ತೆಕ್ಕಾಡಿಯಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಮುರಿಕ್ಕಾಡಿಯು ಉತ್ತಮ ತೋಟ ವೀಕ್ಷಣೆಗೆ ಹೆಸರುವಾಸಿಯಾಗಿದ್ದು ಹತ್ತಿರದ ಪೆರಿಯಾರ್ ವನ್ಯಜೀವಿಗಳ ಅಭಯಾರಣ್ಯಕ್ಕೆ ಹೊಂದಿಕೊಂಡಂತಿದೆ. ಕಾಫಿ, ಟೀ, ಮೆಣಸು ಮತ್ತು ಏಲಕ್ಕಿಗಳನ್ನು ಮುರಿಕ್ಕಾಡಿಯ ತೋಟಗಳಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ ಹಾಗೂ ಮಸಾಲೆ ಪದಾರ್ಥಗಳ ಸುವಾಸನೆ ನೆಡುತೋಪುಗಳ ಮೂಲಕ ಹಾದುಹೋಗುವ ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ಉಂಟುಮಾಡುತ್ತದೆ.
ಇದು ಚಾರಣ ಪ್ರಿಯರಿಗೆ ಮತ್ತು ಕುಟುಂಬ ಸಹಿತ ಪ್ರವಾಸ ಹೋಗುವವರಿಗೆ ನೆಚ್ಚಿನ ತಾಣವಾಗಿದ್ದು, ರುಚಿಕರವಾದ ವೈನ್, ಹಿತಕರವಾದ ಹಸಿರು, ಸುಗಂಧ ತಾಜಾ ಗಾಳಿ, ಪರ್ವತ ಶ್ರೇಣಿಗಳು ಮತ್ತು ಹಸಿರು ನೆಲಹಾಸು ಕಣಿವೆಗಳು ಇಲ್ಲಿನ ವೈಭವಕ್ಕೆ ಸಾಕ್ಷಿಯಾಗಿವೆ. ಈ ಸ್ಥಳದಲ್ಲಿನ ನಯನಮನೋಹರ ಪ್ರಕೃತಿ ಸೌಂದರ್ಯ ನಿಸರ್ಗ ಪ್ರೇಮಿಗಳ ಮತ್ತು ಛಾಯಾಗ್ರಾಹಕರ ಆಸಕ್ತಿಯನ್ನು ಕೆರಳಿಸುತ್ತದೆ.


Click it and Unblock the Notifications