ಶಿಂಗ್ಬಾ ರೊಡೋಡೆಂಡ್ರಾನ್ ಧಾಮವು ಒಂದು ನೈಸರ್ಗಿಕ ಉದ್ಯಾನವಾಗಿದ್ದು, ಸಿಕ್ಕಿಂ ನ ಉತ್ತರ ಭಾಗದಲ್ಲಿ ನೆಲೆಸಿದೆ. ಈ ಧಾಮವು ಸಮುದ್ರ ಮಟ್ಟದಿಂದ 3048 ಮೀ. ದಿಂದ 4575 ಮೀ. ವರೆಗಿನ ಎತ್ತರದಲ್ಲಿ ನೆಲೆಸಿದೆ. ಇಲ್ಲಿ 49 ಬಗೆಯ ರೊಡೋಡೆಂಡ್ರಾನ್ ಅಥವಾ ದೊಡ್ಡ ಗುಲ್ಮಾ ಹೂಗಳು ಹಾಗು ಇತರೆ ಬಗೆಯ ಸಸ್ಯಸಂಪತ್ತುಗಳಾದ ಪಾಪ್ಪೀಸ್, ಸ್ಯಾಕ್ಸ್ಫ್ರೇಗ್ಸ್, ಪೊಟೆಂಟಿಲ್ಲಾಸ್, ಅಕೋನೈಟ್ಸ್, ಪ್ರಿಮುಲಾಸ್ ಮತ್ತು ಜೆಂಟಿಯನ್ಸ್ ಗಳನ್ನು ಕಾಣಬಹುದು.
ಟೈಗರ್-ಸಿವೆಟ್ ನಂತಹ ಅಪಾಯದ ಅಂಚಿನಲ್ಲಿರುವ ಪ್ರಾಣಿಗಳನ್ನು ಇಲ್ಲಿ ಕಾಣಬಹುದಾಗಿದೆ. 33 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಇಲ್ಲಿನ ಗುಲ್ಮಾ ಹೂಗಳು ಅರಳಿದ ಸಮಯದಲ್ಲಂತೂ ಈ ಪ್ರದೇಶವು ಒಂದು ಸ್ವರ್ಗವಾಗಿಯೆ ಗೋಚರಿಸುತ್ತದೆ. ಅಲ್ಲದೆ ಸಿಕ್ಕಿಂನ ರಾಜ್ಯ ಪಕ್ಷಿಯಾದ ಬ್ಲಡ್-ಫೀಸಂಟ್ ಗೆ ಇದು ತವರು ಕೂಡ ಹೌದು. ಏಪ್ರಿಲ್ ಮತ್ತು ಮೇ ಇಲ್ಲಿನ ಭೇಟಿಗೆ ಅತ್ಯಂತ ಸೂಕ್ತ ಕಾಲ.


Click it and Unblock the Notifications