ಗುಡವಿ ಪಕ್ಷಿಧಾಮ ದಟ್ಟವಾದ ಕಾಡುಗಳ ನೆರಳನ್ನು ಹೊಂದಿದ್ದು ತರಹೇವಾರಿ ಪಕ್ಷಿ ಪ್ರಬೇಧಗಳನ್ನು ಹೊಂದಿದೆ. ಬಗೆ ಬಗೆಯ ಪಕ್ಷಿಗಳ ಅಧ್ಯಯನ ಕೈಗೊಳ್ಳುವ ಪಕ್ಷಿ ತಜ್ನರಿಗೆ ಇದೊಂದು ಸ್ವರ್ಗ. ಜೂನ್ ನಿಂದ ಡಿಸೆಂಬರ್ ತಿಂಗಳವರೆಗೆ ಇಲ್ಲಿ ವಲಸೆ ಬರುವ ಹಕ್ಕಿಗಳನ್ನು ಕಾಣಬಹುದು.
ನೈಸರ್ಗಿಕ ಕೆರೆಯ ಮೋಹಕವಾದ ಸೌಂದರ್ಯ ಗುಡವಿ ಪಕ್ಷಿಧಾಮದ ಮತ್ತೊಂದು ಆಕರ್ಷಣೆ. 0.73 ಸ್ಕ್ವೇರ್ ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಹಬ್ಬಿಕೊಂಡಿರುವ ಗುಡವಿ ಪಕ್ಷಿಧಾಮ ಗ್ರೇ ಹಿರೋನ್, ಜಂಗಲ್ ಬೌಲ್, ಇಂಡಿಯನ್ ಶಾಗ್, ಕಪ್ಪು ತಲೆಯ ಕ್ರೇನ್, ಲಿಟಲ್ ಕೋರ್ಮೋರಂಟ್, ಪರೈ ಕೈಟ್ಸ್ ಮತ್ತು ಬಿಳಿಯ ಇಬಿಸ್ ಪಕ್ಷಿಗಳಿಗೆ ಆವಾಸ ಸ್ಥಾನವಾಗಿದೆ. ಕರ್ನಾಟಕದ ಐದು ಪ್ರಸಿದ್ದ ಪಕ್ಷಿಧಾಮಗಳಲ್ಲಿ ಗುಡವಿಯೂ ಒಂದು.
ಗುಡವಿ ಪಕ್ಷಿಧಾಮ ಶಿವಮೊಗ್ಗದಿಂದ 15 ಕಿಲೋ ಮೀಟರ್ ದೂರದಲ್ಲಿದೆ ಮತ್ತು ಸಾಗರದಿಂದ 41 ಕಿಲೋ ಮೀಟರ್ ದೂರದಲ್ಲಿದೆ. ಹತ್ತಿರದ ರೈಲ್ವೇ ನಿಲ್ದಾಣ ಶಿವಮೊಗ್ಗದಲ್ಲಿದೆ ಮತ್ತು ಹತ್ತಿರದ ವಿಮಾನ ನಿಲ್ದಾಣ ಮಂಗಳೂರಿನಲ್ಲಿದೆ. ಗುಡವಿ ಪಕ್ಷಿಧಾಮಕ್ಕೆ ಯೋಗ್ಯ ರಸ್ತೆ ಸೌಲಭ್ಯಗಳಿವೆ. ಹತ್ತಿರದ ನಗರಗಳಾದ ಶಿರಸಿಯಿಂದ ಕೇವಲ 2 ತಾಸು ಪ್ರಯಾಣಿಸಿದರೆ ಗುಡವಿ ತಲುಪಬಹುದು.