Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀರಂಗಪಟ್ಟಣ » ಆಕರ್ಷಣೆಗಳು » ಜಾಮ ಮಸೀದಿ

ಜಾಮ ಮಸೀದಿ, ಶ್ರೀರಂಗಪಟ್ಟಣ

0

ಶ್ರೀರಂಗಪಟ್ಟಣದಲ್ಲಿ ಜಾಮ ಮಸೀದಿಯು ಮಸ್ಜಿದ್ –ಇ – ಅಕ್ಸ ಎಂದೆ ಹೆಸರುವಾಸಿಯಾದ ನೋಡಲೇ ಬೇಕಾದ ಸ್ಥಳವಾಗಿದೆ. ಈ ಮಸೀದಿಯನ್ನು ಟಿಪ್ಪು ಸುಲ್ತಾನನು ಮೈಸೂರನ್ನು ತನ್ನ ವಶಕ್ಕೆ ಪಡೆದ ನಂತರ 1784ರಲ್ಲಿ ಕಟ್ಟಿಸಿದನು. ನಂಬಿಕೆಗಳ ಪ್ರಕಾರ ಟಿಪ್ಪು ಸುಲ್ತಾನ್ ಇಲ್ಲಿನ ಮೊದಲ ಇಮಾಮತ್ ಆಗಿ ಸ್ವತಃ ತಾನೆ ಕಾರ್ಯನಿರ್ವಹಿಸಿದನೆಂದು ಹೇಳಲಾಗುತ್ತದೆ.ಈ ಸ್ಮಾರಕವು ಟಿಪ್ಪುಸುಲ್ತಾನ ನೆಚ್ಚಿನ ತಾಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿತ್ತು. ಎರಡು ಅಂತಸ್ತಿನ ಈ ಮಸೀದಿಯು ಅಪರೂಪದ ಬಿಳಿಯ ಬಣ್ಣದ ಗುಮ್ಮಟವನ್ನು ಹೊಂದಿದೆ. ಜೊತೆಗೆ ಪ್ರಬಲ ಗೋಪುರಗಳನ್ನು ಹಾಗು ಎರಡು ಮಿನಾರ್ ಗಳನ್ನು ಹೊಂದಿದೆ. ಅಲ್ಲದೆ ಈ ಮಸೀದಿಯು 97 ವರ್ಷಗಳಷ್ಟು ಹಳೆಯದಾದೆಂದು ಹೇಳಲಾಗುವ ಟ್ರಿಕ್ ಟಾಕಿಂಗ್ ಗಡಿಯಾರವನ್ನು ಹೊಂದಿದೆ. ಇದು ಇಂದಿಗು ಸುಸ್ಥಿತಿಯಲ್ಲಿದ್ದು, ವೇಳೆ ತೋರಿಸುತ್ತದೆ.  ಇದರ ಪಶ್ಚಿಮ ಭಾಗದಲ್ಲಿ ಒಂದು ಹಜಾರವಿದ್ದು ಇದು ಪ್ರಾರ್ಥನೆಯ ಮೊಗಸಾಲೆಯನ್ನು ಮತ್ತು ಮಸೀದಿಯ ಮಿಹ್ರಾಬನ್ನು( ಮೆಕ್ಕದ ದಿಕ್ಕು ಸೂಚಿಸುವ ತಾಣ) ಹೊಂದಿದೆ.ಮಸೀದಿಯು ಎತ್ತರವಾದ ಬುನಾದಿಯ ಮೇಲೆ ನಿರ್ಮಾಣಗೊಂಡಿದ್ದು, ಮುಂದೆ ತೆರೆದ ಅಂಗಳವಿದೆ. ಗುಮ್ಮಟಗಳನ್ನು ಅಷ್ಟಕೋನಾಕೃತಿಯ ಮಿನಾರುಗಳ ಮೇಲೆ ಸ್ಥಾಪಿಸಲಾಗಿದೆ.  ಈ ಮಿನಾರುಗಳಿಗೆ ಪಾರಿವಾಳದ ಕಿಂಡಿಗಳನ್ನು ಮಾಡಲಾಗಿದೆ. 200 ಮೆಟ್ಟಿಲು ಹತ್ತಿ ಮಿನಾರಿನ ತುದಿಗೆ ಹೋದರೆ ಅಲ್ಲಿಂದ ಸುತ್ತಲ ಸುಂದರ ಪ್ರದೇಶಗಳನ್ನು ನೋಡಿ ಕಣ್ತುಂಬಿಸಿಕೊಳ್ಳಬಹುದು.ಇಲ್ಲಿ 50 ವರ್ಷಗಳ ಕಾಲ ಪ್ರಾರ್ಥನೆ ಸಲ್ಲಿಸಿದ ಲೇಟ್ ಅಬ್ದುಲ್ ಹಫೀಝ್ ಜುನೈದಿಯವರು ಈ ಮಸೀದಿಯ ಏಕೈಕ ಇಮಾಮ್ ಎಂದು ಹೇಳುತ್ತಾರೆ.  ಪ್ರವಾಸಿಗರು ಇಲ್ಲಿಗೆ ಭೇಟಿಕೊಟ್ಟಾಗ ಅಲ್ಲಾನ 99 ಹೆಸರುಗಳನ್ನು ಮುದ್ರಿಸಿರುವ ಶಾಸನವೊಂದನ್ನು ನೋಡಬಹುದು. ಈ ಮಸೀದಿಯ ಆವರಣದಲ್ಲಿ ಒಂದು ಮದ್ರಸ ಎಂದು ಕರೆಯಲಾಗುವ ಧಾರ್ಮಿಕ ಶಿಕ್ಷಣ ಸಂಸ್ಥೆಯಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed