Search
  • Follow NativePlanet
Share
» »ಇವೆ ನೋಡಿ ಉಡುಪಿಯಲ್ಲಿರುವ ಸುಂದರವಾದ ಬೀಚ್‌ಗಳು…ಒಂದಕ್ಕಿಂತ ಒಂದು ಅದ್ಭುತ

ಇವೆ ನೋಡಿ ಉಡುಪಿಯಲ್ಲಿರುವ ಸುಂದರವಾದ ಬೀಚ್‌ಗಳು…ಒಂದಕ್ಕಿಂತ ಒಂದು ಅದ್ಭುತ

ಬೀಚ್ ಎಂದರೆ ಪ್ರತಿಯೊಬ್ಬರಿಗೂ ನೆನಪಾಗುವುದು, ಪ್ರತಿಯೊಬ್ಬರ ಮೊದಲ ಆಯ್ಕೆ ಗೋವಾ. ಆದರೆ ಎಲ್ಲರಿಗೂ ಗೋವಾಕ್ಕೆ ಹೋಗಲು ಸಾಧ್ಯವಾ?. ಹಾಗಾಗಿ ನೀವು ಬೀಚ್ ಪ್ರೇಮಿಯಾಗಿದ್ದರೆ ಒಮ್ಮೆ ಉಡುಪಿಯನ್ನು ಅನ್ವೇಷಿಸಿ. ಉಡುಪಿಯು ಕರ್ನಾಟಕದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ನೀವು ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಿಮ್ಮ ರಜೆಯನ್ನು ಅದ್ಭುತ ಮತ್ತು ಸ್ಮರಣೀಯವಾಗಿ ಕಳೆಯಬಹುದು. ಇಲ್ಲಿ ನೀವು ಕಡಲತೀರಗಳ ಹೊರತಾಗಿ ನೋಡಲು ಇನ್ನು ಅನೇಕ ಸ್ಥಳಗಳಿವೆ. ಹಾಗಾಗಿ ಕಡಿಮೆ ಎಂದರೂ ಎರಡರಿಂದ ಮೂರು ದಿನಗಳನ್ನು ಆರಾಮಾಗಿ ಕಳೆಯಬಹುದು. ಅಷ್ಟೇ ಅಲ್ಲ, ದೇವಸ್ಥಾನಗಳಿಗೂ ಉಡುಪಿ ಹೆಸರುವಾಸಿಯಾಗಿದೆ. ಅಲ್ಲಿಗೆ ಪ್ರಕೃತಿ, ಸಾಹಸ ಮತ್ತು ಧಾರ್ಮಿಕ ಪ್ರವಾಸಗಳನ್ನು ಇಷ್ಟಪಡುವವರಿಗೆ ಇದು ಸೂಕ್ತ ಸ್ಥಳವಾಗಿದೆ. ಮತ್ತೇಕೆ ತಡ, ಉಡುಪಿಯಲ್ಲಿರುವ ಸುಂದರವಾದ ಬೀಚ್‌ಗಳು ಯಾವುವು ಎಂದು ಇಂದು ನೋಡೋಣ ...

ಮಲ್ಪೆ ಬೀಚ್

ಉಡುಪಿ ಎಂದಾಕ್ಷಣ ಪ್ರತಿಯೊಬ್ಬರಿಗೂ ಮೊದಲು ನೆನಪಾಗುವುದು ಮಲ್ಪೆ. ಇದು ಉಡುಪಿಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಗೋಲ್ಡನ್ ಮರಳು, ಆಹ್ಲಾದಕರ ವಾತಾವರಣ, ಅದ್ಭುತವಾದ ಸ್ಥಳೀಯ ಆಹಾರಗಳು ಮತ್ತು ಬೀಚ್ ವಾಕ್‌...ಇವೆಲ್ಲಾ ಮಲ್ಪೆಯ ವಿಶಿಷ್ಟ ಲಕ್ಷಣಗಳಾಗಿವೆ. ಈ ಬೀಚ್ ಮಂಗಳೂರಿನಿಂದ 66 ಕಿಲೋಮೀಟರ್ ಮತ್ತು ಉಡುಪಿಯಿಂದ 6 ಕಿಲೋಮೀಟರ್ ದೂರದಲ್ಲಿದೆ. ಮಲ್ಪೆ ಬೀಚ್ ನೈಸರ್ಗಿಕ ಬಂದರು ಆಗಿದ್ದು, ಇಲ್ಲಿ ನೆಲೆಸಿರುವ ಮೊಗವೀರ ಮೀನುಗಾರರಿಗೆ ಇದು ತುಂಬಾ ಉಪಯುಕ್ತವಾಗಿದೆ. ಕರ್ನಾಟಕದ ಈ ಕಡಲತೀರದಲ್ಲಿ ನಾಲ್ಕು ಕಲ್ಲಿನ ದ್ವೀಪಗಳಿವೆ. ಉತ್ತರದ ದ್ವೀಪವು ದರಿಯಾ-ಬಹದುರ್ಗಡ್, ಮಧ್ಯಭಾಗವು ದರಿಯಾ-ಗಡಾರ-ಕಲ್ಲುತೆ ದ್ವೀಪ, ದಕ್ಷಿಣದ ದ್ವೀಪವು ಕರಿ-ಇಲ್ಲದ-ಕಲ್ಲು. ನಾಲ್ಕನೇ ಕಲ್ಲಿನ ದ್ವೀಪವೆಂದರೆ ಸೇಂಟ್ ಮೇರಿ ದ್ವೀಪ.

malpebeach udupi

ಸೇಂಟ್ ಮೇರಿಸ್ ದ್ವೀಪ

ಮಲ್ಪೆ ಬೀಚ್‌ನ ನಾಲ್ಕು ಕಲ್ಲಿನ ದ್ವೀಪಗಳಲ್ಲಿ ಸೇಂಟ್ ಮೇರಿಸ್ ಅತ್ಯಂತ ಜನಪ್ರಿಯವಾಗಿದೆ. ಈ ದ್ವೀಪವನ್ನು ತೆಂಗಿನ ದ್ವೀಪ ಎಂದೂ ಕರೆಯುತ್ತಾರೆ. ಅದರ ವಿಶೇಷ ವಿನ್ಯಾಸ ಮತ್ತು ಕಲ್ಲಿನ ರಚನೆಗಳಿಂದಾಗಿ, ಇದು ಪ್ರವಾಸಿಗರಲ್ಲಿ ಬಹಳ ಪ್ರಸಿದ್ಧವಾಗಿದೆ.

ಕಾಪು ಬೀಚ್

ಮಂಗಳೂರು ಮತ್ತು ಉಡುಪಿ ನಗರಗಳ ನಡುವೆ ಇರುವ ಕಾಪು ಬೀಚ್ ಅತ್ಯಂತ ಹಳೆಯ ಮತ್ತು ಆಫ್‌ಬೀಟ್ ಬೀಚ್ ತಾಣವಾಗಿದೆ. ಈ ಕಾರಣದಿಂದ ಅದರ ಸೌಂದರ್ಯ ಇನ್ನೂ ಹಾಗೇ ಉಳಿದಿದೆ. ಇಲ್ಲಿ ಸ್ವಲ್ಪ ಹೊತ್ತು ಶಾಂತವಾಗಿ ಕುಳಿತರೆ ಬೇರೆಯದೇ ರೀತಿಯ ಅನುಭವ ಸಿಗುತ್ತದೆ. ಇಲ್ಲಿ 1901 ರಲ್ಲಿ ನಿರ್ಮಿಸಲಾದ ದೀಪಸ್ತಂಭವಿದೆ, ಇದು ಪ್ರವಾಸಿಗರಿಗೆ ಪ್ರತಿದಿನ ಬೆಳಗ್ಗೆ 5:30 ರಿಂದ 6.30 ರವರೆಗೆ ತೆರೆದಿರುತ್ತದೆ. ದೀಪಸ್ತಂಭದ ಮೇಲಿನಿಂದ ಸಮುದ್ರದ ನೋಟವು ಅದ್ಭುತವಾಗಿರುತ್ತದೆ. ಕಡಲತೀರದ ಸುತ್ತಲೂ ಅನೇಕ ಹೋಟೆಲ್‌ಗಳು ಮತ್ತು ಅತಿಥಿಗೃಹಗಳಿವೆ.

ಯಾವಾಗ ಹೋಗಬೇಕು?

ಚಳಿಗಾಲವು ಉಡುಪಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಅಂದರೆ ನೀವು ಅಕ್ಟೋಬರ್ ನಿಂದ ಮಾರ್ಚ್ ನಡುವೆ ಇಲ್ಲಿಗೆ ಬರಲು ಯೋಜಿಸಬಹುದು. ಇಲ್ಲಿ ಹವಾಮಾನವು ತುಂಬಾ ಆಹ್ಲಾದಕರವಾಗಿರುತ್ತದೆ.

ತಲುಪುವುದು ಹೇಗೆ?

ಉಡುಪಿಗೆ ತಲುಪಲು ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರು. ಮಂಗಳೂರು ತಲುಪಿದ ನಂತರ ಕ್ಯಾಬ್ ಅಥವಾ ಟ್ಯಾಕ್ಸಿ ಮೂಲಕ ಸುಲಭವಾಗಿ ಉಡುಪಿ ತಲುಪಬಹುದು.

ಉಡುಪಿಯು ತನ್ನದೇ ಆದ ರೈಲು ನಿಲ್ದಾಣವನ್ನು ಹೊಂದಿದೆ, ಆದ್ದರಿಂದ ನೀವು ರೈಲಿನ ಮೂಲಕವೂ ಇಲ್ಲಿಗೆ ತಲುಪಬಹುದು. ನಿಲ್ದಾಣದಲ್ಲಿ ನೀವು ಅನೇಕ ಆಯ್ಕೆಗಳನ್ನು ಪಡೆಯುತ್ತೀರಿ, ಅದರ ಸಹಾಯದಿಂದ ನೀವು ಸುಲಭವಾಗಿ ನಿಮ್ಮ ಗಮ್ಯಸ್ಥಾನವನ್ನು ತಲುಪಬಹುದು.

ನೀವು ಕುಟುಂಬ ಅಥವಾ ಸ್ನೇಹಿತರೊಂದಿಗೆ ಉಡುಪಿಗೆ ರಸ್ತೆ ಪ್ರವಾಸವನ್ನು ಯೋಜಿಸುತ್ತಿದ್ದರೆ, ನಿಮ್ಮ ಕಾರು ಅಥವಾ ಬೈಕಿನ ಮೂಲಕ ನೀವು ಸುಲಭವಾಗಿ ಅಲ್ಲಿಗೆ ತಲುಪಬಹುದು. ಏಕೆಂದರೆ ಉಡುಪಿಯು ರಸ್ತೆ ಸಂಪರ್ಕವನ್ನು ಹೊಂದಿದೆ. ಬೆಂಗಳೂರು, ಮಂಗಳೂರು, ಗೋವಾದಿಂದ ನೇರ ಬಸ್ ಸೇವೆ ಲಭ್ಯವಿದೆ.

More News

Read more about: udupi beach travel guide
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+