ಹೋಶಿಯಾರ್‌ಪುರ-ಧರ್ಮಶಾಲಾ ಮಾರ್ಗದಲ್ಲಿ ಬರುವ ಅತ್ಯಂತ ಜನಪ್ರಿಯ ಧಾರ್ಮಿಕ ಕೇಂದ್ರ ಶಿವ ಬಾರಿ. ಉನಾ ಜಿಲ್ಲಾ ವ್ಯಾಪ್ತಿಯಲ್ಲಿ ಇದು ಬರುತ್ತದೆ. ದೇವಾಲಯವು ಸಾವನ್ ನದಿ ದಂಡೆಯ ಮೇಲಿದೆ. ದಂತಕಥೆಗಳ ಪ್ರಕಾರ, ಎರಡು ರೋಚಕ ಸಂಗತಿಗಳೆಂದರೆ, ಗುರು ದ್ರೋಣಾಚಾರ್ಯರು ತಮ್ಮ ಆಚಾರ್ಯ ವಿದ್ಯೆಯನ್ನು ಇಲ್ಲಿಯೇ ಪಡೆದರು ಹಾಗು ತಮ್ಮ ಪುತ್ರಿ ಜಯಂತಿಗೆ ಶಿವನ ಆರಾಧನೆ ಮಾಡಲು ಅನುಕೂಲವಾಗಲೆಂದು ಈ ದೇಗುಲ ನಿರ್ಮಿಸಿಕೊಟ್ಟರು. ಈ ದೇಗುಲಕ್ಕೆ ಪ್ರತಿ ವರ್ಷ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಬರುವ ಭಕ್ತರ ಸಂಖ್ಯೆ ಹೆಚ್ಚು.


Click it and Unblock the Notifications