ಪಕ್ಷಿಪ್ರಿಯರು ಮಂಡಗದ್ದೆ ಪಕ್ಷಿಧಾಮವನ್ನು ಒಮ್ಮೆ ಭೇಟಿ ನೀಡಲೇಬೇಕು. ತುಂಗಾ ನದಿಯ ಮಧ್ಯದಲ್ಲಿರುವ ದ್ವೀಪ ವಿವಿಧ ಪ್ರಬೇಧದ ಪಕ್ಷಿಗಳಿಗೆ ಆಹಾರ ನೀಡುತ್ತದೆ. ಮಂಡಗದ್ದೆಗೆ ಹೋಗುವ ದಾರಿಯಲ್ಲಿ ಸಕ್ರೆಬೈಲು ಆನೆ ಶಿಬಿರ ಮತ್ತು ಗಾಜನೂರು ಡ್ಯಾಂ ನೋಡಬಹುದು. 1.14 ಎಕರೆ ಪ್ರದೇಶದಲ್ಲಿ ಹಬ್ಬಿರುವ ಪಕ್ಷಿಧಾಮ ವಿಹಾರಕ್ಕೆ ಮತ್ತು ಶಿಬಿರಕ್ಕೆ ಹೇಳಿ ಮಾಡಿಸಿದ ಜಾಗ.
ಪಕ್ಷಿಧಾಮದ ಒಳಭಾಗದಲ್ಲಿರುವ ಗೋಪುರದಿಂದ ವಿವಿಧ ಪಕ್ಷಿಗಳನ್ನು ಆರಾಮವಾಗಿ ವೀಕ್ಷಿಸಬಹುದು. ಪಕ್ಷಿ ವೀಕ್ಷಣೆ ಮತ್ತು ನಿಸರ್ಗ ಸೌಂದರ್ಯ ಆಸ್ವಾದನೆಗೆ ಅರಣ್ಯ ಇಲಾಖೆ ದೋಣಿ ವಿಹಾರದ ವ್ಯವಸ್ಥೆ ಕಲ್ಪಿಸಿದೆ. ಮಂಡಗದ್ದೆ ಪಕ್ಷಿಧಾಮವನ್ನು ಭೇಟಿ ಮಾಡಲು ಜುಲೈ ನಿಂದ ಸೆಪ್ಟೆಂಬರ್ ತಿಂಗಳು ಸೂಕ್ತವಾದ ಸಮಯ.
ಶಿವಮೊಗ್ಗದಿಂದ ಮಂಡಗದ್ದೆ 30 ಕಿಲೋ ಮೀಟರ್ ದೂರದಲ್ಲಿದೆ. ಹತ್ತಿರದ ನಗರಗಳಿಗೆ ಬಸ್ ಸೌಕರ್ಯವಿದೆ. ಮಾಲೂರ್ ರೈಲ್ವೇ ನಿಲ್ದಾಣ 11 ಕಿಲೋ ಮೀಟರ್ ದೂರದಲ್ಲಿದೆ. ಹತ್ತಿರದ ವಿಮಾನನಿಲ್ದಾಣವೆಂದರೆ ಮಂಗಳೂರು. ಮಂಡಗದ್ದೆಯನ್ನು ತಲುಪಲು ಖಾಸಗಿ ಕ್ಯಾಬ್ಸ್ ಅಥವಾ ಇತರೆ ವಾಹನ ಸೌಲಭ್ಯಗಳು ಶಿವಮೊಗ್ಗ ಮತ್ತು ತೀರ್ಥಹಳ್ಳಿಯಿಂದ ಇವೆ.