ತುಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ತುಂಗಾ ಅಣೆಕಟ್ಟು ಅಧ್ವುತವಾದ ಸ್ಥಳ. ತುಂಗಾ ಡ್ಯಾಂ 535 ಮೀಟರ್ ಉದ್ದವಿದೆ. ಸಕ್ರೆಬೈಲು ಆನೆಶಿಬಿರ ತುಂಗಾ ಡ್ಯಾಂನಿಂದ ಕೇವಲ 3 ಕಿಲೋಮೀಟರ್ ಅಂತರದಲ್ಲಿದೆ.
ತುಂಗಾ ಡ್ಯಾಂ ಇರುವುದು ತೀರ್ಥಹಳ್ಳಿ ಮತ್ತು ಶಿವಮೊಗ್ಗದ ನಡುವಿನ ಗಾಜನೂರು ಸ್ಥಳದಲ್ಲಿದೆ. ವ್ಯವಸ್ಥಿತವಾಗಿ ನಿಭಾಯಿಸಲಾಗುತ್ತಿರುವ ತುಂಗಾ ಡ್ಯಾಂ ಕುಟುಂಬ ಸಮೇತರಾಗಿ ಭೇಟಿ ನೀಡುವ ವಿಹಾರ ತಾಣ.
ಶಿವಮೊಗ್ಗ ಸಿಟಿಯಿಂದ ಕೇವಲ 10 ಕಿಲೋ ಮೀಟರ್ ದೂರದಲ್ಲಿರುವ ಡ್ಯಾಂ ಶಿವಮೊಗ್ಗ ತೀರ್ಥಹಳ್ಳಿ ಮಾರ್ಗವಾಗಿ 20 ನಿಮಷದ ಪ್ರಯಾಣ. ಸ್ಥಳೀಯ ಬಸ್ ಸೌಕರ್ಯಗಳು ತುಂಗಾ ಡ್ಯಾಂಗಿವೆ. ಹತ್ತಿರದ ರೈಲ್ವೇ ನಿಲ್ದಾಣ ಶಿವಮೊಗ್ಗ ನಗರದಿಂದ 12 ಕಿಲೋ ಮೀಟರ್ ದೂರದಲ್ಲಿದೆ.


Click it and Unblock the Notifications