ಅಸ್ಸಾಂನ ಮೊದಲ ಟೀ ಗಾರ್ಡನ್ ಆಗಿರುವ ಸಿನ್ನಮೊರಾ ತನ್ನ ಟೀಗೆ ಪ್ರಸಿದ್ಧಿ. ಸಿನ್ನಮೊರಾ ಟೀ ಎಸ್ಟೇಟ್ 1850ರಲ್ಲಿ ಆರಂಭವಾಗಿತ್ತು. ಎಸ್ಟೇಟ್ ನ್ನು ಮನಿರಾಮ್ ದೆವಾನ್ ಎಂಬವರು ಸ್ಥಾಪಿಸಿದ್ದರು. ಜೋರ್ಹತ್ ನಲ್ಲಿದ್ದ ಬ್ರಿಟಿಷ್ ಸರ್ಕಾರದ ಅಸಿಸ್ಟೆಂಟ್ ಕಮಿಷನರ್ ಗೆ ಮನಿರಾಮ್ ದೆವಾನ್ ಶಿರಸ್ತೇದಾರರಾಗಿದ್ದರು. ಸಿನ್ನಮೊರಾ ಟೀ ಎಸ್ಟೇಟ್ ಜೋರ್ಹತ್ ನಗರದಿಂದ 10 ಕಿ.ಮೀ. ದೂರದಲ್ಲಿದೆ.
ಅತ್ಯುಚ್ಛ ಕೊಯ್ಲಿನ ಋತುವಿನಲ್ಲಿ ಟೀ ಗಾರ್ಡನ್ ನನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಸಣ್ಣ ಸಣ್ಣ ಚಹಾ ಪೊದೆಗಳ ಮಧ್ಯೆ ಇರುವ ಕಿರುದಾರಿಯಲ್ಲಿ ನಡೆದಾಡುವುದೇ ಒಂದು ಅದ್ಭುತ ಅನುಭವ. ಟೀ ಕೊಯ್ಲು ಹೇಗೆ ಮಾಡಬೇಕೆಂದು ತಿಳಿಯಬೇಕಾದರೆ ಸಿನ್ನಮೊರಾ ಟೀ ಎಸ್ಟೇಟ್ ಕಲಿಯಲು ಒಳ್ಳೆಯ ಸ್ಥಳ. ನಗುಮುಖದಿಂದ ಸ್ವಾಗತಿಸುವ ಎಸ್ಟೇಟ್ ಕಾರ್ಮಿಕರೊಂದಿಗೆ ಮಾತನಾಡಿದಾಗ ಕಲಿತುಕೊಳ್ಳುವುದು ಕಷ್ಟವೇನಲ್ಲ. ಗಾರ್ಡನ್ ಗೆ ಪ್ರಯಾಣಿಸಲು ಜೋರ್ಹತ್ ನಗರದಿಂದ ಬಾಡಿಗೆ ಕಾರು ಅಥವಾ ರಾಜ್ಯ ಸಾರಿಗೆ ಬಸ್ ಗಳನ್ನು ಬಳಸಬಹುದು.