ಸೀತಾ ಖಾಯಿ ಅತ್ಯಂತ ಸುಂದರವಾದ ಕಣಿವೆಯಾಗಿದ್ದು, ತೋರಣಮಲ್ ನಿಂದ 1.5 ಕಿ.ಮೀ ದೂರದಲ್ಲಿದೆ. ಈ ಸ್ಥಳವು, ಸೀತಾದೇವಿಯಿಂದಾಗಿ ಈ ಹೆಸರು ಪಡೆದಿದೆ. ಇಲ್ಲಿ ಮಳೆಗಾಲದಲ್ಲಿ ಕಂಡುಬರುವ ಜಲಪಾತವು ಬಹಳಷ್ಟು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಇದು ಇಲ್ಲಿನ ಅತ್ಯಂತ ಆಕರ್ಷಣೀಯವಾದ ಸ್ಥಳವಾಗಿದೆ. ಇಲ್ಲಿಗೆ ಸಮೀಪದಲ್ಲಿ ಒಂದು ಪ್ರಕೃತಿ ವೀಕ್ಷಣಾ ಸ್ಥಳವನ್ನು ಕಾಣಬಹುದು.