ವಾಲ್ಪಾರೈ ಸುತ್ತಮುತ್ತ ಹಲವಾರು ವೀವ್ ಪಾಯಿಂಟ್ ಗಳಿವೆ. ಲೊಯಮ್ ವಿವ್ಯೂ ಪಾಯಿಂಟ್ ಇದರಲ್ಲಿ ಹೆಚ್ಚು ಜನಪ್ರಿಯ. ವಾಲ್ಪಾರೈಗೆ ಭೇಟಿ ನೀಡಿದವರು ಲೊಯಮ್ ವೀವ್ ಪಾಯಿಂಟ್ ಗೆ ತೆರಳದೆ ಪ್ರವಾಸ ಮುಗಿಸುವುದಿಲ್ಲ. ಪೊಲ್ಲಚಿ ಮತ್ತು ವಾಲ್ಪಾರೈಯ ಮಾರ್ಗಮಧ್ಯೆ ಇರುವ 9ನೇ ಕಡಿದಾದ ತಿರುವಿನಲ್ಲಿ ಈ ವೀವ್ ಪಾಯಿಂಟ್ ಇದೆ. ಇಲ್ಲಿ ಅಲಿಯಾರ್ ಅಣೆಕಟ್ಟು ಮತ್ತು ಅದರ ಜಲಾಶಯವನ್ನು ನೋಡಬಹುದಾಗಿದೆ. ಪಶ್ಚಿಮ ಘಟ್ಟದ ದೊಡ್ಡ ದೊಡ್ಡ ಬೆಟ್ಟಗಳನ್ನು ಇಲ್ಲಿಂದ ನೋಡಬಹುದಾಗಿದೆ. ವಾಲ್ಪಾರೈ ಸುತ್ತಮುತ್ತ ಇರುವ ಇತರ ವೀವ್ ಪಾಯಿಂಟ್ ಗಳೆಂದರೆ ನಲ್ಲಮುಂದಿ ಪೂನಜೊಲೈ, ಕದಂಪರೈ ಅಣೆಕಟ್ಟು ಮತ್ತು ನುಂಬೆರ್ ಪರೈ ಬೆಟ್ಟ ಹಾಗೂ ಕಣೆವೆಗಳ ಸೊಬಗನ್ನು ಇಲ್ಲಿಂದ ಸವಿಯಬಹುದು.


Click it and Unblock the Notifications