Search
  • Follow NativePlanet
Share
ಮುಖಪುಟ » ಸ್ಥಳಗಳು » ತೋರಣಮಲ್ » ಹವಾಮಾನ

ತೋರಣಮಲ್ ಹವಾಮಾನ

ತೋರಣಮಲ್ ಸಮಶೀತೋಷ್ಣ ವಲಯದ ಹವಾಗುಣವನ್ನು ಪಡೆದಿದೆ. ಆದರು ಈ ಪ್ರಾಂತ್ಯವು ಬೆಟ್ಟದ ತುದಿಯಲ್ಲಿರುವುದರಿಂದ ವರ್ಷಪೂರ್ತಿ ಹಿತಕರವಾದ ಹವಾಮಾನವನ್ನು ಹೊಂದಿರುತ್ತದೆ. ಈ ಗಿರಿಧಾಮಕ್ಕೆ ಭೇಟಿಕೊಡಲು ಅತ್ಯಂತ ಉತ್ತಮ ಕಾಲ ಮಳೆಗಾಲದ ನಂತರದ ಕಾಲ ಒಳ್ಳೆಯದು. ಆಗ ಇಲ್ಲಿ ಧುಮ್ಮಿಕ್ಕುವ ಹಲವಾರು ಜಲಪಾತಗಳು ಇಲ್ಲಿನ ಪರಿಸರವನ್ನು ಮನಮೋಹಕಗೊಳಿಸುತ್ತವೆ.

ಬೇಸಿಗೆಗಾಲ

ಎಪ್ರಿಲ್ ನಿಂದ ಜೂನ್ ವರೆಗೆ ಇರುವ ಬೇಸಿಗೆಯಲ್ಲಿ ತೋರಣಮಲ್ ತುಂಬ ಬಿಸಿಲಿನಿಂದ ಕೂಡಿರುತ್ತದೆ. ಈ ಕಾಲದಲ್ಲಿ ಉಷ್ಣಾಂಶವು ಸಾಮಾನ್ಯವಾಗಿ 40° ಸೆಲ್ಶಿಯಸ್ ವರೆಗು ಏರುತ್ತದೆ. ಅಲ್ಲದೆ ಕನಿಷ್ಠ ಉಷ್ಣಾಂಶವು  22°ಸೆಲ್ಶಿಯಸ್ ಇರುತ್ತದೆ. ಅಲ್ಲದೆ ಈ ಕಾಲದಲ್ಲಿ ತಂಪಾದ ತಂಗಾಳಿ ಬೀಸುವುದಾದರೂ, ಅದರಿಂದ ಬಿಸಿಲನ್ನು ತಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಕಾಲದಲ್ಲಿ ಇಲ್ಲಿಗೆ ಪ್ರವಾಸ ಹೊರಡುವುದನ್ನು ಮುಂದೂಡುವುದು ಉತ್ತಮ.

ಮಳೆಗಾಲ

ಬೇಸಿಗೆಯ ನಂತರ ಮಳೆಗಾಲವನ್ನು ತೋರಣಮಲ್ ಕೈ ಚಾಚಿ ಸ್ವಾಗತಿಸುತ್ತದೆ. ಈ ಕಾಲ ಜುಲೈ ನಿಂದ ಸೆಪ್ಟಂಬರ್ ವರೆಗೆ ಇರುತ್ತದೆ. ಈ ಪ್ರಾಂತ್ಯದಲ್ಲಿ ಮಳೆಗಾಲದಲ್ಲಿ ಉತ್ತಮ ಮಳೆಯಾಗುತ್ತದೆ. ಅಲ್ಲದೆ ಉಷ್ಣಾಂಶವು ಸಹಿಸಿಕೊಳ್ಳಬಹುದಾದ ಮಟ್ಟಿಗೆ ಕುಸಿಯುತ್ತದೆ.

ಚಳಿಗಾಲ

ಚಳಿಗಾಲವು ಇಲ್ಲಿ ಅಕ್ಟೋಬರ್, ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಇರುತ್ತದೆ. ಈ ಕಾಲದಲ್ಲಿ ಇಲ್ಲಿನ ಉಷ್ಣಾಂಶವು 33° ಸೆಲ್ಶಿಯಸ್ ದಾಟಿ ಹೋಗುವುದಿಲ್ಲ. ಅಲ್ಲದೆ ಕನಿಷ್ಠ ಉಷ್ಣಾಂಶವು 12° ಸೆಲ್ಶಿಯಸ್ ಇರುತ್ತದೆ. ಈ ಕಾಲದಲ್ಲಿ ನೀವು ತೋರಣಮಲ್ ಗೆ ಬರುವಿರಾದರೆ ತೆಳುವಾದ ಉಣ್ಣೆ ಬಟ್ಟೆಗಳನ್ನು ಕಡ್ಡಾಯವಾಗಿ ಧರಿಸುವುದು ಉತ್ತಮ.