Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀರಂಗಪಟ್ಟಣ » ಆಕರ್ಷಣೆಗಳು » ಕರಿಘಟ್ಟ ದೇವಾಲಯ

ಕರಿಘಟ್ಟ ದೇವಾಲಯ, ಶ್ರೀರಂಗಪಟ್ಟಣ

1

ಪ್ರವಾಸಿಗರು ಇಲ್ಲಿನ  ಕರಿಘಟ್ಟ ದೇವಾಲಯಕ್ಕೆ ಸಮಯಾವಕಾಶ ದೊರೆತರೆ ಭೇಟಿ ಕೊಡಬಹುದು. ಕರಿಘಟ್ಟ ದೇವಾಲಯವು ಕರಿಘಟ್ಟ ಬೆಟ್ಟದ ಮೇಲೆ ನೆಲೆಸಿದ್ದು, ಸಮುದ್ರ ಮಟ್ಟದಿಂದ 2697 ಮೀಟರ್ ಎತ್ತರದಲ್ಲಿದೆ. ಇದು ವೈಕುಂಠ ಶ್ರೀನಿವಾಸ ಅಥವಾ ಭಗವಾನ್ ವಿಷ್ಣುವಿನ ದೇವಾಲಯವಾಗಿದ್ದು, ಇಲ್ಲಿನ ಗರ್ಭಗುಡಿಯಲ್ಲಿ 6 ಅಡಿ ಎತ್ತರ ಕಪ್ಪು ಮೂರ್ತಿಯನ್ನು ನೋಡಬಹುದು. ಈ ಮೂರ್ತಿಯನ್ನು ಭೃಗು ಮಹರ್ಷಿ ಪ್ರತಿಷ್ಟಾಪಿಸಿದರೆಂದು ನಂಬಲಾಗಿದೆ. ಈ ದೇವಾಲಯದ ಗರ್ಭಗುಡಿಯ ಮಧ್ಯದಲ್ಲಿ ವಿಷ್ಣುವಿನ ಮೂರ್ತಿಯಿದ್ದರೆ, ಪದ್ಮಾವತಿ ದೇವಿಯ ಮೂರ್ತಿಯು ಗರ್ಭಗುಡಿಯ ಪಶ್ಚಿಮ ಭಾಗದಲ್ಲಿದೆ.ಪ್ರವಾಸಿಗರು ಈ ದೇವಾಲಯದ ಸಮೀಪದಲ್ಲಿ ಗರುಡನ ಮೂರ್ತಿಯನ್ನು ಮತ್ತು ಭಗವಾನ್ ಮಹಾವಿಷ್ಣುವಿನ ಹೆಜ್ಜೆ ಗುರುತುಗಳನ್ನು ಕಾಣಬಹುದು. ಈ ದೇವಾಲಯದ ಪ್ರಾಂಗಣದಲ್ಲಿ ದೊಡ್ಡ ಕಲ್ಯಾಣ ಮಂಟಪವಿದ್ದು, ಇಲ್ಲಿ ಮದುವೆಯಾಗುವುದರಿಂದ ದಂಪತಿಗಳಿಗೆ ತುಂಬ ಶುಭವಾಗುತ್ತದೆಂಬ ನಂಬಿಕೆ ಮನೆಮಾಡಿದೆ. ಪ್ರವಾಸಿಗರು ಇಲ್ಲಿಂದ ಶ್ರೀರಂಗಪಟ್ಟಣದ ಮತ್ತು ಮೈಸೂರಿನ ಸುಂದರನೋಟವನ್ನು ಹಾಗು ಕಾವೇರಿ ,ಲೋಕಪಾವನಿ ನದಿಗಳು ಕೂಡುವುದನ್ನು ಈ ಬೆಟ್ಟದ ತುದಿಯಿಂದ ನೋಡಬಹುದು. ಈ ದೇವಾಲಯದಲ್ಲಿ ಪ್ರತಿ ವರ್ಷ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ನಡೆಯುವ ರಥೋತ್ಸವವು ಪ್ರವಾಸಿಗರು ಇಲ್ಲಿಗೆ ಭೇಟಿಕೊಡಲು ಪ್ರಶಸ್ತವಾದ  ಸಮಯವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed