Search
  • Follow NativePlanet
Share
ಮುಖಪುಟ » ಸ್ಥಳಗಳು » ತೆಕ್ಕಡಿ » ಹವಾಮಾನ

ತೆಕ್ಕಡಿ ಹವಾಮಾನ

ವಿಪರೀತ ಹವಾಗುಣ ವೈಪರಿತ್ಯ ಸ್ಥಿತಿಯಿಂದಾಗಿ, ಬೇಸಿಗೆ ಮತ್ತು ಮಾನ್ಸೂನ್ ಎರಡೂ ತೆಕ್ಕಾಡಿ ಭೇಟಿಗೆ ಸೂಕ್ತ ಸಮಯ ಅಲ್ಲ. ಆದರೆ ವನ್ಯಜೀವಿ ಪ್ರೇಮಿಗಳು ಮತ್ತು ವನ್ಯಜೀವಿ ಛಾಯಾಗ್ರಹಣಕಾರರು ವನ್ಯಜೀವಿ ವೀಕ್ಷಣೆಯ ರೋಮಾಂಚಕತೆಯನ್ನು ಆನಂದಿಸಲು ಬೇಸಿಗೆಯಲ್ಲಿ ಸ್ಥಳಕ್ಕೆ ಭೇಟಿ ನೀಡಬಹುದು. ಚಳಿಗಾಲವು ತೆಕ್ಕಾಡಿ ಭೇಟಿಗೆ ಸೂಕ್ತ ಸಮಯ. ಚಳಿಗಾಲದಲ್ಲಿ ಇಲ್ಲಿಗೆ ಅನೇಕ  ಪಕ್ಷಿಗಳು ವಲಸೆ ಬರುತ್ತವೆಯಾದ್ದರಿಂದ ಈ ಋತು ಪಕ್ಷಿ ವೀಕ್ಷಣೆಗೆ ಸಕಾಲ.

ಬೇಸಿಗೆಗಾಲ

ಬೇಸಿಗೆ ಮಾರ್ಚ್ ತಿಂಗಳಿಂದ  ಆರಂಭಗೊಂಡು ಮೇ ಕೊನೆಯವರೆಗೆ ವಿಸ್ತರಿಸಿದೆ.ಈ ಋತುವು ತೀವ್ರ ಶಾಖವನ್ನು ಹೊಂದಿದ್ದು ಗರಿಷ್ಠ ತಾಪಮಾನ 36 °ಸಿ ಸಾಮಾನ್ಯವಾಗಿರುತ್ತದೆ. ಆದರೂ ಈ  ಸಮಯ ಪ್ರಾಣಿಗಳ ವೀಕ್ಷಣೆಗೆ ಸೂಕ್ತ ಸಮಯ.

ಮಳೆಗಾಲ

ಮುಂಗಾರು ಮಳೆ ಜೂನ್ ನಲ್ಲಿ ಆರಂಭವಾಗಿ ಸೆಪ್ಟೆಂಬರ್ ತನಕ ಮುಂದುವರೆಯುತ್ತದೆ.ಮಾನ್ಸೂನ್ ಉದ್ದಗಲಕ್ಕೂ ವ್ಯಾಪಕ ಮಳೆ ಹೊಂದಿದ್ದು,ಈ ಪ್ರದೇಶದಲ್ಲಿ ಭೂಕುಸಿತಗಳು ಸಾಮನ್ಯವಾಗಿರುತ್ತದೆಯಾದ್ದರಿಂದ ಈ ಸಮಯ ಚಾರಣಕ್ಕೆ ಮತ್ತು ಹೊರಾಂಗಣ  ಚಟುವಟಿಕೆಗಳಿಗೆ ಅಡ್ಡಿಯಾಗಬಹುದು.

ಚಳಿಗಾಲ

ಇಲ್ಲಿ ಚಳಿಗಾಲ ಅಕ್ಟೋಬರ್ ನಿಂದ ಆರಂಭಗೊಂಡು ಫೆಬ್ರವರಿ ತನಕ ಮುಂದುವರೆಯುತ್ತದೆ.ಈ ಋತುವಿನಲ್ಲಿ ಹವಾಮಾನ ಸೌಮ್ಯ ಮತ್ತು ಆಹ್ಲಾದಕರವಾಗಿದ್ದು,ಉಷ್ಣಾಂಶ ಕನಿಷ್ಠ  15°ಸಿ ಇರುವುದರಿಂದ ಪ್ರವಾಸಕ್ಕೆ ಸೂಕ್ತ ಸಮಯ.