ಬಿದಿರಿನ ರಾಫ್ಟಿಂಗ್ ತೆಕ್ಕಾಡಿಯ ಪ್ರವಾಸಿ ತಾಣಗಳಲ್ಲಿನ ಒಂದು ಮುಖ್ಯ ಆಕರ್ಷಣೆಯಾಗಿದೆ. ಬಿದಿರಿನಿಂದ ಮಾಡಿದ ತೆಪ್ಪದಲ್ಲಿ ನದಿಯ ಉದ್ದಗಲಕ್ಕೂ ವನ್ಯಜೀವಿಗಳನ್ನು ವೀಕ್ಷಿಸುತ್ತಾ ಸಾಗಬಹುದಾಗಿದ್ದು, ಪ್ರತಿ ರಾಫ್ಟಿಂಗ್ ತಂಡವು ಹತ್ತು ಪ್ರಯಾಣಿಕರು ಮತ್ತು ಐದು ಪ್ರವಾಸ ಮಾರ್ಗದರ್ಶಕರು ಜೊತೆಗೆ ಓರ್ವ ಸಶಸ್ತ್ರ ಸಿಬ್ಬಂದಿಗಳನ್ನು ಒಳಗೊಂಡಿದೆ. ಬಿದಿರಿನ ರಾಫ್ಟಿಂಗ್ ಮುಂಜನೆ ೮ ರಿಂದ ಆರಂಭಿಸಿ ಸಂಜೆ 5 ರ ತನಕ ಮುಂದುವರೆಯುತ್ತದೆ, ವಂದನ್ಮೆಡುವಿನಲ್ಲಿ ಬಿದಿರಿನ ರಾಫ್ಟಿಂಗ್ ಇಂದು ಅತ್ಯಂತ ಜನಪ್ರಿಯ ಹೊರಾಂಗಣ ಸಾಹಸಕಾರಿ ಚಟುವಟಿಕೆ ಆಗಿ ಮಾರ್ಪಟ್ಟಿದೆ.


Click it and Unblock the Notifications