ವರ್ಕಲಾ ಲೈಟ್ ಹೌಸ್ ವರ್ಕಲಾದಲ್ಲಿರುವ ಒಂದು ಹೆಸರುವಾಸಿ ಪ್ರವಾಸಿ ತಾಣವಾಗಿದೆ. 17 ನೇ ಶತಮಾನದ ಬ್ರಿಟಿಷ್ ಶೈಲಿಯಲ್ಲಿ ನಿರ್ಮಿಸಿರುವ ವಾಸ್ತುಶಿಲ್ಪ ಹೊಂದಿದ ಕಟ್ಟಡವಾಗಿದೆ. ವರ್ಕಲಾ ಲೈಟ್ ಹೌಸ್ 130 ಫೀಟ್ ಎತ್ತರವಾಗಿದೆ. ಈ ಲೈಟ್ ಹೌಸ್ ನ್ನು ಈಸ್ಟ್ ಇಂಡಿಯಾ ಕಂಪನಿ 1684 ರಲ್ಲಿ ಸ್ಥಾಪಿಸಿತು. ಲೈಟ್ ಹೌಸ್ ಮೇಲೆ ನಿಂತು ಸುತ್ತಲಿನ ಸ್ಪಷ್ಟ ದೃಶ್ಯಾವಳಿಯನ್ನು ನೋಡಲು ಅತ್ಯಂತ ಮನೋಹರವಾಗಿರುತ್ತದೆ. ಸುತ್ತಲಿನ ದೃಶ್ಯಗಳಲ್ಲಿ ಅರೇಬಿಯನ್ ಸಮುದ್ರ ಹಾಗೂ ವರ್ಕಲಾದ ಹಿನ್ನೀರು ಪ್ರದೇಶವನ್ನೂ ನೋಡಬಹುದು. ಪ್ರವಾಸಿಗರು ಇಲ್ಲಿನ ಸೌಂದರ್ಯವನ್ನು ನೋಡುವುದಕ್ಕಾಗಿ, ಪ್ರಕೃತಿಯ ಸೊಬಗನ್ನು ಸವಿಯುವುದಕ್ಕಾಗಿಯೇ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅಲ್ಲದೇ ವರ್ಕಲಾ ದ ಸ್ಥಳೀಯರಿಗೆ ಲೈಟ್ ಹೌಸ್ ನೆಚ್ಚಿನ ಪಿಕ್ನಿಕ್ ಪ್ರದೇಶವಾಗಿದೆ. ಅದರಲ್ಲೂ ರಜಾ ದಿನಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಅಸಂಖ್ಯ!


Click it and Unblock the Notifications