ಸರ್ವರಾಯನ್ ದೇವಾಲಯವು ಸರ್ವರಾಯನ್ ಬೆಟ್ಟಗಳ ತುತ್ತ ತುದಿಯಲ್ಲಿರುವಂತಹ ರುದ್ರರಮಣೀಯ ದೇವಾಲಯವಾಗಿದೆ. ಇದೊಂದು ಸಣ್ಣ ಗುಹಾಲಯವಾಗಿದ್ದು, ಸರ್ವರಾಯನ್ ಮತ್ತು ಕಾವೇರಿ ದೇವತೆಯರು ಇಲ್ಲಿನ ಆರಾಧ್ಯದೇವರು. ಕಾವೇರಿ ನದಿಯ ಪ್ರತಿರೂಪವಾಗಿ ಇಲ್ಲಿ ಕಾವೇರಿಯನ್ನು ಆರಾಧನೆ ಮಾಡಲಾದರೆ, ಸರ್ವರಾಯನ್ ಬೆಟ್ಟವನ್ನೇ ಸರ್ವರಾಯನ್‌ನ ರೂಪದಲ್ಲಿ ಆರಾಧನೆ ಮಾಡಲಾಗುತ್ತಿದೆ.
ಈ ಎರಡೂ ದೇವರುಗಳು ಸುತ್ತಮುತ್ತಲಿನ ಹಳ್ಳಿಯ ರಕ್ಷಕ ದೇವರುಗಳೆಂದೇ ಪ್ರಸಿದ್ಧಿ. ಇಲ್ಲಿನ ಗುಹೆಯು ಬಹಳಷ್ಟು ಆಳವಾಗಿದ್ದು, ಇದು ಕಾವೇರಿನದಿಯನ್ನು ಸ್ಪರ್ಷಿಸುತ್ತದೆ ಎಂದು ನಂಬಲಾಗಿದೆ. ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿನ ಊರ ಜನರ ಸಮ್ಮುಖದಲ್ಲಿ ದೇವರಿಗೆ ವಾರ್ಷಿಕ ಉತ್ಸವ ನಡೆಯುತ್ತದೆ. ಇನ್ನು ಇಲ್ಲಿಗೆ ಭೇಟಿ ಕೊಡಲು ನೀವು ಧಾರ್ಮಿಕ ನಂಬಿಕೆಯಿಂದಲೇ ಬರಬೇಕೆಂದಿಲ್ಲ. ಪ್ರಕೃತಿಯ ಆರಾಧಕರಾಗಿದ್ದರೆ ನೀವು ಯೇರ್ಕಾಡ್‌ಗೆ ಭೇಟಿ ಕೊಡಬಹುದು. ಇಲ್ಲಿನ ಮನಮೋಹಕ ಮತ್ತು ಭಯಾನಕ ಬೆಟ್ಟದ ದರ್ಶನ ನಿಮ್ಮನ್ನು ಮುದಗೊಳಿಸುವುದು ಖಂಡಿತ.


Click it and Unblock the Notifications