ತೆಕ್ಕಾಡಿಯಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ವಂದಿಪೆರಿಯಾರ್ ಸಣ್ಣ ಪಟ್ಟಣವಾದರೂ ಪೆರಿಯಾರ್ ನದಿಯ ಸಂಸ್ಕೃತಿ ಹಾಗೂ ಸಮೃದ್ಧಗೊಂಡ ಕೃಷಿ ಪ್ರವಾಸಿಗರನ್ನು ಸೆಳೆಯುವಲ್ಲಿ ಪಾತ್ರವಹಿಸುತ್ತದೆ. ಈ ಹಸಿರು ಹೊದಿಕೆಯ ಪ್ರದೇಶದ ಮೂಲಕ ಸಾಗುವಾಗ ಅತ್ಯುತ್ತಮ ಹಸಿರು, ಹಿತಕರವಾದ ಗಾಳಿ, ವಿಶಾಲವಾದ ಚಹಾ ತೋಟಗಳು ಮನಸ್ಸಿನಲ್ಲೊಂದು ಸುಂದರ ಭಾವವನ್ನುಂಟುಮಾಡುತ್ತದೆ. ಈ ಪಟ್ಟಣಕ್ಕೆ ಮಸಾಲೆ ಉತ್ಪನ್ನಗಳ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಮನ್ನಣೆ ಸಿಕ್ಕಿದೆ. ಈ ಪ್ರದೇಶದಲ್ಲಿ ಸರ್ಕಾರ ನಿರ್ಮಿಸಿದ ಕೃಷಿ ಫಾರ್ಮಿನ ಹೂ ಗಾರ್ಡನ್, ಹೂವಿನ ಹಾಸಿಗೆಗಳ ರಮಣೀಯ ನೋಟವನ್ನು ನೀಡುತ್ತದೆ. ಪ್ರವಾಸಿಗರಿಗೆ ಮತ್ತು ಹನಿಮೂನ್ ಜೋಡಿಗಳಿಗೆ ವಸತಿ ಸೌಕರ್ಯಕ್ಕೆ ಉತ್ತಮ ರೆಸಾರ್ಟಗಳು ಹಾಗೂ ಬಜೆಟ್ ಹೋಮ್ ಸ್ಟೆಗಳು ಲಭ್ಯವಿದೆ.


Click it and Unblock the Notifications