ಶಿಮ್ಲಾದಿಂದ 11 ಕಿ ಮಿ ದೂರದಲ್ಲಿರುವ ತಾರಾ ದೇವಿ ದೇವಸ್ಥಾನವು ಶೋಘಿಯ ಜನಪ್ರಿಯ ಧಾರ್ಮಿಕ ಕೇಂದ್ರಗಳಲ್ಲೊಂದಾಗಿದೆ. ತಾರಾ ಪರ್ವತದ ಮೇಲೆ ನೆಲೆಸಿರುವ ಈ ದೇವಾಲಯದ ಅಧಿ ದೇವತೆಯಾದ ತಾರಾ ದೇವಿಯು ಟಿಬೆಟಿಯನ್ ಬೌದ್ಧರ ಪ್ರಮುಖ ದೇವತೆಯಾಗಿದ್ದು, ಇವಳು ಸ್ತ್ರೀ ಶಕ್ತಿಯ ದ್ಯೋತಕವಾದ, ಹಿಂದೂ ದೇವಿ ದುರ್ಗೆಯ ಒಂಬತ್ತು...
ಶೋಘಿಯ ಪ್ರಾಚೀನ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಹನುಮಾನ್ ದೇವಾಲಯವು, ಹಿಂದೂ ವಾನರ ದೇವ ಆಂಜನೇಯನ ಅವತಾರವಾಗಿದ್ದು, ಈ ದೇವಾಲಯವು ತನ್ನ ಗೋಡೆಯ ಮೇಲೆ ಹಿಂದೂ ಪುರಾಣದ ದೃಶ್ಯಗಳನ್ನು ಪ್ರತಿನಿಧಿಸುವ ವರ್ಣಚಿತ್ರಗಳಿಂದ ಜನಪ್ರಿಯವಾಗಿದೆ.
ಸಮುದ್ರ ಮಟ್ಟದಿಂದ 8500 ಅಡಿ ಎತ್ತರದಲ್ಲಿರುವ ಕಾಳಿ ದೇವಸ್ಥಾನವೂ ಶೋಘಿಯ ಪ್ರಮುಖ ದೇವಸ್ಥಾನಗಳಲ್ಲೊಂದಾಗಿದ್ದು ಇದು 150 ಕ್ಕೂ ಹೆಚ್ಚು ವರ್ಷಗಳ ಹಿಂದಿನದೆಂದು ನಂಬಲಾಗಿದೆ. ಈ ದೇವಸ್ಥಾನವು ಸ್ತ್ರೀ ಶಕ್ತಿ ದ್ಯೋತಕವಾದ ದುರ್ಗೆಯ ರೂಪವಾದ ಕಾಳಿ, ಶ್ಯಾಮಲಾ, ಕಾಳಿ ಅವತಾರವಾದ ಚಂಡಿ ಕಾಳಿ ಈ ಮೂರೂ ದೇವತೆಗಳ...