Search
  • Follow NativePlanet
Share
ಮುಖಪುಟ » ಸ್ಥಳಗಳು » ವಧು ತುಲಾಪುರ » ಹವಾಮಾನ

ವಧು ತುಲಾಪುರ ಹವಾಮಾನ

ವಧು ಮತ್ತು ತುಲಾಪುರದ ವಾತಾವರಣ ಬಿಸಿ ಮತ್ತು ತುಂತುರು ಮಳೆಯಿಂದ ಕೂಡಿರುತ್ತದೆ, ಮುಂಗಾರಿನಲ್ಲಿ ಕಡಿಮೆ ಮಳೆಯನ್ನು ಅನುಭವಿಸಿತ್ತದೆ. ಚಳಿಗಾಲವು ಹಳ್ಳಿಗಳ ವೀಕ್ಷಣೆಗೆ ಅನುಕೂಲಕಾರಿ.

ಬೇಸಿಗೆಗಾಲ

ವಧು ಮತ್ತು ತುಲಾಪುರದಲ್ಲಿ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಬೇಸಿಗೆಗಾಲವೆಂದು ಗುರುತಿಸಲಾಗಿದೆ. ಈ ಸಮಯದಲ್ಲಿ ಉಷ್ಣತೆ ಗರಿಷ್ಠ 41 ಡಿಗ್ರಿ ತಲುಪುತ್ತದೆ. ಈ ಸಮಯದಲ್ಲಿ ಇವುಗಳನ್ನು ವೀಕ್ಷಿಸಲು ಬಂದರೆ ಅನಾನುಕೂಲ. ರಾತ್ರಿಯಲ್ಲಿ ಉಷ್ಣತೆ ಹೆಚ್ಚು-ಕಡಿಮೆ 22 ಡಿಗ್ರಿಗೆ ತಲುಪುತ್ತದೆ.

ಮಳೆಗಾಲ

ವಧು ಮತ್ತು ತುಲಾಪುರದಲ್ಲಿ ಮುಂಗಾರು ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗೂ ಮುಂದುವರೆಯುತ್ತದೆ. ಎರಡೂ ಹಳ್ಳಿಗಳು ತುಂತುರು ಮತ್ತು ಕಡಿಮೆ ಮಳೆಯನ್ನು ಪಡೆಯುತ್ತವೆ. ವಧು-ತುಲಾಪುರ ಸ್ಥಳಗಳನ್ನು ವೀಕ್ಷಿಸಲು ಬೇಸಿಗೆಗಾಲಕ್ಕಿಂತ ಮಳೆಗಾಲದಲ್ಲಿ ಅನುಕೂಲಕರವಾಗಿರುತ್ತದೆ.ಮತ್ತೆ ಮುಂಗಾರು ಅಕ್ಟೋಬರ್ ತಿಂಗಳಿಂದ ನವೆಂಬರ್ ವರೆಗೂ ಮುಂದುವರೆಯುತ್ತದೆ, ಈ ಸಮಯದಲ್ಲಿ ಅತಿ ಹೆಚ್ಚು ಮೋಜು ನೀಡುವಂತಹ ಸ್ಥಳ ಇದಾಗಿದೆ.

ಚಳಿಗಾಲ

ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳುಗಳು ಚಳಿಗಾಲವನ್ನು ಸೂಚಿಸುತ್ತವೆ. ಈ ಸಮಯದಲ್ಲಿ ಉಷ್ಣತೆ ಗರಿಷ್ಠ 25 ಡಿಗ್ರಿಯಿಂದ ಕನಿಷ್ಠ 8 ಡಿಗ್ರಿ ತಲುಪುತ್ತದೆ. ಡಿಸೆಂಬರ್ ತಿಂಗಳನ್ನು ಅತೀ ತಂಪಾದ ತಿಂಗಳೆಂದು ಗುರುತಿಸಲಾಗಿದೆ.