Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವಲ್ಲಾ » ಆಕರ್ಷಣೆಗಳು » ಕವಿಯೂರ್ ಮಹಾದೇವ ದೇವಸ್ಥಾನ

ಕವಿಯೂರ್ ಮಹಾದೇವ ದೇವಸ್ಥಾನ, ತಿರುವಲ್ಲಾ

2

ಕವಿಯೂರ್ ಮಹಾದೇವ ದೇವಸ್ಥಾನ ಕೇರಳದ ಅತ್ಯಂತ ಹಳೆಯ ಶಿವ ದೇವಾಲಯ. ತಿರುವಲ್ಲಾ ನಗರದಿಂದ 6 ಕೀ.ಮಿ ದೂರದಲ್ಲಿ ಈ ದೇವಾಲಯವನ್ನು ಕಟ್ಟಲಾಗಿದೆ. ಈ ದೇವಾಲಯವು ವಿಶೇಷವಾಗಿದ್ದು, ಗೇಬಲ್ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವನ್ನು ತ್ರೀಕೋನಾಕಾರದಲ್ಲಿ ನಿರ್ಮಿಸಲಾಗಿದೆ. ಇದರ ಛಾವಣಿ ಇಳಿಜಾರಿನ ಆಕಾದದಲ್ಲಿದೆ. ಈ ದೇವಾಲಯದ ನಿರ್ಮಾಣವಾಗಿ ನೂರು ವರ್ಷಗಳೇ ಕಳೆದಿವೆ. ಇದರಿಂದಾಗಿ ಈ ದೇವಾಲಯವು ದಕ್ಷಿಣ ಭಾರತದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದ್ದು, ಈ ದೇವಾಲಯವನ್ನು ’ತ್ರಿಕವಿಯೂರ್ ಮಹದೇವ ದೇವಾಲಯ’ ಎಂದೂ ಕರೆಯಲಾಗುತ್ತದೆ. ಇಲ್ಲಿಗೆ ಬರುವ ಭಕ್ತಾದಿಗಳು ಭಕ್ತಿಯಿಂದ ಶಿವ ಹಾಗೂ ಪಾರ್ವತಿ ದೇವಿಯನ್ನು ಕ್ಷಮಾದಾನ ನೀಡುವಂತೆ ನಿತ್ಯವೂ ಪ್ರಾರ್ಥಿಸುತ್ತಾರೆ.

ಡಿಸೆಂಬರ್ ಹಾಗೂ ಜನವರಿ ತಿಂಗಳುಗಳಲ್ಲಿ ನಡೆಯುವ ಉತ್ಸವದ ಸಂದರ್ಭದಲ್ಲಿ ಹಾಗೂ ಹನುಮಾನ್ ಜಯಂತಿಯ ಸಮಯದಲ್ಲಿ ಕವಿಯೂರ್ ದೇವಾಲಯಕ್ಕೆ ಭಕ್ತಾದಿಗಳ ಮಹಾಪೂರವೇ ಹರಿದು ಬರುತ್ತದೆ. ದೇವಾಲಯದ ಗೋಡೆಯ ಮೇಲೆ ಕೆತ್ತಲಾದ ಪ್ರಾಚೀನ ಕೆತ್ತನೆಗಳು 16 ನೇ ಶತಮಾನದ ಇತಿಹಾಸವನ್ನು ಹೇಳುತ್ತವೆ. ಅಲ್ಲದೇ ಈ ಕೆತ್ತನೆಗಳು ರಾಮಾಯಣ ಹಾಗೂ ಮಹಾಭಾರತದ ಕಥೆಗಳನ್ನು ಬಿಂಬಿಸುವ ಕೆತ್ತನೆಗಳನ್ನೂ ಒಳಗೊಂಡಿದೆ. ಈ ದೇವಾಲಯದಲ್ಲಿ ಕಟ್ಟಡದಲ್ಲಿ ಮರದ ಹೇರಳ ಬಳಕೆಯನ್ನು ಗಮನಿಸಬಹುದು. ಈ ದೇವಾಲಯದ ಅನನ್ಯ ರಚನೆ, ಪುರಾತನ ಕೆತ್ತನೆಗಳು ನಿಜವಾದ ವಾಸ್ತುಕಲೆಯನ್ನು ತೋರಿಸುತ್ತದೆ. ಈ ಕೆತ್ತನೆಗಳು ಪ್ರವಾಸಿಗರಲ್ಲಿ ಕುತೂಹಲ ಕೆರಳಿಸುವುದರ ಜೊತೆಗೆ ಇನ್ನಷ್ಟು ಆಕರ್ಷಿಸುತ್ತವೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu