ರಸ್ತೆ ಮಾರ್ಗವಾಗಿ ಯವತ್ಮಾಳ ಪಟ್ಟಣವನ್ನು ಬಹಳ ಸುಲಭವಾಗಿ ತಲುಪಬಹುದು. ಹೈದರಾಬಾದ್ ಅಥವಾ ನಾಗಪುರದಿಂದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಪ್ರಯಾಣ ಸುಗಮ. ಅಮರಾವತಿಯಿಂದ ಚಂದ್ರಾಪುರದ ವರೆಗೆ ರಾಜ್ಯ ಹೆದ್ದಾರಿಯೂ ಯವತ್ಮಾಳ ಮಾರ್ಗವಾಗಿಯೆ ಚಲಿಸುತ್ತದೆ. ರಾಜ್ಯ ರಸ್ತೆ ಸಂಚಾರ ಹಾಗೂ ಅನೇಕ ಖಾಸಗಿ ಬಸ್ ಹಾಗೂ ಇತರ ಪ್ರವಾಸಿ ಬಸ್ಸುಗಳು ಮಹಾರಾಷ್ಟ್ರದ ಪ್ರಮುಖ ನಗರಗಳಿಂದ ಯವತ್ಮಾಳ ಪಟ್ಟಣಕ್ಕೆ ಸಂಚರಿಸುತ್ತವೆ. ನೀವು ಯಾವ ಬಸ್ ಆಯ್ಕೆ ಮಾಡಿಕೊಳ್ಳುತ್ತೀರಿ ಅದಕ್ಕೆ ತಕ್ಕಂತಹ ದರ ನಿಗದಿ ಮಾಡಲಾಗಿರುತ್ತದೆ.