಣಗೊಳಿಸುತ್ತದೆ. ಪ್ರತೀ ವರ್ಷ ಸಿ.ಕೆ. ನಾಯ್ಡು 19ರ ಕೆಳಹರೆಯದ ಕ್ರಿಕೆಟ್ ಟೂರ್ನಮೆಂಟ್ ಇಲ್ಲಿ ನಡೆಯುತ್ತದೆ.