ಸೀತಾ ಖಾಯಿ ಅತ್ಯಂತ ಸುಂದರವಾದ ಕಣಿವೆಯಾಗಿದ್ದು, ತೋರಣಮಲ್ ನಿಂದ 1.5 ಕಿ.ಮೀ ದೂರದಲ್ಲಿದೆ. ಈ ಸ್ಥಳವು, ಸೀತಾದೇವಿಯಿಂದಾಗಿ ಈ ಹೆಸರು ಪಡೆದಿದೆ. ಇಲ್ಲಿ ಮಳೆಗಾಲದಲ್ಲಿ ಕಂಡುಬರುವ ಜಲಪಾತವು ಬಹಳಷ್ಟು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಇದು ಇಲ್ಲಿನ ಅತ್ಯಂತ ಆಕರ್ಷಣೀಯವಾದ ಸ್ಥಳವಾಗಿದೆ. ಇಲ್ಲಿಗೆ ಸಮೀಪದಲ್ಲಿ ಒಂದು...
ಲೋಟಸ್ ಕೆರೆ ತೋರಣ್ ಮಲ್ ನ ಪ್ರಧಾನ ಆಕರ್ಷಣೆಯಾಗಿದೆ. ಇದನ್ನು ಸ್ಥಳೀಯವಾಗಿ ಕಮಲ್ ತಲಾವ್ ಎಂದು ಕರೆಯುತ್ತಾರೆ. ಆಂಗ್ಲದಲ್ಲಿ ಇದನ್ನು ಲೋಟಸ್ ಲೇಕ್ ಎಂದು ತರ್ಜುಮೆ ಮಾಡಲಾಗಿದೆ. ಕಾರಣ ಈ ಕೆರೆಯಲ್ಲಿ ವಿಪುಲವಾಗಿ ಅರಳಿರುವ ಕಮಲದ ಹೂಗಳಿಂದಾಗಿ ಈ ಸ್ಥಳವು ಸೌಂದರ್ಯವನ್ನೆ ಹೊದ್ದು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ...
ಯಶವಂತ್ ಕೆರೆಗೆ ಈ ಹೆಸರನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಯಶವಂತ್ ರಾವ್ ಚವಾಣ್ ರ ನೆನಪಿಗಾಗಿ ಇಡಲಾಗಿದೆ. ಇದು ಸ್ವಾಭಾವಿಕವಾದ ಕೆರೆಯಾಗಿದ್ದು, ಸುಮಾರು 1.6 ಚ.ಕಿ.ಮೀ ನಷ್ಟು ವ್ಯಾಪ್ತಿ ಹೊಂದಿದೆ.
ಪ್ರವಾಸಿಗರು, ಇಲ್ಲಿಗೆ ಕಿರು ದೋಣಿಯಾನದಲ್ಲಿ ಪಾಲ್ಗೊಳ್ಳಲು ಮತ್ತು ಮೀನು ಹಿಡಿಯುವ ಕಾರ್ಯದಲ್ಲಿ ತೊಡಗಲು...
ಮಚ್ಚಿಂದ್ರನಾಥ್ ಗುಹೆಯು, ಈ ಹೆಸರನ್ನು ತೋರಣ್ ಮಲ್ ಗಿರಿಧಾಮದಲ್ಲಿ ತಪಸ್ಸು ಮಾಡಿದ ಮಚ್ಚಿಂದ್ರನಾಥ್ ಮುನಿಗಳಿಂದ ಪಡೆದಿದೆ ಎಂದು ನಂಬಲಾಗಿದೆ. ಈ ಗುಹೆಯು ಸ್ವಾಭಾವಿಕವಾದ ಗುಹೆಯಾಗಿದೆ.
ಮಚ್ಚಿಂದ್ರನಾಥ್ ದೇವಾಲಯ ಮತ್ತು ಮಾರ್ಖಂಡೇಯ ಋಷಿ ಪೀಠ ಇಲ್ಲಿನ ನೋಡಲೆ ಬೇಕಾದ ಆಕರ್ಷಣೆಗಳಲ್ಲಿ ಸೇರಿದೆ.
ಆವಶಬರಿ ಪಾಯಿಂಟ್ ಎಂಬುದು ಒಂದು ನಯನ ಮನೋಹರ ವೀಕ್ಷಣಾ ಸ್ಥಳವಾಗಿದ್ದು ನಿಮಗೆ ಇಲ್ಲಿ ಸುತ್ತಲ ಬೆಟ್ಟಗಳ ಮತ್ತು ಅರಣ್ಯ ಇಲಾಖೆಯ ವಿಶ್ರಾಂತಿ ಧಾಮದ ವಿಹಂಗಮ ನೋಟವನ್ನು ಒದಗಿಸುತ್ತದೆ. ಇದು ಮಧ್ಯ ಪ್ರದೇಶದ ಗಡಿಗೆ ತುಂಬ ಸನಿಹದಲ್ಲಿದೆ.
ಇಲ್ಲಿಗೆ ಸಮೀಪದಲ್ಲಿ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾದ ಜಲಿಂದ್ರನಾಥ್ ದೇವಾಲಯವಿದೆ....
ತೋರಣಮಲ್ ನ ಖಡ್ಕಿ ಪಾಯಿಂಟ್ ಆವಶಬರಿ ಪಾಯಿಂಟ್ ನಂತಿರುವ ಮತ್ತೊಂದು ಪ್ರಸಿದ್ಧ ವೀಕ್ಷಣಾ ಸ್ಥಳವಾಗಿದೆ. ನಂಬಿಕೆಗಳ ಪ್ರಕಾರ, ಶತಮಾನಗಳ ಹಿಂದೆ ಒಂದು ಅತಿ ಉದ್ದವಾದ ಬೃಹತ್ ಗೋಡೆಯು ಈ ಗಿರಿಧಾಮದಲ್ಲಿ ಹಾದು ಹೋಗಿತ್ತು. ಇದರ ಅವಶೇಷಗಳು ಇಲ್ಲಿ ನಡೆದ ಉತ್ಖನನಗಳಲ್ಲಿ ದೊರೆತಿದೆ.
ಇಲ್ಲಿರುವ ತೋರಣಾದೇವಿ ದೇವಸ್ಥಾನವು ೬೦೦ ವರ್ಷಗಳಿಗಿಂತಲೂ ಪುರಾತನವಾದದ್ದು. ಇಲ್ಲಿ ಪೂಜಿಸಲ್ಪಡುವ ಮೂಲ ದೇವಿಯು ತೋರಣಾದೇವಿ ಆಗಿದ್ದಾಳೆ. ಕಪ್ಪು ಕಲ್ಲಿನಲ್ಲಿ ಈ ವಿಗ್ರಹವು ನಿರ್ಮಿತವಾಗಿದೆ. ತೋರಣಮಲ್ ಗಿರಿಧಾಮದಲ್ಲಿ ಈ ದೇವಾಲಯವನ್ನು ಕಾಣಬಹುದು.
ಅರಣ್ಯ ಉದ್ಯಾನವನ ಮತ್ತು ಆಯುರ್ವೇದಿಕ್ ಉದ್ಯಾನವನವು ಕಾಡಿನ ಗಿಡಮೂಲಿಕೆಗಳ ಉದ್ಯಾನವನವೆಂದು ಸಹ ಕರೆಯಲ್ಪಡುತ್ತದೆ. ತೋರಣಮಲ್ ಗಿರಿಧಾಮದ ಈ ಸ್ಥಳದಲ್ಲಿ ವಿವಿಧ ಬಗೆಯ ಔಷಧೀಯ ಗಿಡಮೂಲಿಕೆಗಳನ್ನು ಮತ್ತು ಬಳ್ಳಿಗಳನ್ನು ಬೆಳೆಸಲಾಗಿದೆ. ಪ್ರವಾಸಿಗರು ಇಲ್ಲಿನ ವಿವಿಧ ಬಗೆಯ ಗಿಡಮೂಲಿಕೆಗಳನ್ನು ನೋಡಲು, ಯಾವ ಯಾವ ರೋಗಗಳಿಗೆ ಯಾವ...