Search
  • Follow NativePlanet
Share

ಪುರಿ ಪ್ರವಾಸೋದ್ಯಮ : ಬ್ರಹ್ಮಾಂಡದ ದೇವರು ಪ್ರಬಲವಾಗಿರುವ ಸ್ಥಳ

67

ಬಂಗಾಳ ಕೊಲ್ಲಿಯಲ್ಲಿ ಹೆಮ್ಮೆಯಿಂದ ನಿಂತಿರುವ ಪೂರ್ವ ಭಾರತದ ಒಡಿಶಾ ರಾಜ್ಯದ ಒಂದು ಸುಂದರ ನಗರ ಪುರಿ. ಇದು ಒಡಿಶದ ರಾಜಧಾನಿಯಿಂದ ಸುಮಾರು 60 ಕಿ.ಮೀ. ದೂರದಲ್ಲಿದೆ. ನಗರವನ್ನು ಜನಪ್ರಿಯಗೊಳಿಸಿರುವ ಇಲ್ಲಿನ ಪ್ರಸಿದ್ಧ ದೇವಾಲಯ ಜಗನ್ನಾಥ ಮಂದಿರದಿಂದಾಗಿ ಪುರಿಯನ್ನು ಜಗನ್ನಾಥ ಪುರಿಯೆಂದೂ ಕರೆಯುತ್ತಾರೆ. ಜನರ ನಂಬಿಕೆಯ ಪ್ರಕಾರ ಪುರಿಗೆ ಭೇಟಿ ನೀಡದಿದ್ದರೆ ಭಾರತದಲ್ಲಿ ತೀರ್ಥಯಾತ್ರೆ ಪೂರ್ಣಗೊಳ್ಳುವುದಿಲ್ಲವಂತೆ.

ರಾಧೆ, ದುರ್ಗೆ, ಲಕ್ಷ್ಮೀ, ಪಾರ್ವತಿ, ಸತಿ ಮತ್ತು ಶಕ್ತಿ ಕೃಷ್ಣನೊಂದಿಗೆ ಇರುವ ಭಾರತದ ಏಕೈಕ ಮಂದಿರ ಜಗನ್ನಾಥ ಮಂದಿರ. ಇದು ಭಗವಾನ್ ಜಗನ್ನಾಥನ ಪವಿತ್ರ ಭೂಮಿಯೆಂದು ಪರಿಗಣಿಸಲಾಗಿದೆ ಮತ್ತು ಪುರಾಣಗಳು ಹೇಳುವಂತೆ ಇಲ್ಲಿಗೆ ಪುರುಷೋತ್ತಮ ಪುರಿ, ಪುರುಷೋತ್ತಮ ಕ್ಷೇತ್ರ, ಪುರುಷೋತ್ತಮ ಧಾಮ, ನೀಲಛಾಯ, ನೀಲಾದ್ರಿ, ಶ್ರೀಕ್ಷೇತ್ರ ಮತ್ತು ಶಂಖಕ್ಷೇತ್ರ ಎನ್ನುವ ಹೆಸರಿದೆ.

ಪುರಿ ಭವ್ಯ ರಥೋತ್ಸವ

ಪುರಿಯಲ್ಲಿ ಪ್ರತೀ ವರ್ಷ ನಡೆಯುವ ರಥಯಾತ್ರೆ ಅಥವಾ ರಥಗಳ ಉತ್ಸವಕ್ಕೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗಳು ಆಗಮಿಸುತ್ತಾರೆ. ರಥೋತ್ಸವ ವೇಳೆ ಜಗನ್ನಾಥ, ಬಾಲಭದ್ರ ಮತ್ತು ಸುಭದ್ರೆಯ ಮೂರ್ತಿಗಳನ್ನು ಶೃಂಗರಿಸಲ್ಪಟ್ಟ ಭವ್ಯ ರಥದಲ್ಲಿರಿಸಿ ಗುಂಡಿಚಾ ಮಂದಿರಕ್ಕೆ ಮೆರವಣೆಗೆ ಕೊಂಡೊಯ್ಯಲಾಗುತ್ತದೆ ಮತ್ತು ಬಳಿಕ ಜಗನ್ನಾಥ ಮಂದಿರಕ್ಕೆ ವಾಪಸ್ ತರಲಾಗುತ್ತದೆ. ಈ ಉತ್ಸವ ಜುಲೈ ತಿಂಗಳಲ್ಲಿ ನಡೆಯುತ್ತದೆ ಮತ್ತು ಇದು ಪುರಿ ಪ್ರವಾಸೋದ್ಯಮದ ಅತೀ ಹೆಚ್ಚಿನ ಆಕರ್ಷಣೆಯಾಗಿದೆ.

ಪುರಿ ಮತ್ತು ಸುತ್ತಮುತ್ತಲಿರುವ ಪ್ರವಾಸಿ ತಾಣಗಳು

ಪುರಿ ಪ್ರವಾಸೋದ್ಯಮ ವೇಳೆ ಪ್ರವಾಸಿಗಳು ಅಸಂಖ್ಯಾತ ದೇವಸ್ಥಾನಗಳಿಗೆ ಭೇಟಿ ನೀಡಬಹುದು. ಹಿಂದೂಗಳ ಪ್ರಕಾರ ಪುರಿ ಭಾರತದಲ್ಲಿ ಏಳೂ ಪವಿತ್ರ ಸ್ಥಳಗಲಳಲ್ಲಿ ಒಂದಾಗಿದೆ. ವಿಶ್ವಪ್ರಸಿದ್ಧ ಜಗನ್ನಾಥ ಮಂದಿರವನ್ನು ಹೊರತುಪಡಿಸಿ ಚಕ್ರ ತೀರ್ಥ ಮಂದಿರ, ಮೌಸಿಮಾ ಮಂದಿರ, ಸುನಾರ ಗೌರಂಗ್ ಮಂದಿರ, ಶ್ರೀ ಲೋಕನಾಥ ಮಂದಿರ, ಶ್ರೀ ಗುಂಡಿಚಾ ಮಂದಿರ, ಅಲರ್ನಾಥ ಮಂದಿರ ಮತ್ತು ಬಲಿಹಾರ ಚಾಂಡಿ ಮಂದಿರ ಹಿಂದೂಗಳಿಗೆ ಯಾತ್ರೆಗೆ ಕೆಲವು ಪ್ರಮುಖ ಸ್ಥಳಗಳಾಗಿವೆ. ಗೋವರ್ಧನ ಮಠದಂತಹ ಧಾರ್ಮಿಕ ಕೇಂದ್ರಗಳು ಆತ್ಮಕ್ಕೆ ದೈವಿಕ ಸಾಂತ್ವನವನ್ನು ನೀಡುತ್ತದೆ. ಬೆಡಿ ಹನುಮಾನ್ ಮಂದಿರದ ಬಗ್ಗೆ ಸ್ಥಳೀಯ ದಂತಕಥೆಯಿದೆ. ಪುರಿ ಬೀಚ್ ಮತ್ತೊಂದು ಪ್ರವಾಸಿ ತಾಣ. ವಾರ್ಷಿಕ ಪುರಿ ಬೀಚ್ ಉತ್ಸವ ಪುರಿಯಲ್ಲಿ ಪ್ರವಾಸೋದ್ಯಮಕ್ಕೆ ಬಲ ನೀಡುತ್ತದೆ.

ಈ ಬೀಚ್ ಹಿಂದೂಗಳಿಗೆ ಪವಿತ್ರವೆಂದು ಪರಿಗಣಿಸಲಾಗಿದೆ. ಇಲ್ಲಿನ ಪ್ರಾಕೃತಿಕ ನೋಟ ರಮಣೀಯವಾಗಿದೆ. ಸೂರ್ಯ ಉದಯಿಸುವುದನ್ನು ನೋಡಲು ಬಯಸುವ ಪ್ರವಾಸಿಗರು ಮತ್ತು ಸೂರ್ಯಾಸ್ತದೊಂದಿಗೆ ತಮ್ಮ ಯಾತ್ರೆಯನ್ನು ಪೂರ್ಣಗೊಳಿಸಲು ಬಯಸುವ ಯಾತ್ರಾರ್ಥಿಗಳಿಗೆ ಬಾಲಿಘಾಯ್ ಬೀಚ್ ನಲ್ಲಿ ಇದನ್ನು ಮಾಡಬಹುದಾಗಿದೆ. ಈ ಬೀಚ್ ಪುರಿ ಕೊನಾರ್ಕ್ ಮರಿನ್ ಡ್ರೈವ್ ನಲ್ಲಿದೆ. ಪುರಿಯಲ್ಲಿರುವ ಮತ್ತೊಂದು ಧಾರ್ಮಿಕ ಕೇಂದ್ರ ಸ್ವರ್ಗದ್ವಾರ. ಇದು ಹಿಂದೂಗಳ ಅಂತ್ಯಕ್ರಿಯೆಯ ಪ್ರದೇಶ. ಪುರಿಯಿಂದ 14 ಕಿ.ಮೀ. ದೂರದಲ್ಲಿರುವ ರಘುರಾಜ್ ಪುರವನ್ನು ಭಾರತದ ಸಾಂಸ್ಕೃತಿಕ ರಾಜಧಾನಿಯೆಂದು ಕರೆಯಲಾಗುತ್ತದೆ. ಪುರಿಯಿಂದ ಕೇವಲ 20 ಕಿ.ಮೀ. ದೂರದಲ್ಲಿರುವ ಶಖಿಗೋಪಾಲ್ ಒಡಿಸ್ಸಾದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾಗಿದೆ. ನೀರನ್ನು ಇಷ್ಟಪಡುವವರಿಗೆ ಮತ್ತು ಸರ್ಫಿಂಗ್ ಆನಂದಿಸುವವರಿಗೆ ಪುರಿಯಿಂದ 50 ಕಿ.ಮೀ. ದೂರದಲ್ಲಿರುವ ಶತಪಾದ ಪ್ರಸಕ್ತ ಸ್ಥಳ. ಶತಪಾದಕ್ಕೆ ತೆರಳಲು ಪುರಿಯಿಂದ ಬಸ್ ಮತ್ತು ಟ್ಯಾಕ್ಸಿಗಳು ಲಭ್ಯವಿರುತ್ತದೆ.

ಪುರಿಯ ಕರಕುಶಲ ವಸ್ತುಗಳು

ಪುರಿಯ ಕರಕುಶಲ ಮತ್ತು ಗುಡಿಕೈಗಾರಿಕೆ ವಿಶ್ವದೆಲ್ಲೆಡೆ ಜನಪ್ರಿಯವಾಗಿದೆ. ಇದರಲ್ಲಿ ಜಗನ್ನಾಥ ದೇವರ ರಥ ತುಂಬಾ ಜನಪ್ರಿಯ. ಕಲ್ಲುಕೆತ್ತನೆ, ಪಟ್ಟಚಿತ್ರಾ, ಮರದ ಕೆತ್ತನೆ, ಆಧುನಿಕ ತೇಪೆ ಕೆಲಸ, ಟೆರಾಕೋಟಾ, ಲೋಹದ ಘಂಟೆ ಮತ್ತು ಸಮುದ್ರ ಕೋಶಗಳಿಂದ ಮಾಡಿರುವ ವಸ್ತುಗಳು ಪುರಿಯ ಶಾಸ್ತ್ರೀಯ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಪರಂಪರೆಯ ವರ್ಧಿಸುತ್ತವೆ. ಈ ಪ್ರದೇಶದಲ್ಲಿ ಹಲವಾರು ಸಣ್ಣ ಕೈಗಾರಿಕೆಗಳಿವೆ. ಇಲ್ಲಿನ ಕೆಲವು ಕರಕುಶಲ ವಸ್ತುಗಳನ್ನು ಖರೀದಿಸಲು ಮರೆಯಬೇಡಿ. ಅನ್ವಯಿಕ ಕರಕುಶಲ ವಸ್ತುಗಳನ್ನು ಖರೀದಿಸಲು ಬಯಸುವವರಿಗೆ ಪುರಿಯಿಂದ 40 ಕಿ.ಮೀ. ದೂರದಲ್ಲಿರುವ ಪಿಪ್ಲಿಗಿಂತ ಉತ್ತಮ ಸ್ಥಳ ದೊರೆಯಲಾರದರು.

ಪುರಿಗೆ ತಲುಪುವುದು ಹೇಗೆ

ಪುರಿಗೆ ವಿಮಾನ, ರಸ್ತೆ ಮತ್ತು ರೈಲು ಮೂಲಕ ಒಳ್ಳೆಯ ಸಂಪರ್ಕವಿದೆ.

ಪುರಿ ಭೇಟಿಗೆ ಸೂಕ್ತ ಸಮಯ

ಜೂನ್ ನಿಂದ ಮಾರ್ಚ್ ತನಕ ಪುರಿಗೆ ಭೇಟಿ ನೀಡಲು ಸೂಕ್ತ ಸಮಯ.

ಪುರಿ ಪ್ರಸಿದ್ಧವಾಗಿದೆ

ಪುರಿ ಹವಾಮಾನ

ಉತ್ತಮ ಸಮಯ ಪುರಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪುರಿ

  • ರಸ್ತೆಯ ಮೂಲಕ
    ಉತ್ತಮವಾಗಿ ನಿರ್ವಹಣೆ ಮಾಡಿರುವಂತಹ ರಸ್ತೆಗಳು ಪುರಿಗೆ ಸಂಪರ್ಕ ಕಲ್ಪಿಸುತ್ತದೆ. ರಾಜ್ಯ ಸಾರಿಗೆ ಬಸ್ ಮತ್ತು ಖಾಸಗಿ ಬಸ್ ಗಳು ಒಡಿಸ್ಸಾ ಮತ್ತು ಕೊಲ್ಕತ್ತಾದಿಂದ ಲಭ್ಯವಿದೆ. ಪುರಿಯಲ್ಲಿ ಪ್ರಕೃತಿ ವೀಕ್ಷಣೆ ಮತ್ತು ಇತರ ಪ್ರವಾಸಿ ಚಟುವಟಿಕೆಗಳಿಗೆ ಒಡಿಸ್ಸಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಒಟಿಡಿಸಿ)ದ ಡಿಲಕ್ಸ್ ಬಸ್ ಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪುರಿಯಲ್ಲಿ ಒಂದು ರೈಲು ನಿಲ್ದಾಣವಿದೆ. ಪುರಿ ವಿಮಾನ ನಿಲ್ದಾಣದಿಂದ ಒಡಿಸ್ಸಾ ಹಾಗೂ ಕೊಲ್ಕತ್ತಾ, ದೆಹಲಿ, ಗುವಾಹಟಿ, ಬೆಂಗಳೂರು, ಚೆನ್ನೈ ಸಹಿತ ರಾಷ್ಟ್ರದ ವಿವಿಧ ಭಾಗಗಳಿಗೆ ರೈಲು ಸೇವೆಯಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸಮೀಪದ ವಿಮಾನ ನಿಲ್ದಾಣ ಭುವನೇಶ್ವರ. ಭುವನೇಶ್ವರದಿಂದ ಒಂದು ಗಂಟೆ ಪ್ರಯಾಣಿಸಿದರೆ 56 ಕಿ.ಮೀ. ದೂರದಲ್ಲಿರುವ ಪುರಿಗೆ ತಲುಪಬಹುದು. ಭುವನೇಶ್ವರ ವಿಮಾನ ನಿಲ್ದಾಣದಕ್ಕೆ ಒಡಿಶಾದ ಇತರ ಭಾಗಗಳು ಮತ್ತು ಭಾರತದ ವಿವಿಧ ನಗರಗಳ ಸಂಪರ್ಕವಿದೆ. ವಿಮಾನ ನಿಲ್ದಾಣದಿಂದ ಪುರಿಗೆ ಬಸ್ ಮತ್ತು ಟ್ಯಾಕ್ಸಿಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat