ಕಟಕ್ ನಿಂದ ಸುಮಾರು 55 ಕಿ.ಮೀ. ದೂರದಲ್ಲಿ ಲಲಿತಗಿರಿ ಬೆಟ್ಟ ಇದೆ. ಬೌದ್ಧ ಧರ್ಮದ ಅನುಯಾಯಿಗಳಿಗೆ ಇದು ತೀರ್ಥಯಾತ್ರಾ ಕ್ಷೇತ್ರವಾಗಿದೆ. ಹಾಗೆಯೆ, ಇದು ಪ್ರವಾಸಿಗರ ನೆಚ್ಚಿನ ತಾಣವೂ ಆಗಿದೆ. ಒಂದು ಕಾಲದಲ್ಲಿ ಇದೇ ಸ್ಥಳದಲ್ಲಿ ಬೌದ್ಧ ಮಠವು ಪ್ರವರ್ಧಮಾನದಲ್ಲಿತ್ತು. ಲಲಿತಗಿರಿ ಬೆಟ್ಟ ರತ್ನಗಿರಿ ಹಾಗು ಉದಯಗಿರಿ ಬೆಟ್ಟಗಳ ಜೊತೆ ಡೈಮಂಡ್ ತ್ರಿಕೋನ ರೂಪಿಸುತ್ತದೆ. ಈ ಮೂರು ಬೆಟ್ಟಗಳು ಬೌದ್ಧ ಮಠದ ಅಳಿದುಳಿದ ಅವಶೇಷಗಳನ್ನು ಸಂರಕ್ಷಿಸಿಕೊಂಡು ಬಂದಿವೆ.
ಈ ಸ್ಥಳ ಹಸಿರಿನಿಂದ ತುಂಬಿಕೊಂಡಿದೆ. ಪುರಾತನ ಸ್ತೂಪಗಳು, ಶಿಲ್ಪಕಲೆಗಳು, ಗುಹೆ-ಗವಿಗಳು, ಆಧುನಿಕ ಯುಗದಲ್ಲಿಯೂ ಒಂದು ಪ್ರಾಚೀನ ಯುಗದ ಅನುಭವವನ್ನು ಕೊಡುತ್ತವೆ. ಒಂದನೇ ಶತಮಾನದ ಸಂಕೀರ್ಣ ಪ್ರಾಚ್ಯಶಾಸ್ತ್ರ ಸಂಶೋಧಕರಿಗೆ ಅಧ್ಯಯನಕ್ಕೆ ಎಡೆಮಾಡಿಕೊಡುತ್ತದೆ.
ಬೆಟ್ಟದ ಮುಖ್ಯವಾದ ಆಕರ್ಷಣೆಯೆಂದರೆ, ಪುಷ್ಪಗಿರಿ ಬೆಟ್ಟದ ತುದಿಯ ಮೇಲೆ ಉಪಸ್ಥಿತವಿರುವ ಬೃಹತ್ತಾದ ಮಹಾವೀರನ ಪ್ರತಿಮೆ. ಬೌದ್ಧರ ಶಿಲ್ಪಕಲೆ ನಿಜಕ್ಕೂ ಶ್ಲಾಘಿಸುವಂಥದು. ಲಲಿತಗಿರಿಯಲ್ಲಿ ಸಂಶೋಧನ ನಡೆಸುತ್ತಿದ್ದಾಗ ಸಿಕ್ಕಿರುವ ವಸ್ತುಗಳನ್ನು ಲಲಿತಗಿರಿ ವಸ್ತುಸಂಗ್ರಹಾಲಯದಲ್ಲಿ ಕಾಣಬಹುದು.